Benne biscuit recipe using wheat flour in Kannada | ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ
ಬೆಣ್ಣೆ ಬಿಸ್ಕತ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಗೋಧಿ ಹಿಟ್ಟು
- 1/4 ಕಪ್ ಸಕ್ಕರೆ
- 1/8 ಕಪ್ ತುಪ್ಪ ಅಥವಾ ಎಣ್ಣೆ
ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ:
- ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಉಳಿದ ಪದಾರ್ಥಗಳನ್ನು ಅಳತೆ ಪ್ರಕಾರ ತೆಗೆದುಕೊಳ್ಳಿ.
- ಒಂದು ಬಟ್ಟಲಿನಲ್ಲಿ ಸಕ್ಕರೆ ಪುಡಿ ಮತ್ತು ತುಪ್ಪ (ಅಥವಾ ಎಣ್ಣೆ) ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ಆಮೇಲೆ ಸ್ವಲ್ಪ ಸ್ವಲ್ಪ ಗೋಧಿ ಹಿಟ್ಟು ಸೇರಿಸುತ್ತ ಮೃದುವಾದ ಹಿಟ್ಟನ್ನು ಕಲಸಿಕೊಳ್ಳಿ.
- ಸಣ್ಣ ನೆಲ್ಲಿಕಾಯಿ ಗಾತ್ರದ ಚಪ್ಪಟೆ ಉಂಡೆಗಳನ್ನು ಮಾಡಿ.
- ಬಿಸ್ಕೆಟ್ನ ಮೇಲೆ ಮ್ಮಿಷ್ಟದ ಡಿಸೈನ್ ಮಾಡಬಹುದು.
- ಒಂದು ಪ್ಲೇಟ್ ಅಥವಾ ಟ್ರೇ ಗೆ ತುಪ್ಪ ಸವರಿ. ನಾನು ಮಿನಿ ಇಡ್ಲಿ ಪ್ಲೇಟ್ ಬಳಸಿದ್ದೇನೆ.
- ತುಪ್ಪ ಸವರಿದ ಪ್ಲೇಟ್ ಮೇಲೆ ಮಾಡಿದ ಬಿಸ್ಕೆಟ್ಸ್ ಇಡಿ.
- ಒಂದು ದಪ್ಪ ತಳದ ಬಾಣಲೆ ಒಳಗೆ ಒಂದು ಸ್ಟಾಂಡ್ ಇಟ್ಟು, ಒಂದೆರಡು ನಿಮಿಷ ಬಿಸಿಮಾಡಿಕೊಳ್ಳಿ.
- ಆಮೇಲೆ ಬಿಸ್ಕೆಟ್ಸ್ ಇರುವ ಪ್ಲೇಟ್ ಇಟ್ಟು ಮುಚ್ಚಳ ಮುಚ್ಚಿ, 12 - 15 ನಿಮಿಷ ಬೇಯಿಸಿ.
- ಸುಮಾರು ಹತ್ತು ನಿಮಿಷದ ನಂತ್ರ ನಿಮಿಷಕ್ಕೊಮ್ಮೆ ಬಿಸ್ಕೆಟ್ನ ಕೆಳಭಾಗ ನೋಡಿ. ಒಳ್ಳೆಯ ಘಮ ಮತ್ತು ಕೆಳಭಾಗ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ ಸಾಕು.
- ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಬಿಸ್ಕೆಟ್ಸ್ ತೆಗೆಯಿರಿ. ಸವಿದು ಆನಂದಿಸಿ. ಜಾಸ್ತಿ ಮಾಡುವುದಾದಲ್ಲಿ ಇನ್ನೊಂದು ಬಿಸ್ಕೆಟ್ ಇರುವ ಪ್ಲೇಟ್ ಇಟ್ಟು ಬೇಯಿಸುವುದನ್ನು ಮುಂದುವರೆಸಿ.
- ಮೈಕ್ರೋವೇವ್ ಓವೆನ್ ನಲ್ಲಿ (200W) 2- 3 ನಿಮಿಷ. ಮಾಮೂಲಿ ಓವೆನ್ ನಲ್ಲಿ (180deg) 10 - 12 ನಿಮಿಷ ಬೇಯಿಸಿ ಮಾಡಬಹುದು. ಸಮಯ ಓವೆನ್ ನಿಂದ ಓವೆನ್ ಗೆ ಬದಲಾಗಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