ಮಂಗಳವಾರ, ಅಕ್ಟೋಬರ್ 10, 2017

Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ

Southe pundi or unde kadubu recipe in Kannada

Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಉತ್ತಮ ಗುಣಮಟ್ಟದ ದೋಸೆ ಅಕ್ಕಿ
  2. 1/2 ಕಪ್ ತೆಂಗಿನ ತುರಿ
  3. 1/2ಮುಳ್ಳು ಸೌತೆಕಾಯಿ
  4. 2.5 ಕಪ್ ನೀರು 
  5. ಉಪ್ಪು ರುಚಿಗೆ ತಕ್ಕಷ್ಟು


ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ. 
  3. ಮುಳ್ಳುಸೌತೆಯನ್ನು ಮತ್ತು ತೆಂಗಿನಕಾಯಿಯನ್ನು ತುರಿದಿಡಿ. 
  4. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  5. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಮೊದಲಿಗೆ ತುರಿದ ಮುಳ್ಳು ಸೌತೆ ಮತ್ತು ತೆಂಗಿನ ತುರಿ ಹಾಕಿ. 
  6. ನಂತ್ರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ. 
  7. ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
  8. ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ಸಣ್ಣ ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡಿ, ಹೆಬ್ಬೆರಳಿಂದ ಒಂದು ಗುಳಿಯನ್ನು ಮಾಡಿ. ಅಥವಾ ನಿಮ್ಮಿಷ್ಟದಂತೆ ಚಪ್ಪಟೆ ಅಥವಾ ಗೋಲಾಕಾರದಲ್ಲೂ ಮಾಡಬಹುದು. 
  9. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಬೇಯಿಸುವ ಸಮಯ ಕಡುಬಿನ ಪ್ರಮಾಣದ ಮೇಲೆ ಬದಲಾಗಬಹುದು. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.

ಶುಕ್ರವಾರ, ಅಕ್ಟೋಬರ್ 6, 2017

Instant neer dose recipe in Kannada | ದಿಢೀರ್ ನೀರ್ ದೋಸೆ ಮಾಡುವ ವಿಧಾನ

Instant neer dose recipe in Kannada

Instant neer dose recipe in Kannada | ದಿಢೀರ್ ನೀರ್ ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 1 ಟೇಬಲ್ ಚಮಚ ತೆಂಗಿನ ತುರಿ
  3. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ನೀರ್ ದೋಸೆ ವಿಡಿಯೋ

ದಿಢೀರ್ ನೀರ್ ದೋಸೆ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಅಕ್ಕಿ ಹಿಟ್ಟು ಮತ್ತು ತೆಂಗಿನ ತುರಿ ತೆಗೆದುಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  2. ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  3. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ.
  4. ಕಬ್ಬಿಣದ ಕಾವಲಿ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ನಾನ್-ಸ್ಟಿಕ್ ತವವನ್ನು ಸಹ ಬಳಸಬಹುದು. 
  5. ಸಣ್ಣ ಈರುಳ್ಳಿ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. 
  7. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ. ಚಟ್ನಿಯೊಂದಿಗೆ ಸವಿದು ಆನಂದಿಸಿ.

ಗುರುವಾರ, ಅಕ್ಟೋಬರ್ 5, 2017

Bendekai palya recipe in Kannada | ಬೆಂಡೆಕಾಯಿ ಪಲ್ಯ ಮಾಡುವ ವಿಧಾನ

Bendekai palya recipe in Kannada

Bendekai palya recipe in Kannada | ಬೆಂಡೆಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕೆಜಿ ಬೆಂಡೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 2 - 3 ಟೇಬಲ್ ಚಮಚ ಅಡುಗೆ ಎಣ್ಣೆ
  5. 1 ಒಣ ಮೆಣಸಿನಕಾಯಿ
  6. 1 - 2 ಹಸಿರು ಮೆಣಸಿನಕಾಯಿ
  7. 4 - 5 ಕರಿಬೇವಿನ ಎಲೆ
  8. 2 - 3 ಎಸಳು ಬೆಳ್ಳುಳ್ಳಿ ಅಥವಾ ಚಿಟಿಕೆ ಇಂಗು
  9. 1 ಮಧ್ಯಮ ಗಾತ್ರದ ಈರುಳ್ಳಿ
  10. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  11. 2 ಟೇಬಲ್ ಚಮಚ ಮೊಸರು ಅಥವಾ 1 ಟೇಬಲ್ ಚಮಚ ನಿಂಬೆರಸ
  12. ಉಪ್ಪು ರುಚಿಗೆ ತಕ್ಕಷ್ಟು

ಬೆಂಡೆಕಾಯಿ ಪಲ್ಯ ಮಾಡುವ ವಿಧಾನ:

  1. ಬೆಂಡೆಕಾಯಿಯನ್ನು ತೊಳೆದು, ಕತ್ತರಿಸಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನೂ ಕತ್ತರಿಸಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಒಣ ಮೆಣಸಿನಕಾಯಿ ಹಾಕಿ.  
  4. ನಂತರ  ಕರಿಬೇವಿನ ಎಲೆ, ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ.  
  5. ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.  
  6. ನಂತ್ರ ಕತ್ತರಿಸಿದ ಬೆಂಡೆಕಾಯಿ ಹಾಕಿ ದೊಡ್ಡ ಉರಿಯಲ್ಲಿ ಎರಡು ನಿಮಿಷ ಹುರಿಯಿರಿ.
  7. ಉರಿ ಕಡಿಮೆ ಮಾಡಿ, ಅರಿಶಿನ ಮತ್ತು ಮೊಸರು ಹಾಕಿ. 
  8. ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  9. ಕೊನೆಯಲ್ಲಿ ಉಪ್ಪು ಹಾಕಿ, ಚೆನ್ನಾಗಿ ಮಗುಚಿ ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...