ಬುಧವಾರ, ನವೆಂಬರ್ 8, 2017

Beetroot halwa recipe in Kannada | ಬೀಟ್ರೂಟ್ ಹಲ್ವಾ ಮಾಡುವ ವಿಧಾನ

Beetroot halwa recipe in Kannada

Beetroot halwa recipe in Kannada |ಬೀಟ್ರೂಟ್ ಹಲ್ವಾ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಬೀಟ್ರೂಟ್ ತುರಿ ಅಥವಾ 1 ದೊಡ್ಡ ಗಾತ್ರದ ಬೀಟ್ರೂಟ್
  2. 1 ಕಪ್ ಹಾಲು
  3. 1/4 ಕಪ್ ಸಕ್ಕರೆ
  4. 2 ಟೇಬಲ್ ಸ್ಪೂನ್ ತುಪ್ಪ
  5. 1 ಟೇಬಲ್ ಸ್ಪೂನ್ ಗೋಡಂಬಿ ಕತ್ತರಿಸಿದ್ದು
  6. 1/4 ಟೀಸ್ಪೂನ್ ಏಲಕ್ಕಿ ಪುಡಿ

ಬೀಟ್ರೂಟ್ ಹಲ್ವಾ ಮಾಡುವ ವಿಧಾನ:

  1. ಬೀಟ್ರೂಟ್ ನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ.
  2. ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಹಾಕಿ. ಬಿಸಿ ಮಾಡಿ. 
  3. ಬೀಟ್ರೂಟ್ ತುರಿ ಹಾಕಿ, ಬೀಟ್ರೂಟ್ ಮೆತ್ತಗಾಗುವವರೆಗೆ ಹುರಿಯಿರಿ.
  4. ನಂತರ ಹಾಲು ಸೇರಿಸಿ.
  5. ದೊಡ್ಡ ಮಧ್ಯಮ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಬೇಯಿಸಿ. 
  6. ಹಾಲು ಕಡಿಮೆ ಆದಾಗ ಸಕ್ಕರೆ ಸೇರಿಸಿ. 
  7. ಹಲ್ವಾ ನೀರಾರುತ್ತ ಬಂದಾಗ ಕತ್ತರಿಸಿದ ಗೋಡಂಬಿ ಮತ್ತು ಇನ್ನೊಂದು ಟೇಬಲ್ ಚಮಚ ತುಪ್ಪ ಹಾಕಿ. 
  8. ಆಗಾಗ್ಯೆ ಮಗುಚುತ್ತಾ ಇರಿ. ಉರಿ ಕಡಿಮೆ ಇರಲಿ. 
  9. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಮಗುಚಿ. 
  10. ಹಲ್ವಾದ ನೀರು ಸಂಪೂರ್ಣ ಆರುತ್ತಾ ಬಂದಾಗ ಸ್ಟೋವ್ ಆಫ್ ಮಾಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.

ಶುಕ್ರವಾರ, ನವೆಂಬರ್ 3, 2017

Cutlet recipe in Kannada | ಕಟ್ಲೆಟ್ ಮಾಡುವ ವಿಧಾನ

Cutlet recipe in Kannada

Cutlet recipe in Kannada | ಕಟ್ಲೆಟ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಆಲೂಗಡ್ಡೆ
  2. 1/2 ಕಪ್ ಹಸಿ ಬಟಾಣಿ 
  3. 1/2 ಟೀಸ್ಪೂನ್ ಜೀರಿಗೆ 
  4. 1 ಈರುಳ್ಳಿ 
  5. 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ 
  6. 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು 
  7. 1 ಟೇಬಲ್ ಚಮಚ ನುಣ್ಣಗೆ ಕತ್ತರಿಸಿದ ಪುದಿನ (ಬೇಕಾದಲ್ಲಿ) 
  8. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ 
  9. 1/2 ಟೀಸ್ಪೂನ್ ಗರಂ ಮಸಾಲಾ 
  10. 1 ಟೀಸ್ಪೂನ್ ನಿಂಬೆ ರಸ (ಬೇಕಾದಲ್ಲಿ) 
  11. 4 ಬ್ರೆಡ್
  12. 2 ಟೇಬಲ್ ಚಮಚ ಜೋಳದ ಹಿಟ್ಟು
  13. ಉಪ್ಪು ರುಚಿಗೆ ತಕ್ಕಷ್ಟು 
  14. ಎಣ್ಣೆ ಕಾಯಿಸಲು

