Kottambari soppu rice recipe in Kannada | ಕೊತ್ತಂಬರಿ ಸೊಪ್ಪು ರೈಸ್ ಮಾಡುವ ವಿಧಾನ
ಕೊತ್ತಂಬರಿ ಸೊಪ್ಪು ರೈಸ್ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/2 ಕಪ್ ಅಕ್ಕಿ (ಸೋನಾ ಮಸೂರಿ)
- 1 ಈರುಳ್ಳಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 2 ಟೇಬಲ್ ಸ್ಪೂನ್ ಗೋಡಂಬಿ
- 1/4 ಟೀಸ್ಪೂನ್ ಅರಿಶಿನ ಪುಡಿ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1/2 ಟೀಸ್ಪೂನ್ ಸಕ್ಕರೆ
- 1 - 2 ಟೀಸ್ಪೂನ್ ನಿಂಬೆಹಣ್ಣಿನ ನಿಂಬೆರಸ
- 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 2 - 3 ಹಸಿರು ಮೆಣಸಿನಕಾಯಿ
- ಒಂದು ಹಿಡಿ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ತೆಂಗಿನತುರಿ
- ಸಣ್ಣ ಚೂರು ಶುಂಠಿ
ಕೊತ್ತಂಬರಿ ಸೊಪ್ಪು ರೈಸ್ ಮಾಡುವ ವಿಧಾನ:
- ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ.
- ಒಂದು ಮಿಕ್ಸಿ ಜಾರ್ ನಲ್ಲಿ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ತೆಂಗಿನತುರಿ ಮತ್ತು ಶುಂಠಿ ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆದಿಟ್ಟುಕೊಳ್ಳಿ.
- ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಗೋಡಂಬಿ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.
- ಸಾಸಿವೆ ಸಿಡಿದಮೇಲೆ, ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಮೇಲೆ ಅರೆದ ಮಸಾಲೆ ಸೇರಿಸಿ.
- ಉಪ್ಪು, ಸಕ್ಕರೆ ಮತ್ತು ಅರಿಶಿನ ಸೇರಿಸಿ.
- ಚೆನ್ನಾಗಿ ಮಗುಚಿ, ಒಂದೆರಡು ನಿಮಿಷ ಕುದಿಸಿ.
- ನಂತರ ಬೇಯಿಸಿದ ಅನ್ನ ಸೇರಿಸಿ.
- ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
- ಬೇಕಾದಲ್ಲಿ ಒಂದೆರಡು ಚಮಚ ನಿಂಬೆರಸ ಸೇರಿಸಬಹುದು. ಬೆಳಿಗ್ಗಿನ ತಿಂಡಿಗೆ ಅಥವಾ ಲಂಚ್ ಬಾಕ್ಸ್ ಗೆ ಬಹಳಚೆನ್ನಾಗಿರುತ್ತದೆ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)