ಬುಧವಾರ, ಜುಲೈ 31, 2019

Paneer bhurji recipe in Kannada | ಪನೀರ್ ಭುರ್ಜಿ ಮಾಡುವ ವಿಧಾನ

Paneer bhurji recipe in Kannada

Paneer bhurji recipe in Kannada | ಪನೀರ್ ಭುರ್ಜಿ ಮಾಡುವ ವಿಧಾನ 

ಪನೀರ್ ಭುರ್ಜಿ ವಿಡಿಯೋ

ಪನೀರ್ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಲೀ ಹಾಲು
  2. 1 ಟೇಬಲ್ ಚಮಚ ಲಿಂಬೆ ಹಣ್ಣಿನ ರಸ ಅಥವಾ ವಿನೆಗರ್ ಅಥವಾ 1/4 ಕಪ್ ಹುಳಿ ಮೊಸರು

ಪನೀರ್ ಭುರ್ಜಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಥವಾ 200 ಗ್ರಾಂ ಪನೀರ್
  2.  1 ದೊಡ್ಡ ಈರುಳ್ಳಿ
  3. 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ (ಅಥವಾ ಸಣ್ಣಗೆ ಕತ್ತರಿಸಿದ ಶುಂಠಿ ಬೆಳ್ಳುಳ್ಳಿ)
  4. 2 ದೊಡ್ಡ ಟೊಮೇಟೊ
  5.  1/2 ಟೀಸ್ಪೂನ್ ಜೀರಿಗೆ
  6.  1/2 - 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
  7.  1/2 ಟೀಸ್ಪೂನ್ ಗರಂ ಮಸಾಲಾ
  8. ದೊಡ್ಡ ಚಿಟಿಕೆ ಅರಿಶಿನ ಪುಡಿ 
  9. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು (ಬೇಕಾದಲ್ಲಿ) 
  11. 2 ಟೇಬಲ್ ಚಮಚ ಅಡುಗೆ ಎಣ್ಣೆ 
  12. ಉಪ್ಪು ರುಚಿಗೆ ತಕ್ಕಷ್ಟು

ಪನೀರ್ ಭುರ್ಜಿ ಮಾಡುವ ವಿಧಾನ:

  1. ಪನೀರ್ ಇಲ್ಲವಾದಲ್ಲಿ, ಒಂದು ಲೀ ಹಾಲು ಕುದಿಸಿ.
  2. 1 ಟೇಬಲ್ ಚಮಚ ಲಿಂಬೆ ಹಣ್ಣಿನ ರಸ ಅಥವಾ ವಿನೆಗರ್ ಅಥವಾ 1/4 ಕಪ್ ಹುಳಿ ಮೊಸರು ಹಾಕಿ ಹಾಲನ್ನು ಒಡೆಸಿಕೊಳ್ಳಿ. ಹಾಲು ಒಡೆದ ಕೂಡಲೇ ಸ್ಟವ್ ಆಫ್ ಮಾಡಿ.
  3. ತಡಮಾಡದೆ ಒಡೆದ ಹಾಲನ್ನು ಸೋಸಿದರೆ, ಪನೀರ್ ಸಿದ್ಧ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ. 
  5. ಜೀರಿಗೆ ಕೆಂಪಾದ ಕೂಡಲೇ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ. 
  6. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಿ ಬಾಡಿಸಿ. ಬೇಕಾದಲ್ಲಿ ಸಣ್ಣಗೆ ಕತ್ತರಿಸಿದ ಹಸಿಮೆಣಸು ಸೇರಿಸಬಹುದು.  
  7. ಆಮೇಲೆ ಸಣ್ಣಗೆ ಕತ್ತರಿಸಿದ ಟೊಮೇಟೊ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  8. ಅದಕ್ಕೆ ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮಗುಚಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ.
  9. ಪುಡಿ ಮಾಡಿದ ಪನೀರ್ ಮತ್ತು ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
  10. ಬೇಕಾದಲ್ಲಿ ಉಪ್ಪು ಹೊಂದಿಸಿಕೊಳ್ಳಿ. 
  11. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ಬ್ರೆಡ್ ನೊಂದಿಗೆ ಬಡಿಸಿ.

