ಸೋಮವಾರ, ಡಿಸೆಂಬರ್ 30, 2019

How to store green peas in kannada | ಹಸಿಬಟಾಣಿಯನ್ನು ತುಂಬ ದಿನ ಇಡುವುದು ಹೇಗೆ?

How to store green peas in kannada

How to store green peas in kannada | ಹಸಿಬಟಾಣಿಯನ್ನು ತುಂಬ ದಿನ ಇಡುವುದು ಹೇಗೆ?


ಹಸಿಬಟಾಣಿಯನ್ನು ಶೇಖರಿಸುವ ವಿಡಿಯೋ

ಹಸಿಬಟಾಣಿಯನ್ನು ಶೇಖರಿಸುವ ಸಲಹೆಗಳು:

  1. ಅಗತ್ಯವಿದ್ದಷ್ಟು ಹಸಿಬಟಾಣಿಯನ್ನು ಸುಲಿದು ತೆಗೆದುಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ. 
  3. ಕುದಿಯಲು ಶುರು ಆದ ಮೇಲೆ  ಸುಲಿದ ಬಟಾಣಿ ಹಾಕಿ.
  4. ಒಂದು ನಿಮಿಷ ಅಥವಾ ಬಟಾಣಿ ಎಲ್ಲ ಮೇಲೆ ಬರುವವರೆಗೆ ಕುದಿಸಿ, ಕೂಡಲೇ ಸ್ಟವ್ ಆಫ್ ಮಾಡಿ. 
  5. ನಂತ್ರ  ನೀರನ್ನು ಬಗ್ಗಿಸಿ. 
  6. ಮೇಲಿನಿಂದ ಸ್ವಲ್ಪ ನೀರನ್ನು ಸುರಿಯಿರಿ. ಹೀಗೆ ಮಾಡುವುದರಿಂದ ಜಾಸ್ತಿ ಬೇಯಿಸುವುದನ್ನು ತಪ್ಪಿಸಬಹುದು. 
  7. ಆಮೇಲೆ ಒಂದು ಬಟ್ಟೆಯ ಮೇಲೆ ಹರಡಿ. 
  8. ಬಿಸಿ ಆರಿದ ಮೇಲೆ ಬಾಕ್ಸ್ ಅಥವಾ ಜಿಪ್ ಲಾಕ್ ಕವರ್ ನಲ್ಲಿ ಹಾಕಿ ಫ್ರೀಜರ್ನಲ್ಲಿಡಿ (ಫ್ರಿಡ್ಜ್ ನ ಮೇಲ್ಭಾಗ).  
  9. ಒಂದು ವರ್ಷದವರೆಗೆ ಹಾಳಾಗುವುದಿಲ್ಲ. ಅಗತ್ಯವಿದ್ದಾಗ ಬಳಸಿ. 

ಶುಕ್ರವಾರ, ಡಿಸೆಂಬರ್ 20, 2019

Bili sagu recipe or white kurma in Kannada | ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ

Bili sagu recipe or white kurma in Kannada

Bili sagu recipe or white kurma in Kannada | ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ 


 ಬಿಳಿ ಸಾಗು ಅಥವಾ ಕೂರ್ಮ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡಕ್ಯಾರೆಟ್
  2. 1 ಆಲೂಗಡ್ಡೆ
  3. 10-15 ಬೀನ್ಸ್
  4. 1/2 ಕಪ್ ಹಸಿ ಬಟಾಣಿ
  5. 1 ಈರುಳ್ಳಿ
  6. 1 ಟೇಬಲ್ ಚಮಚ ಅಡುಗೆ ಎಣ್ಣೆ
  7. 1 ಪುಲಾವ್ ಎಲೆ
  8. 2 ಸೆಮೀ ಚಕ್ಕೆ
  9. 4 - 5 ಲವಂಗ
  10. 4 - 5 ಕರಿಬೇವಿನ ಎಲೆ
  11. ಉಪ್ಪು ರುಚಿಗೆ ತಕ್ಕಷ್ಟು