ಕಟ್ಲೆಟ್ ಮಾಡುವ ವಿಧಾನ:

  1. ಆಲೂಗಡ್ಡೆ ಮತ್ತು ಹಸಿಬಟಾಣಿಯನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆ ಸಿಪ್ಪೆ ತೆಗೆಯಿರಿ. ಎರಡನ್ನು ಮ್ಯಾಶ್ ಮಾಡಿ ಅಥವಾ ಹಿಸುಕಿ.  
  2.  2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ಜೀರಿಗೆ ಹಾಕಿ. 
  3. ಜೀರಿಗೆ ಸಿಡಿದ ಮೇಲೆ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ. 
  4. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೇರಿಸಿ ಹುರಿಯಿರಿ. 
  5. ಬೇಯಿಸಿ, ಹಿಸುಕಿದ ಆಲೂಗಡ್ಡೆ ಮತ್ತು ಹಸಿಬಟಾಣಿ ಹಾಕಿ ಕಲಸಿ. 
  6. ನಂತರ ಅಚ್ಚ ಖಾರದ ಪುಡಿ, ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ ಕಲಸಿ. ಬೇಕಾದಲ್ಲಿ ನಿಂಬೆರಸ ಹಾಕಿ. ಸ್ಟವ್ ಆಫ್ ಮಾಡಿ. 
  7. ಎರಡು ಬ್ರೆಡ್ ನ್ನು ನೀರಿನಲ್ಲಿ ಹಾಕಿ, ಹಿಂಡಿ ತೆಗೆದು ಸೇರಿಸಿ ಕಲಸಿ.  
  8. ನಂತ್ರ ಒಂದು ಬಟ್ಟಲಿನಲ್ಲಿ ಜೋಳದ ಹಿಟ್ಟು ಮತ್ತು ನೀರು ಹಾಕಿ ತೆಳುವಾದ ದೋಸೆ ಹಿಟ್ಟಿನಂತೆ ಮಾಡಿಕೊಳ್ಳಿ. 
  9. ಉಳಿದ ಎರಡು ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟು ಕೊಳ್ಳಿ. 
  10. ಮಸಾಲೆ ಹಾಕಿ ಸಿದ್ದ ಪಡಿಸಿದ ಆಲೂಗಡ್ಡೆ ಮಿಶ್ರಣದಿಂದ ಚಪ್ಪಟೆಯಾದ ಕಟ್ಲೇಟ್ ಗಳನ್ನೂ ಮಾಡಿಕೊಳ್ಳಿ. 
  11. ಅದನ್ನು ಮೊದಲು ಜೋಳದ ಹಿಟ್ಟಿನಲ್ಲಿ ಅದ್ದಿ ತೆಗೆದು, ನಂತ್ರ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ. ಹೀಗೆ ಎಲ್ಲ ಕಟ್ಲೇಟ್ ಗಳನ್ನೂ ಸಿದ್ದ ಪಡಿಸಿಕೊಳ್ಳಿ. 
  12. ದೋಸೆ ಕಾವಲಿಯಲ್ಲಿ ಸ್ವಲ್ಪ ಎಣ್ಣೆ ಚಿಮುಕಿಸಿ ಬಿಸಿ ಮಾಡಿ. 
  13. ತಯಾರಿಸದ ಕಟ್ಲೇಟ್ ನ್ನು ಅಗತ್ಯವಿದ್ದಷ್ಟು ಎಣ್ಣೆ ಚಿಮುಕಿಸಿ ಎರಡು ಬದಿ ಕಾಯಿಸಿ. ಬಿಸಿ ಬಿಸಿಯಾಗಿ ಬಡಿಸಿ. 