ಶುಕ್ರವಾರ, ಜುಲೈ 26, 2019

Erissery recipe in Kannada | ಎರಿಸ್ಸೆರಿ ಮಾಡುವ ವಿಧಾನ

Erissery recipe in Kannada

Erissery recipe in Kannada | ಎರಿಸ್ಸೆರಿ ಮಾಡುವ ವಿಧಾನ


ಎರಿಸ್ಸೆರಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)

  1. 1/4 ಕೆಜಿ ಸುವರ್ಣಗಡ್ಡೆ
  2. 1/4 ಕೆಜಿ ಚೀನಿಕಾಯಿ ಅಥವಾ ಸಿಹಿಗುಂಬಳ
  3. 1/4 ಕಪ್ ಅಲಸಂದೆ ಕಾಳು
  4. ಒಂದು ಚಿಟಿಕೆ ಅರಶಿನ ಪುಡಿ 
  5. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  6. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1 ಕಪ್ ತೆಂಗಿನ ತುರಿ 
  2. 1 ಟೀಸ್ಪೂನ್ ಜೀರಿಗೆ 
  3. 1 - 2 ಹಸಿರು ಮೆಣಸಿನಕಾಯಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 1 ಈರುಳ್ಳಿ ಹೆಚ್ಚಿದ್ದು
  5. 1/2 ಕಪ್ ತೆಂಗಿನತುರಿ
  6. 2 ಟೇಬಲ್ ಚಮಚ ಅಡುಗೆ ಎಣ್ಣೆ

ಎರಿಸ್ಸೆರಿ ಮಾಡುವ ವಿಧಾನ:

  1. ಅಲಸಂದೆ ಕಾಲನ್ನು ಮೂರರಿಂದ ನಾಲ್ಕು ಘಂಟೆ ನೀರಿನಲ್ಲಿ ನೆನೆಸಿಡಿ. 
  2. ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು, ಕತ್ತರಿಸಿ ನೀರಿನಲ್ಲಿ ಹಾಕಿಡಿ. ಚೀನೀಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ.
  3. ಕಾಳು ಮತ್ತು ತರಕಾರಿಗಳನ್ನು ಕುಕ್ಕರ್ ನಲ್ಲಿ ತೆಗೆದುಕೊಳ್ಳಿ. 
  4. ಅಚ್ಚಖಾರದ ಪುಡಿ, ಅರಿಶಿನ, ಉಪ್ಪು ಮತ್ತು ಒಂದು ಕಪ್ ನೀರು ಹಾಕಿ. ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
  5. ಜೀರಿಗೆ, ತೆಂಗಿನ ತುರಿ ಮತ್ತು ಹಸಿರುಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  6. ಬೇಯಿಸಿದ ತರಕಾರಿಗೆ ಅರೆದ ಮಸಾಲೆ ಹಾಕಿ. ಹೆಚ್ಚು ನೀರು ಹಾಕಬೇಡಿ.ಎರಿಸ್ಸೆರಿ ಸ್ವಲ್ಪ ಗಟ್ಟಿಯಾಗಿರಬೇಕು. 
  7. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  8. ಒಂದೆರಡು ನಿಮಿಷ ಕುದಿಸಿ, ಸ್ಟವ್ ಆಫ್ ಮಾಡಿ.
  9. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  10. ಒಗ್ಗರಣೆಗೆ ಈರುಳ್ಳಿ ಹಾಕಿ ಹುರಿಯಿರಿ. 
  11. ಕೊನೆಯಲ್ಲಿ ತೆಂಗಿನತುರಿ ಹಾಕಿ ಹುರಿಯಿರಿ. ಕುದಿಸಿದ ಗೊಜ್ಜಿಗೆ ಸೇರಿಸಿ. ಚೆನ್ನಾಗಿ ಕಲಸಿ ಬಿಸಿ ಅನ್ನದೊಂದಿಗೆ ಅಥವಾ ಚಪಾತಿಯೊಂದಿಗೆ ಬಡಿಸಿ.