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 3/4 ಕಪ್ ತೆಂಗಿನತುರಿ
  2. 12 - 15 ಗೋಡಂಬಿ
  3. 1 ಟೀಸ್ಪೂನ್ ಗಸಗಸೆ
  4. 1/2 ಟೀಸ್ಪೂನ್ ಸೋಂಪು
  5. 1 - 2 ಹಸಿರುಮೆಣಸಿನಕಾಯಿ
  6. 1 ಟೀಸ್ಪೂನ್ ಎಣ್ಣೆ

ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ:

  1. ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಬೀನ್ಸ್ ಮತ್ತು ಬಟಾಣಿಯನ್ನು ಕುಕ್ಕರ್ಗೆ ಹಾಕಿ. 
  2. ಉಪ್ಪು ಮತ್ತು ಚಿಟಿಕೆ ಸಕ್ಕರೆ (ಬೇಕಾದಲ್ಲಿ) ಹಾಕಿ ಬೇಯಿಸಿಕೊಳ್ಳಿ. 
  3. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು (ತೆಂಗಿನತುರಿ ಹೊರತುಪಡಿಸಿ) ಹಾಕಿ ಗಸಗಸೆ ಚಟಪಟ ಅನ್ನುವವರೆಗೆ ಹುರಿಯಿರಿ. 
  4. ತೆಂಗಿನತುರಿ ಸೇರಿಸಿ, ಸ್ವಲ್ಪ ಹುರಿದು, ಸ್ಟವ್ ಆಫ್ ಮಾಡಿ. 
  5. ಬಿಸಿ ಆರಿದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು ಕೊಳ್ಳಿ.
  6. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. 
  7. ಪುಲಾವ್ ಎಲೆ, ಚಕ್ಕೆ ಮತ್ತು ಲವಂಗ ಹಾಕಿ. 
  8. ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ. 
  9. ಈರುಳ್ಳಿ ಮೆತ್ತಗಾದ ಕೂಡಲೇ ಬೇಯಿಸಿದ ತರಕಾರಿಗಳನ್ನು ಹಾಕಿ. 
  10. ಆಮೇಲೆ ಅರೆದ ಮಸಾಲೆ ಹಾಕಿ. 
  11. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. 
  12. ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕರಿಬೇವು ಹಾಕಿ ಕುದಿಸಿ.  ಸ್ಟವ್ ಆಫ್ ಮಾಡಿ. 
  13. ಪೂರಿ, ದೋಸೆ, ಚಪಾತಿ ಮತ್ತು ರೊಟ್ಟಿ ಜೊತೆ ಬಡಿಸಿ. 

