Shavige bath recipe in Kannada | ಶಾವಿಗೆ ಬಾತ್ ಮಾಡುವ ವಿಧಾನ
ಶಾವಿಗೆ ಬಾತ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/2 ಕಪ್ ಶಾವಿಗೆ
- 2 ಕಪ್ ನೀರು
- 1 ಟೇಬಲ್ ಚಮಚ ಶೇಂಗಾ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 1 ಟೇಬಲ್ ಚಮಚ ಗೋಡಂಬಿ
- 1 ಸಣ್ಣ ಈರುಳ್ಳಿ
- 2 ಟೇಬಲ್ ಚಮಚ ದೊಣ್ಣೆಮೆಣಸು
- 1-2 ಹಸಿರು ಮೆಣಸಿನಕಾಯಿ
- 5-6 ಕರಿ ಬೇವಿನ ಎಲೆ
- 1/4 ಟೀಸ್ಪೂನ್ ಅರಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 2 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ತೆಂಗಿನತುರಿ
- 1 - 2 ಟೀಸ್ಪೂನ್ ನಿಂಬೆರಸ
ಶಾವಿಗೆ ಬಾತ್ ಮಾಡುವ ವಿಧಾನ:
- ಶಾವಿಗೆಯನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಶೇಂಗಾ ಹಾಕಿ ಹುರಿಯಿರಿ.
- ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಗೋಡಂಬಿ ಹಾಕಿ ಹುರಿಯಿರಿ.
- ಸಾಸಿವೆ ಸಿಡಿದ ಕೂಡಲೇ ಕರಿಬೇವು ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ.
- ಈರುಳ್ಳಿ ಮತ್ತು ದೊಣ್ಣೆಮೆಣಸು ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಮೇಲೆ ಅರಶಿನ ಪುಡಿ, ಇಂಗು ಮತ್ತು ಉಪ್ಪು ಸೇರಿಸಿ.
- ಒಮ್ಮೆ ಮಗುಚಿ ಒಗ್ಗರಣೆಯನ್ನು ಪಕ್ಕಕ್ಕಿಡಿ.
- ನಂತ್ರ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ಶಾವಿಗೆ ಹಾಕಿ ಬೇಯಿಸಿ.
- ಶಾವಿಗೆ ಬೆಂದ ಮೇಲೆ ನೀರು ಬಸಿಯಿರಿ.
- ಬೆಂದ ಶಾವಿಗೆಯನ್ನು ಒಗ್ಗರಣೆ ಇರುವ ಬಾಣಲೆಗೆ ಹಾಕಿ. ಸ್ಟವ್ ಆನ್ ಮಾಡಿ. ಮೇಲಿನಿಂದ ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ.
- ಕೊನೆಯಲ್ಲಿ ನಿಂಬೆರಸ ಸೇರಿಸಿ. ಸ್ಟವ್ ಆಫ್ ಮಾಡಿ. ಒಮ್ಮೆ ಮಗುಚಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