ಸೋಮವಾರ, ಡಿಸೆಂಬರ್ 9, 2019

Nimbe hannina sippe recipes in Kannada

Nimbe hannina sippe recipes in Kannada | ನಿಂಬೆಹಣ್ಣಿನ ಸಿಪ್ಪೆಯ ಅಡುಗೆ ಮತ್ತು ಉಪಯೋಗಗಳು


ನಿಂಬೆಹಣ್ಣಿನ ಸಿಪ್ಪೆಯ ಅಡುಗೆ ವಿಡಿಯೋ

ಉಪ್ಪಿನಕಾಯಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 4 ನಿಂಬೆಹಣ್ಣಿನ ಸಿಪ್ಪೆ
  2. 1 - 2 ನಿಂಬೆಹಣ್ಣು
  3. 2 - 3 ಟೇಬಲ್ ಚಮಚ ಉಪ್ಪು 
  4. 2 ಟೀಸ್ಪೂನ್ ಅಚ್ಚಖಾರದಪುಡಿ
  5. 1/4 ಟೀಸ್ಪೂನ್ ಅರಿಶಿನ ಪುಡಿ
  6. ಒಂದು ದೊಡ್ಡ ಚಿಟಿಕೆ ಇಂಗು
  7. 1 ಟೇಬಲ್ ಚಮಚ ಅಡುಗೆ ಎಣ್ಣೆ
  8. 1/2 ಟೀಸ್ಪೂನ್ ಸಾಸಿವೆ
  9. 2 ಕರಿಬೇವಿನ ಎಲೆ

ಚಟ್ನಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1 ನಿಂಬೆಹಣ್ಣಿನ ಸಿಪ್ಪೆ
  2. 1 - 2 ಹಸಿಮೆಣಸಿನಕಾಯಿ
  3. 2 ಟೀಸ್ಪೂನ್ ಉದ್ದಿನಬೇಳೆ
  4. 1/2 ಕಪ್ ತೆಂಗಿನತುರಿ
  5. 1 ಟೀಸ್ಪೂನ್ ಅಡುಗೆ ಎಣ್ಣೆ
  6. 1/2 ಟೀಸ್ಪೂನ್ ಸಾಸಿವೆ
  7. 1 ಒಣಮೆಣಸು
  8. ಒಂದು ದೊಡ್ಡ ಚಿಟಿಕೆ ಇಂಗು

ಟೀ ಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1/2 ಟೀಸ್ಪೂನ್ ಕತ್ತರಿಸಿದ ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ)
  2. 1/2 ಟೀಸ್ಪೂನ್ ಕತ್ತರಿಸಿದ ಶುಂಠಿ
  3. ಸ್ವಲ್ಪ ಪುದಿನ ಎಲೆ

 ಉಪ್ಪಿನಕಾಯಿ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
  2. ಒಂದು ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಾಕಿ ಉಪ್ಪು ಸೇರಿಸಿ. 
  3. ಜೊತೆಗೆ ಅಚ್ಚಖಾರದ ಪುಡಿ ಮತ್ತು ಅರಿಶಿನ ಸೇರಿಸಿ. 
  4. ಮೇಲಿನಿಂದ ಒಂದು ದೊಡ್ಡ ನಿಂಬೆ ಹಣ್ಣಿನಿಂದ ತೆಗೆದ ರಸ ಸೇರಿಸಿ ಚೆನ್ನಾಗಿ ಕಲಸಿ. ಕೈ, ಚಮಚ ಮತ್ತು ಪಾತ್ರೆಯಲ್ಲಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಿ. 
  5. ಬೇಕೆನಿಸಿದರೆ  ಇನ್ನೊಂದು ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು  ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ. 
  6. ಮುಚ್ಚಳ ಮುಚ್ಚಿ ಏಳು ದಿನ ಇಡಿ. ದಿನಕ್ಕೊಮ್ಮೆ ನೀರಿನ ಪಸೆ ಇಲ್ಲದ ಚಮಚದಲ್ಲಿ ಮಗುಚುತ್ತಿರಿ.  
  7. ಏಳರಿಂದ ಹತ್ತು ದಿನದ ನಂತರ ಬೇಕಾದಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಉಪ್ಪಿನಕಾಯಿ ಸವಿಯಲು ಸಿಧ್ಧ. 

ಚಟ್ನಿ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆಯನ್ನು ಉಪ್ಪಿನ ಡಬ್ಬದಲ್ಲಿ ಏಳರಿಂದ ಹತ್ತು ದಿನ ಹಾಕಿಡಿ. 
  2. ಉದ್ದಿನಬೇಳೆ ಮತ್ತು ಮೆಣಸಿನಕಾಯಿಯನ್ನು ಹುರಿಯಿರಿ. 
  3. ಉಪ್ಪಿನಲ್ಲಿ ಹಾಕಿದ ಸಿಪ್ಪೆ, ಉದ್ದಿನಬೇಳೆ, ಮೆಣಸಿನಕಾಯಿ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  4. ಪಾತ್ರೆಗೆ ಬಗ್ಗಿಸಿ ಒಗ್ಗರಣೆ ಕೊಡಿ.ಅನ್ನ ಅಥವಾ ದೋಸೆಯೊಂದಿಗೆ ಬಡಿಸಿ. 

ಟೀ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ), ಶುಂಠಿ ಮತ್ತು ಪುದಿನವನ್ನು ಅರ್ಧ ಕಪ್ ನೀರಿನಲ್ಲಿ ಒಂದು ನಿಮಿಷ ಕುದಿಸಿ.
  2. ಶೋಧಿಸಿ ಕುಡಿಯಿರಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...