ಮಂಗಳವಾರ, ಡಿಸೆಂಬರ್ 17, 2019

Lemon rasam recipe in Kannada | ನಿಂಬೆಹಣ್ಣಿನ ಸಾರು ಮಾಡುವ ವಿಧಾನ

Nimbe hannina saaru recipe in Kannada

Lemon rasam recipe in Kannada | ನಿಂಬೆಹಣ್ಣಿನ ಸಾರು ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ತೊಗರಿಬೇಳೆ (ಅಥವಾ ಹೆಸರುಬೇಳೆ)
  2. 1 ಟೀಸ್ಪೂನ್ ಜೀರಿಗೆ 
  3. 1 ಟೊಮೇಟೊ
  4. 2 ಕಪ್ ನೀರು
  5. 4 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
  6. 1/4 ಚಮಚ ಅರಶಿನ ಪುಡಿ
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1 ಟೇಬಲ್ ಚಮಚ ತೆಂಗಿನತುರಿ
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. 4 - 5 ಜಜ್ಜಿದ ಬೆಳ್ಳುಳ್ಳಿ
  4. 7 - 8 ಕರಿಬೇವಿನ ಎಲೆ
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ನಿಂಬೆಹಣ್ಣಿನ ಸಾರು ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು ಒಂದು ಕಪ್ ನೀರು, ಜೀರಿಗೆ, ಕತ್ತರಿಸಿದ ಟೊಮೇಟೊ ಮತ್ತು ಅರಶಿನ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಬೇಯಿಸಿದ ಬೆಳೆಯನ್ನು ಸೌಟಿನ ಹಿಂಭಾಗದಿಂದ ಚೆನ್ನಾಗಿ ಮಸಿದುಕೊಳ್ಳಿ. 
  3. ಮಸಿದ ಬೇಳೆಗೆ ಇನ್ನೊಂದು ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. 
  4. ಕುದಿಯುವಾಗ ಎಣ್ಣೆ, ಸಾಸಿವೆ, ಹಸಿ ಮೆಣಸಿನಕಾಯಿ, ಕರಿಬೇವು ಮತ್ತು ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಕುದಿಯುವುದನ್ನು ಮುಂದುವರೆಸಿ. 
  5. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನತುರಿ ಸೇರಿಸಿ. 
  6. ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. 
  7. ಸ್ಟವ್ ಆಫ್ ಮಾಡಿದ ಕೂಡಲೇ ಲಿಂಬೆ ಹಣ್ಣಿನ ರಸ ಸೇರಿಸಿ. ಬಿಸಿ ಅನ್ನದೊಂದಿಗೆ ಬಡಿಸಿ. 

ಭಾನುವಾರ, ಡಿಸೆಂಬರ್ 15, 2019

Kadlebele chutney recipe in Kannada | ಕಡ್ಲೆಬೇಳೆ ಚಟ್ನಿ ಮಾಡುವ ವಿಧಾನ

Kadlebele chutney recipe in Kannada

Kadlebele chutney recipe in Kannada |ಕಡ್ಲೆಬೇಳೆ ಚಟ್ನಿ ಮಾಡುವ ವಿಧಾನ

  
ಕಡ್ಲೆಬೇಳೆ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಕಡ್ಲೆ ಬೇಳೆ
  2. 2 - 3 ಒಣ ಮೆಣಸಿನಕಾಯಿ
  3. 2 ಟೇಬಲ್ ಚಮಚ ಉದ್ದಿನ ಬೇಳೆ
  4. 1/2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಕಪ್ ತೆಂಗಿನ ತುರಿ
  6. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  7. 1 ಈರುಳ್ಳಿ
  8. 1 ಟೀಸ್ಪೂನ್ ಅಡುಗೆ ಎಣ್ಣೆ
  9. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 ಕರಿಬೇವಿನ ಎಲೆ 
  3. ಚಿಟಿಕೆ ಇಂಗು
  4. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಕಡ್ಲೆಬೇಳೆ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ, ಕೊತ್ತಂಬರಿ ಬೀಜ ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ.
  2. ಬೇಳೆ ಹೊಂಬಣ್ಣ ಹುರಿಯಿರಿ.
  3. ನಂತರ ತೆಂಗಿನ ತುರಿ, ಹುರಿದ ಪದಾರ್ಥಗಳು, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಒಂದು ಪಾತ್ರೆಗೆ ತೆಗೆದು, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಕಲಸಿ. 
  5. ಇಂಗು, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. ಅನ್ನ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ. ಒಗ್ಗರಣೆಗೆ ಬೇಕಾದಲ್ಲಿ ಜಜ್ಜಿದ ಬೆಳ್ಳುಳ್ಳಿ ಹಾಕಬಹುದು. 

ಸೋಮವಾರ, ಡಿಸೆಂಬರ್ 9, 2019

Nimbe hannina sippe recipes in Kannada

Nimbe hannina sippe recipes in Kannada | ನಿಂಬೆಹಣ್ಣಿನ ಸಿಪ್ಪೆಯ ಅಡುಗೆ ಮತ್ತು ಉಪಯೋಗಗಳು


