Berake soppu sambar recipe in Kannada | ಬೆರಕೆ ಸೊಪ್ಪು ಸಾಂಬಾರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
- 1 ದೊಡ್ಡ ಕಟ್ಟು ಬೆರಕೆ ಸೊಪ್ಪು (ಪಾಲಕ್, ದಂಟು, ಹರಿವೆ, ಸಬ್ಸಿಗೆ, ಮೆಂತೆ ಇತ್ಯಾದಿ)
- 1 ಟೊಮೇಟೊ
- 1/4 ಟೀಸ್ಪೂನ್ ಅರಿಶಿನ ಪುಡಿ
- ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 1 ಟೀಸ್ಪೂನ್ ಬೆಲ್ಲ
- 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿ ಪ್ರಕಾರ)
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೆಂಗಿನ ತುರಿ
- 2 - 4 ಕೆಂಪು ಮೆಣಸಿನಕಾಯಿ
- 1 ಟೀಸ್ಪೂನ್ ಉದ್ದಿನ ಬೇಳೆ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಸಾಸಿವೆ
- 10 -12 ಮೆಂತ್ಯ
- 5 - 6 ಕಾಳುಮೆಣಸು (ಬೇಕಾದಲ್ಲಿ)
- 1/4 ಟೀಸ್ಪೂನ್ ಇಂಗು
- 1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1/4 ಟೀಸ್ಪೂನ್ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
- ಒಂದು ಈರುಳ್ಳಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
- 5 - 6 ಬೇಳೆ ಬೆಳ್ಳುಳ್ಳಿ (ಬೇಕಾದಲ್ಲಿ)
ಬೆರಕೆ ಸೊಪ್ಪು ಸಾಂಬಾರ್ ಮಾಡುವ ವಿಧಾನ:
- ಸೊಪ್ಪುಗಳನ್ನು ಆಯ್ದು, ತೊಳೆದು, ಕತ್ತರಿಸಿ.
- ಒಂದು ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು ತೊಳೆಯಿರಿ. ಅರಿಶಿನ ಪುಡಿ, ಒಂದೆರಡು ಹನಿ ಎಣ್ಣೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಬೇಳೆಯನ್ನು ಮೆತ್ತಗೆ ಬೇಯಿಸಿ.
- ನಂತ್ರ ಅದಕ್ಕೆ ಕತ್ತರಿಸಿದ ಸೊಪ್ಪು, ಉಪ್ಪು ಮತ್ತು ಟೊಮೇಟೊ ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಸೊಪ್ಪು ಮೆತ್ತಗಾಗುವವರೆಗೆ ಬೇಯಿಸಿ.
- ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಸಾಸಿವೆ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
- ಉದ್ದಿನಬೇಳೆ ಹೊಂಬಣ್ಣಕ್ಕೆ ತಿರುಗಿದ ಕೂಡಲೇ ಸ್ಟವ್ ಆಫ್ ಮಾಡಿ.
- ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಅರೆದ ಮಸಾಲೆಯನ್ನು ಬೇಯಿಸಿದ ಸೊಪ್ಪು+ಬೇಳೆ+ಟೊಮೇಟೊ ಇರುವ ಕುಕ್ಕರ್ ಗೆ ಹಾಕಿ.
- ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ.
- ನಿಮಗೆ ಸಾಂಬಾರ್ ಎಷ್ಟು ದಪ್ಪ ಬೇಕೋ ಅಷ್ಟು ನೀರು ಸೇರಿಸಿ, ಮಗುಚಿ, ಕುದಿಸಿ.
- ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬೇಕಾದಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಒಗ್ಗರಣೆಗೆ ಸೇರಿಸಬಹುದು. ಬಿಸಿ ಅನ್ನದೊಂದಿಗೆ ಬಡಿಸಿ.