ಗುರುವಾರ, ನವೆಂಬರ್ 2, 2017

Matvadi palya recipe in Kannada | ಮಟವಾಡಿ ಪಲ್ಯ ಮಾಡುವ ವಿಧಾನ

Matvadi palya recipe in Kannada

Matvadi palya recipe in Kannada | ಮಟವಾಡಿ ಪಲ್ಯ ಮಾಡುವ ವಿಧಾನ 

ಮಾಟವಾಡಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1ಕಪ್ ತೊಗರಿಬೇಳೆ 
  2. 4 ಕಪ್ ಹೆಚ್ಚಿದ ಮೆಂತ್ಯ ಸೊಪ್ಪು
  3. 2 - 4 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ 
  4. 1 " ಉದ್ದದ ಶುಂಠಿ
  5. 1/2 ಕಪ್ ತೆಂಗಿನತುರಿ 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 4 ಟೇಬಲ್ ಚಮಚ ಎಣ್ಣೆ
  2. 1 ಟೀ ಚಮಚ ಸಾಸಿವೆ 
  3. 1 ಟೀ ಚಮಚ ಜೀರಿಗೆ
  4. 1 ಟೀ ಚಮಚ ಉದ್ದಿನಬೇಳೆ 
  5. 1 ಟೀ ಚಮಚ ಕಡ್ಲೆಬೇಳೆ
  6. 1 ಒಣಮೆಣಸು
  7. 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  8. ಒಂದು ದೊಡ್ಡ ಚಿಟಿಕೆ ಇಂಗು 
  9. ಒಂದು ದೊಡ್ಡ ಚಿಟಿಕೆ ಅರಿಶಿನ
  10. ನಿಮ್ಮ ರುಚಿ ಪ್ರಕಾರ ಉಪ್ಪು
  11. ನಿಂಬೆರಸ (ಬೇಕಾದಲ್ಲಿ)

ಮಟವಾಡಿ ಪಲ್ಯ ಮಾಡುವ ವಿಧಾನ:

  1. ಬೇಳೆಯನ್ನು ತೊಳೆದು 2 ಘಂಟೆಗಳ ಕಾಲ ನೆನೆಸಿಡಿ. 
  2. ನೆನೆದ ನಂತರ ನೀರು ಬಗ್ಗಿಸಿ. ಹಸಿರುಮೆಣಸಿನಕಾಯಿ ಮತ್ತು ಶುಂಠಿಯೊಂದಿಗೆ, ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ. 
  3. ಅದಕ್ಕೆ ಹೆಚ್ಚಿದ ಮೆಂತ್ಯ ಸೊಪ್ಪು ಮತ್ತು ತೆಂಗಿನತುರಿ ಹಾಕಿ ಕಲಸಿ. 
  4. ೧೫ ನಿಮಿಷಗಳ ಕಾಲ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. ನಂತ್ರ ಪುಡಿಪುಡಿ ಮಾಡಿಟ್ಟುಕೊಳ್ಳಿ. 
  5. ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. 
  6. ಅದಕ್ಕೆ ಪುಡಿ ಮಾಡಿಟ್ಟ ಬೇಳೆ ಮತ್ತು ಮೆಂತ್ಯಸೊಪ್ಪಿನ ಮಿಶ್ರಣ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  7. ಸಣ್ಣ ಉರಿಯಲ್ಲಿ ಬೇಯಿಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. 
  8. ಕೊನೆಯಲ್ಲಿ ನಿಂಬೆರಸ ಹಾಕಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ. 


Related Posts Plugin for WordPress, Blogger...