ನಿಂಬೆಹಣ್ಣಿನ ಸಿಪ್ಪೆಯ ಅಡುಗೆ ವಿಡಿಯೋ

ಉಪ್ಪಿನಕಾಯಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 4 ನಿಂಬೆಹಣ್ಣಿನ ಸಿಪ್ಪೆ
  2. 1 - 2 ನಿಂಬೆಹಣ್ಣು
  3. 2 - 3 ಟೇಬಲ್ ಚಮಚ ಉಪ್ಪು 
  4. 2 ಟೀಸ್ಪೂನ್ ಅಚ್ಚಖಾರದಪುಡಿ
  5. 1/4 ಟೀಸ್ಪೂನ್ ಅರಿಶಿನ ಪುಡಿ
  6. ಒಂದು ದೊಡ್ಡ ಚಿಟಿಕೆ ಇಂಗು
  7. 1 ಟೇಬಲ್ ಚಮಚ ಅಡುಗೆ ಎಣ್ಣೆ
  8. 1/2 ಟೀಸ್ಪೂನ್ ಸಾಸಿವೆ
  9. 2 ಕರಿಬೇವಿನ ಎಲೆ

ಚಟ್ನಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1 ನಿಂಬೆಹಣ್ಣಿನ ಸಿಪ್ಪೆ
  2. 1 - 2 ಹಸಿಮೆಣಸಿನಕಾಯಿ
  3. 2 ಟೀಸ್ಪೂನ್ ಉದ್ದಿನಬೇಳೆ
  4. 1/2 ಕಪ್ ತೆಂಗಿನತುರಿ
  5. 1 ಟೀಸ್ಪೂನ್ ಅಡುಗೆ ಎಣ್ಣೆ
  6. 1/2 ಟೀಸ್ಪೂನ್ ಸಾಸಿವೆ
  7. 1 ಒಣಮೆಣಸು
  8. ಒಂದು ದೊಡ್ಡ ಚಿಟಿಕೆ ಇಂಗು

ಟೀ ಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1/2 ಟೀಸ್ಪೂನ್ ಕತ್ತರಿಸಿದ ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ)
  2. 1/2 ಟೀಸ್ಪೂನ್ ಕತ್ತರಿಸಿದ ಶುಂಠಿ
  3. ಸ್ವಲ್ಪ ಪುದಿನ ಎಲೆ

 ಉಪ್ಪಿನಕಾಯಿ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
  2. ಒಂದು ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಾಕಿ ಉಪ್ಪು ಸೇರಿಸಿ. 
  3. ಜೊತೆಗೆ ಅಚ್ಚಖಾರದ ಪುಡಿ ಮತ್ತು ಅರಿಶಿನ ಸೇರಿಸಿ. 
  4. ಮೇಲಿನಿಂದ ಒಂದು ದೊಡ್ಡ ನಿಂಬೆ ಹಣ್ಣಿನಿಂದ ತೆಗೆದ ರಸ ಸೇರಿಸಿ ಚೆನ್ನಾಗಿ ಕಲಸಿ. ಕೈ, ಚಮಚ ಮತ್ತು ಪಾತ್ರೆಯಲ್ಲಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಿ. 
  5. ಬೇಕೆನಿಸಿದರೆ  ಇನ್ನೊಂದು ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು  ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ. 
  6. ಮುಚ್ಚಳ ಮುಚ್ಚಿ ಏಳು ದಿನ ಇಡಿ. ದಿನಕ್ಕೊಮ್ಮೆ ನೀರಿನ ಪಸೆ ಇಲ್ಲದ ಚಮಚದಲ್ಲಿ ಮಗುಚುತ್ತಿರಿ.  
  7. ಏಳರಿಂದ ಹತ್ತು ದಿನದ ನಂತರ ಬೇಕಾದಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಉಪ್ಪಿನಕಾಯಿ ಸವಿಯಲು ಸಿಧ್ಧ. 

