Masala jolada rotti recipe Kannada |
Masala jolada rotti recipe Kannada | ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ
ಮಸಾಲಾ ಜೋಳ ರೊಟ್ಟಿ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1.5 ಕಪ್ ಜೋಳದ ಹಿಟ್ಟು
- 1.25 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ)
- 2 - 3 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
- 1 ಸಣ್ಣಗೆ ಹೆಚ್ಚಿದ ಈರುಳ್ಳಿ
- 1 ಮಧ್ಯಮ ಗಾತ್ರದ ಕ್ಯಾರಟ್
- 1ಸಣ್ಣ ಗಾತ್ರದ ಸೌತೆಕಾಯಿ
- 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವು
- 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
- 1 ಚಮಚ ಜೀರಿಗೆ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ರೊಟ್ಟಿ ಕಾಯಿಸಲು
ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ.
- ಅದಕ್ಕೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರಟ್ ಮತ್ತು ತುರಿದ ಸೌತೆಕಾಯಿ ಸೇರಿಸಿ.
- ನಂತರ ಸಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿರು ಮೆಣಸಿನಕಾಯಿ ಮತ್ತೊ ಜೀರಿಗೆ ಸೇರಿಸಿ.
- ಉಪ್ಪನ್ನು ಸೇರಿಸಿ ಒಮ್ಮೆ ಕಲಸಿ.
- ಅಗತ್ಯವಿದ್ದಷ್ಟು ಬೆಚ್ಚಗಿನ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
- ರೊಟ್ಟಿ ಮಾಡುವ ಕಾವಲಿಗೆ ಎಣ್ಣೆ ಹಚ್ಚಿ, ದೊಡ್ಡ ಕಿತ್ತಳೆ ಗಾತ್ರದ ಹಿಟ್ಟು ತೆಗೆದುಕೊಳ್ಳಿ.
- ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ವೃತ್ತಾಕಾರದ ತೆಳುವಾದ ರೊಟ್ಟಿಯನ್ನು ತಟ್ಟಿ.
- ಆಮೇಲೆ ಕಾವಲಿಯನ್ನು ಸ್ಟವ್ ಮೇಲಿರಿಸಿ, ಮೇಲಿನಿಂದ ಒಂದು ಚಮಚ ಎಣ್ಣೆ ಹಾಕಿ.
- ಮುಚ್ಚಳ ಮುಚ್ಚಿ ಬೇಯಿಸಿ.
- ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ.
- ಚಟ್ನಿಯೊಂದಿಗೆ ಬಡಿಸಿ.