Khara chapathi recipe in Kannada | ಖಾರ ಚಪಾತಿ ಮಾಡುವ ವಿಧಾನ
ಖಾರ ಚಪಾತಿ ವಿಡಿಯೋ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು
- 1/2 ಟೀಸ್ಪೂನ್ ಗರಂ ಮಸಾಲಾ
- 1/2 ಟೀಸ್ಪೂನ್ ಅಚ್ಚಖಾರದ ಪುಡಿ
- ದೊಡ್ಡ ಚಿಟಿಕೆ ಅರಿಶಿನ
- 1/2 ಟೀಸ್ಪೂನ್ ಜೀರಿಗೆ ಪುಡಿ
- 1/4 ಟೀಸ್ಪೂನ್ ಓಮ
- 5 - 6 ಚಮಚ ತುಪ್ಪ ಅಥವಾ ಎಣ್ಣೆ
- 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 ಟೇಬಲ್ ಚಮಚ ಹುರಿದ ಶೇಂಗಾ ಅಥವಾ ಕಡ್ಲೆಕಾಯಿ
- 1/4 ಟೀಸ್ಪೂನ್ ಗರಂ ಮಸಾಲಾ
- 1/4 ಟೀಸ್ಪೂನ್ ಮಾವಿನಕಾಯಿ ಪುಡಿ
- 1/4 ಟೀಸ್ಪೂನ್ ಉಪ್ಪು
ಖಾರ ಚಪಾತಿ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಜೀರಿಗೆ ಪುಡಿ, ಉಪ್ಪು, ಅರಿಶಿನ, ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಪುಡಿ ಹಾಕಿ.
- ಒಂದು ಚಮಚ ತುಪ್ಪ ಮತ್ತು ಓಮ ಹಾಕಿ ಚೆನ್ನಾಗಿ ತಿಕ್ಕಿ ಕಲಸಿ.
- ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಮೆತ್ತಗಿನ ಚಪಾತಿ ಹಿಟ್ಟು ತಯಾರಿಸಿಕೊಳ್ಳಿ.
- ಕೊನೆಯಲ್ಲಿ 1 ಚಮಚ ತುಪ್ಪ ಹಾಕಿ, ಪುನಃ ಒಮ್ಮೆ ಕಲಸಿ.
- ಮುಚ್ಚಳ ಮುಚ್ಚಿ 20 ನಿಮಿಷ ಪಕ್ಕಕ್ಕಿಡಿ.
- ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ, ಹುರಿದ ಶೇಂಗಾ, ಗರಂ ಮಸಾಲಾ, ಉಪ್ಪು ಮತ್ತು ಮಾವಿನಕಾಯಿ ಪುಡಿ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ. ಇದನ್ನು ನಾವು ಚಪಾತಿಯೊಳಗೆ ಹಾಕಲಿದ್ದೇವೆ.
- ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಸಣ್ಣ ವೃತ್ತಾಕಾರವಾಗಿ ಲಟ್ಟಿಸಿ.
- ಮೇಲಿನಿಂದ ಸ್ವಲ್ಪ ತುಪ್ಪ ಮತ್ತು ಶೇಂಗಾ ಮಸಾಲೆ ಹರಡಿ.
- ತ್ರಿಕೋನಾಕಾರವಾಗಿ ಮಡಿಸಿ, ಲಟ್ಟಿಸಿ.
- ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ.
- ಬಿಸಿ ಬಿಸಿಯಾಗಿರುವಾಗಲೇ ತಿನ್ನಲು ಕೊಡಿ. ಬೇಕಾದಲ್ಲಿ ಉಪ್ಪಿನಕಾಯಿ ಮತ್ತು ಮೊಸರು ಜೊತೆ ಬಡಿಸಿ.