ಮಂಗಳವಾರ, ಜುಲೈ 16, 2019

Sorekai dose recipe in Kannada | ಸೋರೆಕಾಯಿ ದೋಸೆ ಮಾಡುವ ವಿಧಾನ

Sorekai dose recipe in Kannada

Sorekai dose recipe in Kannada | ಸೋರೆಕಾಯಿ ದೋಸೆ ಮಾಡುವ ವಿಧಾನ 


ಸೋರೆಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 2 ಕಪ್ ಹೆಚ್ಚಿದ ಸೋರೆಕಾಯಿ
  3. 3 - 4 ಟೇಬಲ್ ಚಮಚ ಉದ್ದಿನ ಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 0 - 1/4 ಕಪ್ ಅವಲಕ್ಕಿ
  6. ಎಣ್ಣೆ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ಸೋರೆಕಾಯಿ ದೋಸೆ ಮಾಡುವ ವಿಧಾನ:

  1. ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. ಬೇಕಾದಲ್ಲಿ ಅವಲಕ್ಕಿಯನ್ನು ನೆನೆಸಿ, ಅರೆಯುವಾಗ ಸೇರಿಸಿ. 
  3. ಸೋರೆಕಾಯಿಯನ್ನು ಅರೆದು, ಅದೇ ಪಾತ್ರೆಗೆ ಹಾಕಿ. ಹಿಟ್ಟನ್ನು ಚೆನ್ನಾಗಿ ಕಲಸಿ. 
  4. ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  5. 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  6. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ದೋಸೆ ಹೆಂಚನ್ನು ಬಿಸಿಮಾಡಿ. ದೋಸೆ ಹೆಂಚನ್ನು ಬಳಸುತ್ತಿದ್ದರೆ ಮೊದಲಿಗೆ ಎಣ್ಣೆ ಹಚ್ಚಿ. ನಾನ್ ಸ್ಟಿಕ್ ಪ್ಯಾನ್ ಆದಲ್ಲಿ ಎಣ್ಣೆ ಹಚ್ಚಬೇಡಿ, ಎಣ್ಣೆ ಹಚ್ಚಿದರೆ ದೋಸೆ ಹರಡಲು ಸಾಧ್ಯವಾಗುವುದಿಲ್ಲ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
  8. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜುಲೈ 12, 2019

Cooked rice paddu recipe in Kannada | ಅನ್ನ ಬಳಸಿ ಪಡ್ದು ಮಾಡುವ ವಿಧಾನ

Cooked rice paddu recipe in Kannada

Cooked rice paddu recipe in Kannada | ಅನ್ನ ಬಳಸಿ ಪಡ್ದು ಮಾಡುವ ವಿಧಾನ 

ಅನ್ನ ಬಳಸಿ ಪಡ್ದು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅನ್ನ
  2. 2 ಟೇಬಲ್ ಸ್ಪೂನ್ ರವೆ
  3. 1 ಟೇಬಲ್ ಸ್ಪೂನ್ ಮೊಸರು
  4. 1/2 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  5. 1 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  6. 7 - 8 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  7. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. ಚಿಟಿಕೆ ಅರಿಶಿನ 
  9. ಚಿಟಿಕೆ ಇಂಗು
  10. ಎಣ್ಣೆ ಪಡ್ಡು ಮಾಡಲು 
  11. ಉಪ್ಪು ರುಚಿಗೆ ತಕ್ಕಷ್ಟು.

