Avarekalu sagu recipe in Kannada |ಅವರೇಕಾಳು ಸಾಗು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅವರೇಕಾಳು
- 1 ದೊಡ್ಡ ಈರುಳ್ಳಿ
- 1 ಟೊಮ್ಯಾಟೋ
- 1/4 ಟೀಸ್ಪೂನ್ ಅರಶಿನ ಪುಡಿ
- 4 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 4 - 5 ಕರಿಬೇವಿನ ಎಲೆ
- ಉಪ್ಪು ರುಚಿಗೆ ತಕ್ಕಷ್ಟು
ಬೇಕಾಗುವ ಪದಾರ್ಥಗಳು (ಮಸಾಲೆಗೆ):
- 1/2 ಕಪ್ ತೆಂಗಿನತುರಿ
- 1 ಸೆಮೀ ಉದ್ದದ ಶುಂಠಿ
- 3 ಎಸಳು ಬೆಳ್ಳುಳ್ಳಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಜೀರಿಗೆ
- 2 ಟೇಬಲ್ ಸ್ಪೂನ್ ಹುರಿಗಡಲೆ
- 1 ಟೀಸ್ಪೂನ್ ಗಸಗಸೆ
- 1 - 2 ಹಸಿರುಮೆಣಸಿನಕಾಯಿ
- 1/2 ಬೆರಳುದ್ದ ಚಕ್ಕೆ
- 4 - 5 ಲವಂಗ
- 1 ಏಲಕ್ಕಿ
- 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಅವರೇಕಾಳು ಸಾಗು ಮಾಡುವ ವಿಧಾನ:
- ಒಂದು ಕಪ್ ನಷ್ಟು ಅವರೆಕಾಳನ್ನು ಕುಕ್ಕರ್ಗೆ ಹಾಕಿ. ಬೇಕಾದಷ್ಟು ನೀರು, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ.
- ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
- ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ ಮತ್ತು ಉದ್ದಿನ ಬೇಳೆಯ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಅರಿಶಿನ, ಇಂಗು ಮತ್ತು ಕರಿಬೇವಿನ ಎಲೆ ಸೇರಿಸಿ.
- ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
- ಈಗ ಅರೆದ ಮಸಾಲೆ ಹಾಕಿ.
- ನಂತ್ರ ಬೇಯಿಸಿದ ಅವರೇಕಾಳನ್ನು ಹಾಕಿ.
- ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ.
- ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಕುದಿಸಿ
- ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