ಬುಧವಾರ, ಮಾರ್ಚ್ 27, 2019

Nimbehannu and kamakasthuri seeds juice recipe in Kannada | ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು

Nimbehannu and kamakasthuri seeds juice recipe in Kannada

Nimbehannu and kamakasthuri seeds juice recipe in Kannada | ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ 



ಹೆಸರುಕಾಳು ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ನಿಂಬೆಹಣ್ಣು 
  2. 2 ಟೇಬಲ್ ಚಮಚ ಕಾಮಕಸ್ತುರಿ ಬೀಜ ಅಥವಾ ಸಬ್ಜ ಬೀಜ
  3. 1/2 ಕಪ್ ಸಕ್ಕರೆ ಅಥವಾ ಬೆಲ್ಲ 
  4. ಅಗತ್ಯವಿದ್ದಷ್ಟು ನೀರು
  5. ಐಸ್ ಕ್ಯೂಬ್ಸ್

ಬೇಕಾಗುವ ಪದಾರ್ಥಗಳು (ಬೇಕಾದಲ್ಲಿ ಉಪಯೋಗಿಸಿ):

  1. 1 ಏಲಕ್ಕಿ
  2. ಸ್ವಲ್ಪ ಕಿತ್ತಳೆ ಹಣ್ಣಿನ ರಸ
  3. ಜಜ್ಜಿದ ಶುಂಠಿ ಮತ್ತು ಪುದಿನ 
  4. ಸ್ವಲ್ಪ ಅನಾನಸ್ ಹಣ್ಣಿನ ರಸ

ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ:

  1. 1/2 ಕಪ್ ಸಕ್ಕರೆ (ಅಥವಾ ಬೆಲ್ಲ) ಮತ್ತು 1/2 ಕಪ್ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  2. ಸಕ್ಕರೆ ಅಥವಾ ಬೆಲ್ಲ ಕರಗುವವರೆಗೆ ಬಿಸಿ ಮಾಡಿ. ಸ್ಟವ್ ಆಫ್ ಮಾಡಿ, ಬಿಸಿಆರಲು ಬಿಡಿ. 
  3. ಒಂದು ಬಟ್ಟಲಿನಲ್ಲಿ ಕಾಮಕಸ್ತುರಿ ಬೀಜವನ್ನು ಅರ್ಧ ಕಪ್ ನೀರಿನಲ್ಲಿ ಹತ್ತು ನಿಮಿಷ ನೆನೆಸಿಡಿ. 
  4. ಒಂದು ಬಾಟಲಿ ಅಥವಾ ಮುಚ್ಚಳ ಗಟ್ಟಿ ಇರುವ ಪಾತ್ರೆಯಲ್ಲಿ, ನೆನೆಸಿದ ಕಾಮಕಸ್ತುರಿ ಬೀಜ, ಸಕ್ಕರೆ ನೀರು, ನಿಂಬೆಹಣ್ಣಿನ ರಸ, ಅರ್ಧ ಕಪ್ ಐಸ್ ಕ್ಯೂಬ್ಸ್ ಮತ್ತು ಅರ್ಧ ಕಪ್ ನೀರು ತೆಗೆದುಕೊಳ್ಳಿ. 
  5. ಬೇಕಾದಲ್ಲಿ ಏಲಕ್ಕಿ ಅಥವಾ ಕಿತ್ತಳೆ ಹಣ್ಣಿನ ರಸ ಅಥವಾ ಜಜ್ಜಿದ ಶುಂಠಿ-ಪುದಿನ ಅಥವಾ ಅನಾನಸ್ ಹಣ್ಣಿನ ರಸ ಸೇರಿಸಬಹುದು. 
  6. ನಂತ್ರ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ. ಕುಡಿಯಲು ನೀಡಿ. 

ಸೋಮವಾರ, ಮಾರ್ಚ್ 25, 2019

Pop corn recipe in Kannada | ಪಾಪ್ ಕಾರ್ನ್ ಮಾಡುವ ವಿಧಾನ

Pop corn recipe in Kannada

Pop corn recipe in Kannada | ಪಾಪ್ ಕಾರ್ನ್ ಮಾಡುವ ವಿಧಾನ 

ಪಾಪ್ ಕಾರ್ನ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಒಣಗಿದ ಮೆಕ್ಕೆಜೋಳ
  2. 1/4 ಟೀಸ್ಪೂನ್ ಉಪ್ಪು 
  3. ದೊಡ್ಡ ಚಿಟಿಕೆ ಅರಿಶಿನ
  4. 1 ಟೇಬಲ್ ಚಮಚ ಎಣ್ಣೆ
  5. ಚಿಟಿಕೆ ಅಚ್ಚಖಾರದ ಪುಡಿ (ಬೇಕಾದಲ್ಲಿ)
  6. ಚಿಟಿಕೆ ಚಾಟ್ ಮಸಾಲಾ (ಬೇಕಾದಲ್ಲಿ)

