ಬುಧವಾರ, ಫೆಬ್ರವರಿ 6, 2019

Jeera rice recipe in Kannada | ಜೀರಾ ರೈಸ್ ಮಾಡುವ ವಿಧಾನ

Jeera rice recipe in Kannada

Jeera rice recipe in Kannada | ಜೀರಾ ರೈಸ್ ಮಾಡುವ ವಿಧಾನ 

ಜೀರಾ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಬಾಸಮತಿ ಅಕ್ಕಿ
  2. 2 ಟೇಬಲ್ ಚಮಚ ತುಪ್ಪ
  3. 2 ಚಮಚ ಜೀರಿಗೆ
  4. 1 ಸಣ್ಣ ಪುಲಾವ್ ಎಲೆ
  5. 1 ಏಲಕ್ಕಿ
  6. 1/2 ಬೆರಳುದ್ದ ಚಕ್ಕೆ 
  7. 5 - 6 ಲವಂಗ
  8. 1-2 ಹಸಿರುಮೆಣಸಿನಕಾಯಿ
  9. 1/2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
  10. 4 ಕಪ್ ನೀರು
  11.  ಉಪ್ಪು ರುಚಿಗೆ ತಕ್ಕಷ್ಟು

ಅಲಂಕಾರಕ್ಕೆ ಬೇಕಾಗುವ ಪದಾರ್ಥಗಳು:

  1. 5 ಗೋಡಂಬಿ
  2. 1/4 ಈರುಳ್ಳಿ ಉದ್ದವಾಗಿ ಸೀಳಿದ್ದು

ಜೀರಾ ರೈಸ್ ಮಾಡುವ ವಿಧಾನ:

  1. ಅಕ್ಕಿ ತೊಳೆದು, ನೀರು ಬಗ್ಗಿಸಿ, 20 ನಿಮಿಷ ನೆನೆಸಿಡಿ. 
  2. ಕುಕ್ಕರ್ ನಲ್ಲಿ  ತುಪ್ಪ ತೆಗೆದುಕೊಂಡು ಬಿಸಿ ಮಾಡಿ.  ಅದಕ್ಕೆ  ಜೀರಿಗೆ ಹಾಕಿ. 
  3. ಕೂಡಲೇ ಪುಲಾವ್ ಎಲೆ, ಏಲಕ್ಕಿ, ಚಕ್ಕೆ ಮತ್ತು ಲವಂಗ ಸೇರಿಸಿ. 
  4. ಜೊತೆಯಲ್ಲಿ ಸಣ್ಣದಾಗಿ ಕತ್ತರಿಸಿದ ಶುಂಠಿ (ಬೇಕಾದಲ್ಲಿ) ಮತ್ತು ಸೀಳಿದ ಹಸಿಮೆಣಸನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. 
  5. ನಂತರ ತೊಳೆದಿಟ್ಟ ಅಕ್ಕಿ ಹಾಕಿ 10 - 15 ಸೆಕೆಂಡ್ ಕಾಲ ಹುರಿಯಿರಿ. 
  6. ನೀರು ಹಾಕಿ ಮಗುಚಿ.
  7. ಉಪ್ಪು ಸೇರಿಸಿ ಪುನಃ ಮಗುಚಿ. 
  8. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಮಾಡಿ. 
  9. ಒತ್ತಡ ಇಳಿದ ಕೂಡಲೇ ಒಂದು ಫೋರ್ಕ್ ಅಥವಾ ಸಟ್ಟುಗ ತೆಗೆದುಕೊಂಡು ಮುದ್ದೆಯಾಗದಂತೆ ಬಿಡಿಸಿ ಅಥವಾ ಹರಡಿ. ಟೊಮೆಟೊ ಸಾಸ್, ಕೂರ್ಮ, ರಾಯಿತ ಅಥವಾ ಉಪ್ಪಿನಕಾಯಿ ಜೊತೆ ಬಡಿಸಿ.
  10. ಅಲಂಕಾರಕ್ಕೆ ಗೋಡಂಬಿ ಮತ್ತು ಈರುಳ್ಳಿ ಹುರಿದು, ಬಡಿಸುವ ಮೊದಲು ಹಾಕಿ ಕೊಡಬಹುದು. 

