Heerekayi sippe dose recipe in Kannada | ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ದೋಸೆ ಅಕ್ಕಿ
1.5 ಕಪ್ ಕತ್ತರಿಸಿದ ಹೀರೆಕಾಯಿ ಸಿಪ್ಪೆ
1/4 ಕಪ್ ತೆಂಗಿನ ತುರಿ
1 ಟೀಸ್ಪೂನ್ ಕೊತ್ತಂಬರಿ ಬೀಜ
1/2 ಟೀಸ್ಪೂನ್ ಜೀರಿಗೆ
2 ಕೆಂಪು ಮೆಣಸಿನಕಾಯಿ
ಸಣ್ಣ ಗೋಲಿ ಗಾತ್ರದ ಹುಣಸೆ ಹಣ್ಣು
1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
ಉಪ್ಪು ರುಚಿಗೆ ತಕ್ಕಷ್ಟು
ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ, ಬೆಲ್ಲ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ.
ನಂತರ ಅದಕ್ಕೆ ಹೀರೆಕಾಯಿ ಸಿಪ್ಪೆ ಹಾಕಿ ಸ್ವಲ್ಪ ತರಿತರಿಯಾಗಿ ಅರೆಯಿರಿ.
ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ತೆಳುವಾದ ಮಿಲ್ಕ್ ಶೇಕ್ ನಂತಿರಲಿ.
ದೋಸೆ ಕಲ್ಲು ಅಥವಾ ಹಂಚನ್ನು ಬಿಸಿ ಮಾಡಿ. ಒಂದು ಸೌಟು ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ.
ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯೊಂದಿಗೆ ಬಡಿಸಿ.
Bakery style peda recipe in Kannada | ಬೇಕರಿ ಶೈಲಿಯ ಪೇಡ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಹಾಲಿನ ಪುಡಿ
1 ಕಪ್ ಹಾಲು
0.25 ಕಪ್ ಮೈದಾ
1/3 ಕಪ್ ಸಕ್ಕರೆ
2 ಟೇಬಲ್ ಚಮಚ ತುಪ್ಪ
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಒಂದು ದೊಡ್ಡ ಚಿಟಿಕೆ ಕೇಸರಿ (ಬೇಕಾದಲ್ಲಿ)
ಒಂದು ಚಿಟಿಕೆ ಜಾಯಿಕಾಯಿ ಪುಡಿ (ಬೇಕಾದಲ್ಲಿ)
ಬೇಕರಿ ಶೈಲಿಯ ಪೇಡ ಮಾಡುವ ವಿಧಾನ:
ಒಂದು ನಾನ್ ಸ್ಟಿಕ್ ಕಡಾಯಿಯಲ್ಲಿ ಹಾಲಿನಪುಡಿ, ಸಕ್ಕರೆ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ (ಬೇಕಾದಲ್ಲಿ) ಮತ್ತು ಕೇಸರಿಯನ್ನು (ಬೇಕಾದಲ್ಲಿ)ತೆಗೆದುಕೊಳ್ಳಿ.
ಅದಕ್ಕೆ ಹಾಲು ಹಾಕಿ ಗಂಟಿಲ್ಲದಂತೆ ಕಲಸಿ.
ನಂತರ ಕಡಾಯಿಯನ್ನು ಸ್ಟವ್ ಮೇಲಿರಿಸಿ, ಮಗುಚುತ್ತಾ ಮೈದಾ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. ಗಂಟಿಲ್ಲದಂತೆ ಮಗುಚಿ.
ನಂತರ ನಿರಂತರವಾಗಿ ಮಧ್ಯಮ ಉರಿಯಲ್ಲಿ ಮಗುಚಲು ಪ್ರಾರಂಭಿಸಿ.
ಸ್ವಲ್ಪ ಗಟ್ಟಿಯಾದ ನಂತರ ತುಪ್ಪ ಹಾಕಿ ಮಗುಚುವುದನ್ನು ಮುಂದುವರೆಸಿ.
ಸ್ವಲ್ಪ ಸಮಯದಲ್ಲಿ ತಳ ಬಿಡಲು ಪ್ರಾರಂಭವಾಗುತ್ತದೆ. ಮೆತ್ತಗಿನ ಮುದ್ದೆಯಾಗುವವರೆಗೆ ಮಗುಚುವುದನ್ನು ಮುಂದುವರೆಸಿ. ಆಗ ಸ್ಟವ್ ಆಫ್ ಮಾಡಿ. ಸ್ವಲ್ಪ ಮಿಶ್ರಣವನ್ನು ತೆಗೆದು ಉಂಡೆ ಮಾಡಿದಾಗ ಕೈಗೆ ಅಂಟಬಾರದು.
ಬಿಸಿ ಆರಿದ ಮೇಲೆ ಪೇಡ ಗಳನ್ನು ತಯಾರಿಸಿ. ಪೇಡ ಮಾಡುವಾಗ ಕೈಗೆ ಅಂಟುತ್ತಿದ್ದರೆ ಪುನಃ ಒಲೆಯ ಮೇಲಿಟ್ಟು ಒಂದೆರಡು ನಿಮಿಷ ಮಗುಚಿ. ಬಿಸಿ ಆರಿದ ಮೇಲೆ ಪೇಡ ತಯಾರಿಸಿ.