ಚಟ್ನಿ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆಯನ್ನು ಉಪ್ಪಿನ ಡಬ್ಬದಲ್ಲಿ ಏಳರಿಂದ ಹತ್ತು ದಿನ ಹಾಕಿಡಿ. 
  2. ಉದ್ದಿನಬೇಳೆ ಮತ್ತು ಮೆಣಸಿನಕಾಯಿಯನ್ನು ಹುರಿಯಿರಿ. 
  3. ಉಪ್ಪಿನಲ್ಲಿ ಹಾಕಿದ ಸಿಪ್ಪೆ, ಉದ್ದಿನಬೇಳೆ, ಮೆಣಸಿನಕಾಯಿ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  4. ಪಾತ್ರೆಗೆ ಬಗ್ಗಿಸಿ ಒಗ್ಗರಣೆ ಕೊಡಿ.ಅನ್ನ ಅಥವಾ ದೋಸೆಯೊಂದಿಗೆ ಬಡಿಸಿ. 

ಟೀ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ), ಶುಂಠಿ ಮತ್ತು ಪುದಿನವನ್ನು ಅರ್ಧ ಕಪ್ ನೀರಿನಲ್ಲಿ ಒಂದು ನಿಮಿಷ ಕುದಿಸಿ.
  2. ಶೋಧಿಸಿ ಕುಡಿಯಿರಿ. 

ಮಂಗಳವಾರ, ಡಿಸೆಂಬರ್ 3, 2019

Menasinakayi fry recipe in Kannada | ಮೆಣಸಿನಕಾಯಿ ಫ್ರೈ ಮಾಡುವ ವಿಧಾನ

Menasinakayi fry recipe in Kannada

Menasinakayi fry recipe in Kannada | ಮೆಣಸಿನಕಾಯಿ ಫ್ರೈ ಮಾಡುವ ವಿಧಾನ 


ಮೆಣಸಿನಕಾಯಿ ಫ್ರೈ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 10 - 12 ಹಸಿರುಮೆಣಸಿನಕಾಯಿ (ಕಡಿಮೆ ಖಾರದ್ದು)
  2. 1 ಸ್ಪೂನ್ ಧನಿಯಾ ಪುಡಿ
  3. 1/2 ಸ್ಪೂನ್ ಜೀರಿಗೆ ಪುಡಿ
  4. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
  5. ಒಂದು ದೊಡ್ಡ ಚಿಟಿಕೆ ಇಂಗು
  6. 1 ಟೇಬಲ್ ಚಮಚ ನಿಂಬೆಹಣ್ಣು
  7. ನಿಮ್ಮ ರುಚಿ ಪ್ರಕಾರ ಉಪ್ಪು 
  8. 2 ಟೇಬಲ್ ಚಮಚ ಅಡುಗೆ ಎಣ್ಣೆ

 ಮೆಣಸಿನಕಾಯಿ ಫ್ರೈ ಮಾಡುವ ವಿಧಾನ:

  1. ಮೊದಲಿಗೆ ಹಸಿಮೆಣಸಿನಕಾಯಿಯನ್ನು ತೊಳೆದು ನೀರು ಒರೆಸಿಕೊಳ್ಳಿ.
  2. ಆಮೇಲೆ ಉದ್ದುದ್ದವಾಗಿ ಸೀಳಿ, ಆದರೆ ಎರಡು ಭಾಗ ಮಾಡಬೇಡಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸೀಳಿದ ಹಸಿಮೆಣಸು ಹಾಕಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಹುರಿಯಿರಿ. 
  4. ಆಮೇಲೆ ಅದಕ್ಕೆ ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ.
  5. ಜೊತೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ.
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ. 
  7. ಕೊನೆಯಲ್ಲಿ ನಿಂಬೆಹಣ್ಣಿನ ರಸ ಸೇರಿಸಿ, ಮಗುಚಿ. 
  8. ಮುಚ್ಚಳ ಮುಚ್ಚಿ ಒಂದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 
  9. ಮುಚ್ಚಳ ತೆಗೆದು, ಇನ್ನೊಮ್ಮೆ ಕೈಯ್ಯಾಡಿಸಿ, ಸ್ಟವ್ ಆಫ್ ಮಾಡಿ. 
  10.  ರೊಟ್ಟಿ, ಚಪಾತಿ, ಮೊಸರನ್ನ ಅಥವಾ ಅನ್ನದೊಂದಿಗೆ ಬಡಿಸಿ.
Related Posts Plugin for WordPress, Blogger...