ಬುಧವಾರ, ಜುಲೈ 12, 2017

Halasina hannina gatti and kadubu recipe in Kannada | ಹಲಸಿನ ಹಣ್ಣಿನ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

Halasina hannina gatti recipe in Kannada

Halasina hannina gatti and kadubu recipe in Kannada | ಹಲಸಿನ ಹಣ್ಣಿನ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

ಹಲಸಿನ ಹಣ್ಣಿನ ಗಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

 1. 4 ಕಪ್ ಹಲಸಿನ ಹಣ್ಣು 
 2. 0.5 ಕಪ್ ತೆಂಗಿನ ತುರಿ 
 3. 1 ಕಪ್ ಅಕ್ಕಿ
 4. 1/4 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
 5. ಉಪ್ಪು ರುಚಿಗೆ ತಕ್ಕಷ್ಟು. 
 6. ಬಾಳೆಎಲೆ

ಹಲಸಿನ ಹಣ್ಣಿನ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

 1. 4 ಕಪ್ ಹಲಸಿನ ಹಣ್ಣು
 2. 1 ಕಪ್ ಅಕ್ಕಿ
 3. ಉಪ್ಪು ರುಚಿಗೆ ತಕ್ಕಷ್ಟು.

ಹಲಸಿನ ಹಣ್ಣಿನ ಗಟ್ಟಿ ಮಾಡುವ ವಿಧಾನ:

 1. ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ. 
 2. ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಕೊಳ್ಳಿ. 
 3. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು, ತೆಂಗಿನತುರಿ, ಬೆಲ್ಲ ಮತ್ತು ಉಪ್ಪು ಹಾಕಿ ಸ್ವಲ್ಪ ತರಿ ತರಿಯಾಗಿ ಅರೆಯಿರಿ. ಗಮನಿಸಿ ನೀರು ಸೇರಿಸಬೇಡಿ. 
 4. ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ತೆಳು ಅನಿಸಿದಲ್ಲಿ , ಸ್ವಲ್ಪ ರವೇ ಸಹ ಸೇರಿಸಬಹುದು. 
 5. ಈಗ ಬಾಳೆಎಲೆ ತೆಗೆದುಕೊಂಡು, ಒಂದು ಹಿಡಿ ಹಿಟ್ಟನ್ನು ಹಾಕಿ, ಬಾಳೆಎಲೆಯನ್ನು ಪ್ಯಾಕೆಟ್ ನಂತೆ ಮಡಚಿ. 
 6. ನಂತರ 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ತುಪ್ಪ, ಜೇನುತುಪ್ಪ, ಕಾಯಿಹಾಲು ಅಥವಾ ಚಟ್ನಿಯೊಂದಿಗೆ ಬಡಿಸಿ.

ಹಲಸಿನ ಹಣ್ಣಿನ ಕಡುಬು ಮಾಡುವ ವಿಧಾನ:

 1. ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ. 
 2. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ಉಪ್ಪು ಹಾಕಿ ತರಿ ತರಿಯಾಗಿ ಅರೆಯಿರಿ. ಈ ವಿಧಾನದಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಬಹುದು. 
 3. ಹಿಟ್ಟು ಇಡ್ಲಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು. 
 4. ಈಗ ಅಂಚಿರುವ ಬಟ್ಟಲಿನಲ್ಲಿ ಅಥವಾ ತಟ್ಟೆಯಲ್ಲಿ ಹಿಟ್ಟನ್ನು ಹಾಕಿ.
 5. 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ. ಬಿಸಿಯಾಗಿರುವಾಗಲೇ ತುಪ್ಪ ಮತ್ತು ತೆಂಗಿನಕಾಯಿ+ಕೊತ್ತಂಬರಿ ಬೀಜ ದ ಚಟ್ನಿಯೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...