Paduvalakai jeerige kootu recipe in Kannada | ಪಡುವಲಕಾಯಿ ಕಲಾಸು ಮಾಡುವ ವಿಧಾನ
ಪಡುವಲಕಾಯಿ ಕೂಟು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಸಣ್ಣ ಗಾತ್ರದ ಪಡುವಲಕಾಯಿ
1 - 2 ಹಸಿರು ಮೆಣಸಿನಕಾಯಿ
ಒಂದು ಚಿಟಿಕೆ ಅರಶಿನ ಪುಡಿ
1 ನಿಂಬೆ ಗಾತ್ರದ ಬೆಲ್ಲ
ಉಪ್ಪು ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು:
1/2 ಕಪ್ ತೆಂಗಿನ ತುರಿ
2 ಟೀಸ್ಪೂನ್ ಅಕ್ಕಿ
1/2 ಟೀಸ್ಪೂನ್ ಜೀರಿಗೆ
1 ಹಸಿರುಮೆಣಸಿನಕಾಯಿ (ಬೇಕಾದಲ್ಲಿ)
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1/2 ಚಮಚ ಸಾಸಿವೆ
1 ಕೆಂಪು ಮೆಣಸಿನಕಾಯಿ
5 - 6 ಕರಿಬೇವಿನ ಎಲೆ
2 ಟೀಸ್ಪೂನ್ ಅಡುಗೆ ಎಣ್ಣೆ
ಪಡುವಲಕಾಯಿ ಅಥವಾ ಪಟ್ಲಕಾಯಿ ಕಲಾಸು ಮಾಡುವ ವಿಧಾನ:
ಪಡುವಲಕಾಯಿಯನ್ನು ಹೊರಗಿನ ಸಿಪ್ಪೆ ಹೆರೆಸಿ, ತೊಳೆದು ಸಣ್ಣದಾಗಿ ಕತ್ತರಿಸಿ. ನಡುವಿನ ಬೀಜ ಇರುವ ಭಾಗವನ್ನು ಹಾಕುವುದು ಬೇಡ.
ಕತ್ತರಿಸಿದ ಪಡುವಲಕಾಯಿ, ಅರಶಿನ, ಉಪ್ಪು, ಸೀಳಿದ ಹಸಿರು ಮೆಣಸಿನಕಾಯಿ, ಬೆಲ್ಲ ಮತ್ತು ನೀರು ಹಾಕಿ ಬೇಯಿಸಿ.
ಜೀರಿಗೆ, ತೆಂಗಿನ ತುರಿ ಮತ್ತು ತೊಳೆದ ಅಕ್ಕಿಯನ್ನು ಮಿಕ್ಸಿಯಲ್ಲಿ ಅರೆಯಿರಿ. ಬೇಕಾದಲ್ಲಿ ಒಂದು ಹಸಿರುಮೆಣಸಿನಕಾಯಿ ಸೇರಿಸಬಹುದು. ಆದರೆ ಈ ಸಾಂಬಾರ್ ಕಡಿಮೆ ಖಾರವಿದ್ದು ಸ್ವಲ್ಪ ಸಿಹಿಯಾಗಿದ್ದರೆ ಚೆನ್ನ.
ಬೇಯಿಸಿದ ಪಡುವಲಕಾಯಿಗೆ ಅರೆದ ಮಸಾಲೆ ಹಾಕಿ.
ಬೇಕಾದಲ್ಲಿ ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ.
ಈ ಸಾಂಬಾರ್ ಸ್ವಲ್ಪ ದಪ್ಪ ಇರಬೇಕು. ಒಂದು ಕುದಿ ಕುದಿಸಿ, ಸ್ಟವ್ ಆಫ್ ಮಾಡಿ.
ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಬಾಣಲೆ ಬಿಸಿ ಮಾಡಿ, ಎಣ್ಣೆ, 1/2 ಚಮಚ ಸಾಸಿವೆ, ಉದ್ದಿನ ಬೇಳೆ ಮತ್ತು ಕಡ್ಲೆಬೇಳೆ ಹಾಕಿ.
ಸಾಸಿವೆ ಸಿಡಿದ ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ.
ಈಗ ಕತ್ತರಿಸಿದ ಅನಾನಸನ್ನು ಹಾಕಿ. 2 ನಿಮಿಷ ಹುರಿಯಿರಿ. ಅರಿಶಿನ ಪುಡಿ, ಉಪ್ಪು, ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ. ಕುದಿಯಲು ಶುರುವಾದ ಕೂಡಲೇ ಉರಿ ಕಡಿಮೆ ಮಾಡಿ. ಮುಚ್ಚಳವನ್ನು ಮುಚ್ಚಿ ಬೇಯಿಸಿ. ಆಗಾಗ್ಯೆ ಮಗುಚುತ್ತಾ ಇರಿ.
ಅನಾನಸ್ ಬೆಂದ ಕೂಡಲೇ ಸಾರಿನ ಪುಡಿ ಮತ್ತು ತೆಂಗಿನತುರಿ ಸೇರಿಸಿ, ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.