ಅನ್ನ ಬಳಸಿ ಪಡ್ದು ಮಾಡುವ ವಿಧಾನ:

  1. ಅನ್ನವನ್ನು ಹಿಸುಕಿ ಮುದ್ದೆ ಮಾಡಿ. ಅಥವಾ ಮಿಕ್ಸಿಯಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಿ ಅರೆದುಕೊಳ್ಳಿ. 
  2. ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  3. ಅರಿಶಿನ ಮತ್ತು ಇಂಗು ಸೇರಿಸಿ. 
  4. ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  5. ರವೆಯನ್ನು ಸೇರಿಸಿ. 
  6. ಮೊಸರು ಸೇರಿಸಿ.
  7. ಅಗತ್ಯವಿದ್ದಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಿ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ. 
  8. ನಂತ್ರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ. ಮಧ್ಯದಲ್ಲಿ ಸ್ವಲ್ಪ ತಗ್ಗು ಮಾಡಿದರೆ, ಬೇಗ ಬೇಯಲು ಅನುಕೂಲ ಆಗುತ್ತದೆ.  
  9. ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  10. ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ಮಧ್ಯಮ ಉರಿಯಲ್ಲಿ ಬೇಯಿಸಿ. 
  11. ಸುಮಾರು ಒಂದು ನಿಮಿಷದ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  12. ಪಡ್ಡುವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ಬಿಸಿ ಅಥವಾ ತಣ್ಣಗೆ ಬಡಿಸಿ. 


ಶುಕ್ರವಾರ, ಜುಲೈ 5, 2019

Eerulli sagu recipe in Kannada | ಈರುಳ್ಳಿ ಸಾಗು ಮಾಡುವ ವಿಧಾನ

Eerulli sagu recipe in Kannada

Eerulli sagu recipe in Kannada | ಈರುಳ್ಳಿ ಸಾಗು ಮಾಡುವ ವಿಧಾನ 


ಈರುಳ್ಳಿ ಸಾಗು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 - 3 ದೊಡ್ಡ ಈರುಳ್ಳಿ
  2. 1  ಟೊಮ್ಯಾಟೋ
  3. ದೊಡ್ಡ ಚಿಟಿಕೆ ಅರಶಿನ ಪುಡಿ
  4. 2 ಟೇಬಲ್ ಚಮಚ ಅಡುಗೆ ಎಣ್ಣೆ
  5. 1/2 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಉದ್ದಿನ ಬೇಳೆ
  7. 1 ಒಣಮೆಣಸು
  8. 4 - 5 ಕರಿಬೇವಿನ ಎಲೆ
  9. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 1 ಸೆಮೀ ಉದ್ದದ ಶುಂಠಿ
  3. 3 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೇಬಲ್ ಸ್ಪೂನ್ ಹುರಿಗಡಲೆ 
  7. 1 ಟೀಸ್ಪೂನ್ ಗಸಗಸೆ 
  8. 1 - 2 ಹಸಿರುಮೆಣಸಿನಕಾಯಿ
  9. ಸ್ವಲ್ಪ ಚಕ್ಕೆ
  10. 4 - 5 ಲವಂಗ
  11. 1 ಏಲಕ್ಕಿ
  12. 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
  13. ಸ್ವಲ್ಪ ಪುದಿನ ಎಲೆ (ಬೇಕಾದಲ್ಲಿ)

ಈರುಳ್ಳಿ ಸಾಗು ಮಾಡುವ ವಿಧಾನ:

  1. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
  2. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಉದ್ದಿನ ಬೇಳೆ, ಒಣಮೆಣಸು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  3.  ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
  4. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
  5. ಟೊಮೇಟೊ ಹುರಿಯುವಾಗ, ಚಿಟಿಕೆ ಅರಿಶಿನ, ಒಂದು ಚಮಚ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ, ಈರುಳ್ಳಿ ಮತ್ತು ಟೊಮೇಟೊ ವನ್ನು ಮೆತ್ತಗೆ ಬೇಯಿಸಿಕೊಳ್ಳಿ. 
  6. ಆಮೇಲೆ ಅರೆದ ಮಸಾಲೆ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ. 
  7. ಬೇಕಾದಲ್ಲಿ ಉಪ್ಪು ಹೊಂದಿಸಿ. 
  8. ಐದು ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ. 