ಸೋಮವಾರ, ಫೆಬ್ರವರಿ 4, 2019

Rava bread toast recipe in Kannada | ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ

Rava bread toast recipe in Kannada

Rava bread toast recipe in Kannada | ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ 

ರವೇ ಟೋಸ್ಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 6- 8 ಬ್ರೆಡ್ ಸ್ಲೈಸ್
  2. 1/4 ಕಪ್ ಮೊಸರು 
  3. 1/4 ಕಪ್ ನೀರು
  4. 2 ಟೇಬಲ್ ಚಮಚ ಈರುಳ್ಳಿ
  5. 2 ಟೇಬಲ್ ಚಮಚ ದೊಣ್ಣೆಮೆಣಸು
  6. 2 ಟೇಬಲ್ ಚಮಚ ಟೊಮೇಟೊ
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  8. 1 ಹಸಿರುಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ನಿಮ್ಮ ಖಾರಕ್ಕೆ ತಕ್ಕಂತೆ)
  9. ಸ್ವಲ್ಪ ಶುಂಠಿ ಅಥವಾ ಇಂಗು (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು.

ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರವೇ ತೆಗೆದುಕೊಂಡು, ಮೊಸರು ಮತ್ತು ನೀರು ಹಾಕಿ. 
  2. ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸು, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸು ಸೇರಿಸಿ. ಬೇಕಾದಲ್ಲಿ ಶುಂಠಿ ಮತ್ತು ಇಂಗು ಸೇರಿಸಿ.
  3. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  4. ಚೆನ್ನಾಗಿ ಕಲಸಿ, ಬ್ರೆಡ್ ಮೇಲೆ ತೆಳುವಾಗಿ ಹರಡಿ. 
  5.  ತವಾ ಬಿಸಿ ಮಾಡಿ. ಸ್ವಲ್ಪ ಬೆಣ್ಣೆ ಬಿಸಿ ಮಾಡಿ, ಮೊದಲಿಗೆ ರವ ಮಿಶ್ರಣ ಹಚ್ಚಿದ ಬದಿ ಕಾಯಿಸಿ. 
  6. ಇನ್ನೊಂದು ಬದಿಗೆ ಬೆಣ್ಣೆ ಹಚ್ಚಿ, ಎರಡು ಬದಿ ಕಂದು ಬಣ್ಣ ಮತ್ತು ಗರಿಗರಿಯಾಗುವವರೆಗೆ ಕಾಯಿಸಿ. ಸವಿದು ಆನಂದಿಸಿ. 


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಫೆಬ್ರವರಿ 1, 2019

Carrot uppinakayi recipe in Kannada | ದಿಢೀರ್ ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ

Carrot uppinakayi recipe in Kannada

Carrot uppinakayi recipe in Kannada | ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ

ಕ್ಯಾರಟ್ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೆಚ್ಚಿದ ಕ್ಯಾರಟ್
  2. 1 ದೊಡ್ಡ ನಿಂಬೆಹಣ್ಣು
  3. 5 - 6 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 7 - 8 ಮೆಂತೆ
  7. 12 ಟೇಬಲ್ ಚಮಚ ಉಪ್ಪು

ದಿಢೀರ್ ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ:

  1. ಒಂದು ಪಾತ್ರೆ ಯಲ್ಲಿ ಸಣ್ಣಗೆ ಕತ್ತರಿಸಿದ ಕ್ಯಾರಟ್ ತೆಗೆದುಕೊಳ್ಳಿ.  
  2. ಅದಕ್ಕೆ ಉಪ್ಪು ಮತ್ತು ನಿಂಬೆರಸ ಹಾಕಿ. ಚೆನ್ನಾಗಿ ಮಗುಚಿ ಐದು ನಿಮಿಷ ನೆನೆಯಲು ಬಿಡಿ. 
  3. ಈಗ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  4. ಆ ಪುಡಿಯನ್ನು ಉಪ್ಪು ಮತ್ತು ನಿಂಬೆರಸ ಬೆರೆಸಿದ ಕ್ಯಾರಟ್ ಗೆ ಹಾಕಿ, ಚೆನ್ನಾಗಿ ಮಗುಚಿ. 
  5. ಕೊನೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. 
  6. ರುಚಿಕರ ಕ್ಯಾರಟ್ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಫ್ರಿಡ್ಜ್ ನಲ್ಲಿ ಒಂದು ವಾರ ಇಡಬಹುದು. 
Related Posts Plugin for WordPress, Blogger...