Beetroot undlaka recipe in Kannada | ಬೀಟ್ರೂಟ್ ಉಂಡ್ಲಕ ಮಾಡುವ ವಿಧಾನ
ಬೀಟ್ರೂಟ್ ಉಂಡ್ಲಕ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಅಕ್ಕಿ ಹಿಟ್ಟು
- ಅರ್ಧ ಬೀಟ್ರೂಟ್ (ಅರ್ಧ ಕಪ್ ಗಿಂತ ಸ್ವಲ್ಪ ಕಡಿಮೆ)
- 1/4 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
- ಸ್ವಲ್ಪ ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು
ಸಿಹಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಟೇಬಲ್ ಚಮಚ ತೆಂಗಿನ ತುರಿ
- 2 ಟೇಬಲ್ ಚಮಚ ಬೆಲ್ಲ
ಖಾರಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನಬೇಳೆ
- ಸ್ವಲ್ಪ ಕರಿಬೇವು
- 1 ಹಸಿಮೆಣಸಿನಕಾಯಿ
- ಚಿಟಿಕೆ ಅರಿಶಿನ
- ಚಿಟಿಕೆ ಇಂಗು
- ಉಪ್ಪು ರುಚಿಗೆ ತಕ್ಕಷ್ಟು
- 2 ಟೇಬಲ್ ಚಮಚ ತೆಂಗಿನ ತುರಿ
- 2 ಟೀಸ್ಪೂನ್ ಅಡುಗೆ ಎಣ್ಣೆ
ಬೀಟ್ರೂಟ್ ಉಂಡ್ಲಕ ಮಾಡುವ ವಿಧಾನ:
- ಬೀಟ್ರೂಟ್ ಸಿಪ್ಪೆ ತೆಗೆದು, ಕತ್ತರಿಸಿಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ಬೀಟ್ರೂಟ್ ಅನ್ನು ನುಣ್ಣಗೆ ಅರೆದುಕೊಳ್ಳಿ.
- ಅರೆದ ಬೀಟ್ರೂಟ್ ಪೇಸ್ಟ್ ನ್ನು ಒಂದು ಬಾಣಲೆಯಲ್ಲಿ ಹಾಕಿ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ.
- ಕುದಿಯಲು ಪ್ರಾರಂಭವಾದ ಕೂಡಲೇ, ಬೀಟ್ರೂಟ್ ಪೇಸ್ಟ್ ನ ಅರ್ಧದಷ್ಟು ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
- ನಂತರ, ಅಗತ್ಯವಿದ್ದಲ್ಲಿ ಸ್ವಲ್ಪ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. ಮುಚ್ಚಳ ಮುಚ್ಚಿ ಬಿಸಿ ಆರಲು ಬಿಡಿ.
- ಬಿಸಿ ಆರಿದ ಮೇಲೆ, ಕೈಗೆ ತುಪ್ಪ ಸವರಿಕೊಂಡು, ಸಣ್ಣ ಗೋಲಿ ಗಾತ್ರದ ಉಂಡೆಗಳನ್ನು ಮಾಡಿ.
- ಸೆಕೆಯಲ್ಲಿ (ಆವಿಯಲ್ಲಿ) ತುಪ್ಪ ಸವರಿದ ಪ್ಲೇಟ್ ನಲ್ಲಿಟ್ಟು 10 ನಿಮಿಷ ಬೇಯಿಸಿ. ಬೇಯಿಸಿದ ನಂತ್ರ ಚಟ್ನಿಯೊಂದಿಗೆ ಬಡಿಸಬಹುದು.
- ಅಥವಾ ಒಂದು ಬೌಲ್ ನಲ್ಲಿ ತೆಂಗಿನ ತುರಿ ಮತ್ತು ಬೆಲ್ಲ ಕಲಸಿ. ಅದಕ್ಕೆ ಬೇಯಿಸಿದ ಉಂಡೆಗಳನ್ನು ಹಾಕಿ, ಸಿಹಿ ಬೀಟ್ರೂಟ್ ಉಂಡ್ಲಕ ಮಾಡಿ.
- ಅಥವಾ ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಮಾಡಿ.
- ಅರಿಶಿನ ಮತ್ತು ಇಂಗು ಸೇರಿಸಿ.
- ಈಗ ಬೇಯಿಸಿದ ಉಂಡೆ, ಸ್ವಲ್ಪ ಉಪ್ಪು ಮತ್ತು ಕಾಯಿತುರಿ ಹಾಕಿ, ಚೆನ್ನಾಗಿ ಮಗುಚಿ.
- ಬೆಳಗ್ಗಿನ ತಿಂಡಿ ಅಥವಾ ಸಂಜೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