ಪಾಪ್ ಕಾರ್ನ್ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿಮಾಡಿ.
  2. ಅದಕ್ಕೆ ಒಣಗಿದ ಜೋಳವನ್ನು ಸೇರಿಸಿ. 
  3. ಜೊತೆಗೆ ಉಪ್ಪು ಮತ್ತು ಅರಿಶಿನ ಸೇರಿಸಿ. 
  4. ದೊಡ್ಡ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ. ಜೊತೆಯಲ್ಲೇ, ಕುಕ್ಕರ್ ಮುಚ್ಚಳವನ್ನು ವೆಯಿಟ್ ಮತ್ತು ಗ್ಯಾಸ್ಕೆಟ್ ತೆಗೆದು ಹತ್ತಿರ ಇಟ್ಟುಕೊಳ್ಳಿ.  
  5. ಜೋಳ ಅರಳಲು ಅಥವಾ ಪಾಪ್ ಆಗಲು ಪ್ರಾರಂಭವಾದ ಕೂಡಲೇ, ಮುಚ್ಚಳ ಮುಚ್ಚಿ. ಸ್ಟವ್ ಮಧ್ಯಮ ಉರಿಯಲ್ಲಿಡಿ. ಗಮನಿಸಿ... ವೆಯಿಟ್ ಇಲ್ಲ ಮತ್ತು ಗ್ಯಾಸ್ಕೆಟ್ ಇಲ್ಲ. 
  6. ಜೋಳ ಅರಳುವ ಸದ್ದು ಕಡಿಮೆ ಆದ ಕೂಡಲೇ ಸ್ಟವ್ ಆಫ್ ಮಾಡಿ. 
  7. ಮುಚ್ಚಳ ತೆಗೆದು, ಬೇಕಾದಲ್ಲಿ ಅಚ್ಚಖಾರದ ಪುಡಿ ಮತ್ತು ಚಾಟ್ ಮಸಾಲಾ ಅಥವಾ ಇನ್ನಾವುದೇ ಮಸಾಲಾ ಸೇರಿಸಿ. ಸವಿದು ಆನಂದಿಸಿ.

ಶುಕ್ರವಾರ, ಮಾರ್ಚ್ 22, 2019

Genasale recipe in Kannada | ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ

Genasale recipe in Kannada

Genasale recipe in Kannada | ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ

ಗೆಣಸಾಲೆ ಅಥವಾ ಕಡುಬು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ನಾನು ದೋಸೆ ಅಕ್ಕಿ ಉಪಯೋಗಿಸಿದ್ದೇನೆ)
  2. 0.5 ಕಪ್ ತೆಂಗಿನ ತುರಿ
  3. ಉಪ್ಪು ರುಚಿಗೆ ತಕ್ಕಷ್ಟು.
  4. 0.5 ಕಪ್ ಉದ್ದಿನಬೇಳೆ 
  5. 2 ಸೆಮೀ ಉದ್ದದ ಶುಂಠಿ
  6. 2 - 3 ಹಸಿರುಮೆಣಸಿನಕಾಯಿ
  7. ದೊಡ್ಡ ಚಿಟಿಕೆ ಇಂಗು
  8. ಬಾಳೆಎಲೆ

ಸಿಹಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 0.5 ಕಪ್ ತೆಂಗಿನ ತುರಿ
  2. 1/4 ಕಪ್ ಬೆಲ್ಲ

ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು 2 - 3 ಘಂಟೆ ಕಾಲ ನೆನೆಸಿ.
  2. ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆಯನ್ನು 2 - 3 ಘಂಟೆ ಕಾಲ ನೆನೆಸಿ.
  3. ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಟ್ಟುಕೊಳ್ಳಿ. 
  4. ಅಕ್ಕಿ ನೆನೆದ ಮೇಲೆ, ತೆಂಗಿನಕಾಯಿ ಮತ್ತು ಉಪ್ಪಿನೊಂದಿಗೆ, ಅಗತ್ಯವಿರುವಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ಅರೆಯಿರಿ. 
  5. ಹಿಟ್ಟು ಮಿಲ್ಕ್ ಶೇಕ್ ಗಿಂತ ಸ್ವಲ್ಪ ಗಟ್ಟಿ ಇರಲಿ. ಒಂದು ಪಾತ್ರೆಗೆ ಬಗ್ಗಿಸಿಡಿ.
  6. ಉದ್ದಿನಬೇಳೆಯನ್ನು, ಶುಂಠಿ, ಹಸಿಮೆಣಸು ಮತ್ತು ಉಪ್ಪಿನ ಜೊತೆ, ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  7. ಹಿಟ್ಟು ದಪ್ಪ ದೋಸೆ ಹಿಟ್ಟಿನಂತಿರಲಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಇಂಗು ಸೇರಿಸಿ ಕಲಸಿಟ್ಟುಕೊಳ್ಳಿ. 
  8. ನಂತ್ರ ಇಡ್ಲಿ ಪಾತ್ರೆಯಲ್ಲಿ ನೀರು ಕಾಯಲು ಇಡೀ. 
  9. ಆಮೇಲೆ ಬಾಳೆಎಲೆ ತೆಗೆದುಕೊಂಡು, ಒಂದು ಸೌಟು ಅಕ್ಕಿ ಹಿಟ್ಟನ್ನು ಹರಡಿ. 
  10. ಮೇಲಿನಿಂದ ಉದ್ದಿನಹಿಟ್ಟನ್ನು ಹರಡಿ. 
  11. ಬಾಳೆಎಲೆಯನ್ನು ಮಡಚಿ, ಇಡ್ಲಿ ಪಾತ್ರೆಯಲ್ಲಿಡಿ.
  12. ಸಿಹಿ ಮಾಡಲು, ಅಕ್ಕಿ ಹಿಟ್ಟಿನ ಮೇಲೆ ಪುಡಿಮಾಡಿದ ಬೆಲ್ಲ ಮತ್ತು ತೆಂಗಿನತುರಿಯ ಮಿಶ್ರಣ ಹರಡಿ. 
  13. ಹೀಗೆ ಎಲ್ಲ ಕಡುಬನ್ನು ಬಾಳೆಎಲೆಯಲ್ಲಿ ಮಡಚಿ ಇಟ್ಟು, 15 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. 
  14. ಖಾರ ಕಡುಬನ್ನು ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ. ಸಿಹಿಯನ್ನು ತುಪ್ಪದೊಂದಿಗೆ ಬಡಿಸಿ.

Related Posts Plugin for WordPress, Blogger...