Bele paddu recipe in kannada | ಬೇಳೆ ಪಡ್ಡು ಮಾಡುವ ವಿಧಾನ
ಬೇಳೆ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ದೋಸೆ ಅಕ್ಕಿ
- 2 ಟೇಬಲ್ ಚಮಚ ಉದ್ದಿನ ಬೇಳೆ
- 2 ಟೇಬಲ್ ಚಮಚ ತೊಗರಿ ಬೇಳೆ
- 2 ಟೇಬಲ್ ಚಮಚ ಹೆಸರು ಬೇಳೆ
- 2 ಟೇಬಲ್ ಚಮಚ ಕಡ್ಲೇ ಬೇಳೆ
- 2 ಟೇಬಲ್ ಚಮಚ ಮಸೂರ್ ಬೇಳೆ
- 1/4 ಕಪ್ ಅವಲಕ್ಕಿ
- 2 - 4 ಒಣಮೆಣಸಿನಕಾಯಿ
- ಸಣ್ಣ ತುಂಡು ಶುಂಠಿ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಈರುಳ್ಳಿ
- ಸ್ವಲ್ಪ ಕರಿಬೇವಿನಸೊಪ್ಪು
- ಸ್ವಲ್ಪ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು.
ಬೇಳೆ ಪಡ್ಡು ಮಾಡುವ ವಿಧಾನ:
- ಅಕ್ಕಿ ಮತ್ತು ಬೇಳೆಗಳನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
- ಅವಲಕ್ಕಿಯನ್ನು ತೊಳೆದು 10 ನಿಮಿಷ ನೆನೆಯಲು ಬಿಡಿ.
- 4 - 5 ಗಂಟೆಗಳ ನಂತರ ನೀರು ಬಗ್ಗಿಸಿ ಅಕ್ಕಿ ಮತ್ತು ಬೇಳೆಗಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. ಒಣಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಕೊತ್ತಂಬರಿ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.
- ನೆನೆಸಿದ ಅವಲಕ್ಕಿಯನ್ನು ಸೇರಿಸಿ ಅರೆಯಿರಿ.
- ಅರೆದ ಹಿಟ್ಟನ್ನು ಪಾತ್ರೆಗೆ ಹಾಕಿ, 7 - 8 ಘಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ.
- ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಚೆನ್ನಾಗಿ ಕಲಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ಉದ್ದಿನ ದೋಸೆ ಹಿಟ್ಟಿನ ದೋಸೆ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ.
- ಗುಳಿಯಪ್ಪ ಅಥವಾ ಪಡ್ಡು ಪ್ಯಾನ್ ಬಿಸಿ ಮಾಡಿ. ಸ್ವಲ್ಪ ಎಣ್ಣೆ ಹಾಕಿ, ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿ.
- ಮೇಲಿನಿಂದ ಎಣ್ಣೆ ಹಾಕಿ. ತಿರುವಿ ಹಾಕಿ, ಇನ್ನೊಂದು ಬದಿಯೂ ಕಾಯಿಸಿ.
- ಬಿಸಿ ಬಿಸಿ ಪಡ್ಡುವನ್ನು ಕಾಯಿ ಚಟ್ನಿಯೊಂದಿಗೆ ಬಡಿಸಿ.