Kadle kalu saru recipe in Kannada | ಕಡ್ಲೆಕಾಳು ಸಾರು ಮಾಡುವ ವಿಧಾನ
ಮುಖ್ಯ ಪದಾರ್ಥಗಳು: (ಅಳತೆ ಕಪ್ = 240ml)
- 1/2 ಕಪ್ ಕಡ್ಲೆಕಾಳು
- 1 ಆಲೂಗಡ್ಡೆ
- 2 ಸಣ್ಣ ಬದನೆಕಾಯಿ
- 1/2 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
- ಚಿಟಿಕೆ ಅರಿಶಿನ ಪುಡಿ
- ನಿಮ್ಮ ರುಚಿ ಪ್ರಕಾರ ಉಪ್ಪು
ಮಸಾಲೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 2 - 4 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಕರಿಮೆಣಸು
- 1 ಕತ್ತರಿಸಿದ ಈರುಳ್ಳಿ
- 5 ಬೇಳೆ ಬೆಳ್ಳುಳ್ಳಿ
- 1 ಕತ್ತರಿಸಿದ ಟೊಮೆಟೊ
- 1/2 ಕಪ್ ತೆಂಗಿನ ತುರಿ
- ನಿಮ್ಮ ರುಚಿ ಪ್ರಕಾರ ಉಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1/2 ಚಮಚ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಕಡ್ಲೆಕಾಳು ಸಾರು ಮಾಡುವ ವಿಧಾನ:
- ಕಡ್ಲೆಕಾಳನ್ನು ತೊಳೆದು, ಒಂದು ದಿನ ನೆನೆಸಿ, ಮೊಳಕೆ ಕಟ್ಟಿಸಿಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
- ಅದಕ್ಕೆ ಕತ್ತರಿಸಿದ ಆಲೂಗಡ್ಡೆ, ಬದನೆಕಾಯಿ, ಉಪ್ಪು ಮತ್ತು ಹುಣಿಸೆರಸ ಸೇರಿಸಿ ತರಕಾರಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿ ಮೆಣಸನ್ನು ಹುರಿಯಿರಿ.
- ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ.
- ನಂತರ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ.
- ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ.
- ಮಿಕ್ಸಿಯಲ್ಲಿ ಹುರಿದ ಎಲ್ಲ ಪದಾರ್ಥಗಳನ್ನು ಹಾಕಿ ನುಣ್ಣನೆ ಅರೆದುಕೊಳ್ಳಿ.
- ಅರೆದ ಮಸಾಲೆಯನ್ನು ಬೇಯಿಸಿದ ಕಡ್ಲೆಕಾಳು ಮತ್ತು ತರಕಾರಿಗೆ ಹಾಕಿ, ಬೇಕಾದಷ್ಟು ನೀರು ಸೇರಿಸಿ, ಉಪ್ಪು ಹಾಕಿ ಕುದಿಸಿ.
- ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