ಬುಧವಾರ, ಜುಲೈ 3, 2019

Tomato rice recipe in Kannada | ಟೊಮೇಟೊ ರೈಸ್ ಮಾಡುವ ವಿಧಾನ

Tomato rice recipe in Kannada

Tomato rice recipe in Kannada | ಟೊಮೇಟೊ ರೈಸ್ ಮಾಡುವ ವಿಧಾನ

ಟೊಮೇಟೊ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 2 - 3 ಟೊಮ್ಯಾಟೋ
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಸಾಸಿವೆ 
  5. 1 ಚಮಚ ತುರಿದ ಶುಂಠಿ
  6. 1 ದೊಡ್ಡ ಈರುಳ್ಳಿ
  7. 1 - 2 ಹಸಿರುಮೆಣಸಿನಕಾಯಿ
  8. ಸ್ವಲ್ಪ ಕರಿಬೇವು
  9. 1/4 ಟೀಸ್ಪೂನ್ ಅರಶಿನ ಪುಡಿ
  10. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  11. ಸ್ವಲ್ಪ ಮೆಂತೆ ಸೊಪ್ಪು ಅಥವಾ ಒಂದು ಟೇಬಲ್ ಚಮಚ ಕಸೂರಿ ಮೇಥಿ (ಬೇಕಾದಲ್ಲಿ)
  12. 3 ಟೇಬಲ್ ಚಮಚ ಅಡುಗೆ ಎಣ್ಣೆ 
  13. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  14. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು

ಟೊಮೇಟೊ ರೈಸ್ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದಿಟ್ಟುಕೊಳ್ಳಿ. 
  2. ಟೊಮ್ಯಾಟೋ, ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. ಕತ್ತರಿಸಿದ ಟೊಮ್ಯಾಟೊವನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದಿಟ್ಟುಕೊಳ್ಳಿ. 
  3. ಈಗ ಒಂದು ಕುಕ್ಕರ್ ತೆಗೆದುಕೊಂಡು ಎಣ್ಣೆ ಬಿಸಿಮಾಡಿ. ಜೀರಿಗೆ ಮತ್ತು ಸಾಸಿವೆ ಹಾಕಿ ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಸಣ್ಣಗೆ ಕತ್ತರಿಸಿದ ಶುಂಠಿ, ಕರಿಬೇವು ಮತ್ತು ಹಸಿರುಮೆಣಸಿನಕಾಯಿ ಹಾಕಿ ಹುರಿಯಿರಿ.
  5. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಹಸಿ ಮೆಂತೆ ಸೊಪ್ಪು ಹಾಕುವುದಾದಲ್ಲಿ ಈರುಳ್ಳಿ ಜೊತೆ ಹಾಕಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಕೂಡಲೇ ತೊಳೆದಿಟ್ಟ ಅಕ್ಕಿ ಹಾಕಿ ಒಂದು ನಿಮಿಷ ಹುರಿಯಿರಿ.
  7. ಆಮೇಲೆ ಟೊಮೇಟೊ ಪೇಸ್ಟ್, ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿಯಿರಿ. 
  8. ಆಮೇಲೆ ಅಚ್ಚಖಾರದ ಪುಡಿ, ಗರಂ ಮಸಾಲಾ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಮಗುಚಿ.
  9. ಒಮ್ಮೆ ಚೆನ್ನಾಗಿ ಮಗುಚಿ. ಕಸೂರಿ ಮೇತಿ ಅಥವಾ ಒಣಗಿದ ಮೆಂತೆ ಸೊಪ್ಪು ಸೇರಿಸಿ. 
  10. ನಂತರ ಎರಡು ಕಪ್ ನೀರು ಸೇರಿಸಿ (ಸುಮಾರು ಒಂದು ಕಪ್ ನಷ್ಟು ಟೊಮೇಟೊ ಪೇಸ್ಟ್ ಹಾಕಿದ ಕಾರಣ).
  11. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  12. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ, ಸವಿದು ಆನಂದಿಸಿ. 

Related Posts Plugin for WordPress, Blogger...