ಗುರುವಾರ, ಅಕ್ಟೋಬರ್ 22, 2015

Mung dal-carrot salad in kannada | hesarubele-carrot kosambari | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ
ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ

ಹೆಸರುಬೇಳೆ ಮತ್ತು ಕ್ಯಾರೆಟ್ ಕೋಸಂಬರಿಯಲ್ಲಿ ನೆನೆಸಿದ ಹೆಸರುಬೇಳೆ ಮತ್ತು ತುರಿದ ಕ್ಯಾರೆಟ್ ಮುಖ್ಯ ಪದಾರ್ಥಗಳಾಗಿವೆ. ಕೋಸಂಬರಿ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲೊಂದಾಗಿದೆ ಹಾಗೂ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಈ ಅಡುಗೆ ಚಾಲ್ತಿಯಲ್ಲಿದೆ. ಶುಭ ಸಮಾರಂಭಗಳಲ್ಲಿ, ಅತಿಥಿಗಳು ಬಂದಾಗ, ಸುಲಭವಾಗಿ ಮಾಡಬಲ್ಲ ವಿಶೇಷ ಅಡುಗೆ ಇದಾಗಿದೆ.
ಈ ಅಡುಗೆ ಬಹಳ ಸರಳ ಹಾಗೂ ಆರೋಗ್ಯಕರವಾಗಿದ್ದು, ಅಡುಗೆ ಬಾರದವರು ಅಥವಾ ಹೊಸದಾಗಿ ಅಡುಗೆ ಕಲಿಯುತ್ತಿರುವವರು ಸುಲಭವಾಗಿ ಅಳವಡಿಸಿಕೊಳ್ಳ ಬಹುದಾಗಿದೆ.

ತಯಾರಿ ಸಮಯ: 2 ಗಂಟೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : ಇಬ್ಬರಿಗೆ
ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
 1. 1/2 ಕಪ್ ಹೆಸರುಬೇಳೆ
 2. 1 ತುರಿದ ಕ್ಯಾರೆಟ್
 3. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
 4. 2 ಟೇಬಲ್ ಸ್ಪೂನ್ ತೆಂಗಿನತುರಿ
 5. 1/2 ಟೀಸ್ಪೂನ್ ನಿಂಬೇ ರಸ
 6. 1 ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
 7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

 1. 1 ಒಣ ಮೆಣಸಿನಕಾಯಿ
 2. 1/4 ಟೀಸ್ಪೂನ್ ಸಾಸಿವೆ
 3. 1 ಟೀಸ್ಪೂನ್ ಅಡುಗೆ ಎಣ್ಣೆ

ಮಾಡುವ ವಿಧಾನ:

 1. ಹೆಸರುಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ಕ್ಯಾರೆಟ್, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನಂತ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
 2. ಈಗ ಒಂದು ಬೌಲ್ ತೆಗೆದುಕೊಂಡು, ಸಿದ್ಧ ಮಾಡಿಟ್ಟುಕೊಂಡ ಎಲ್ಲಾ ಪದಾರ್ಥಗಳನ್ನು ಹಾಕಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಕಲಸಿ. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...