No coconut chutney recipe Kannada | ತೆಂಗಿನಕಾಯಿ ಹಾಕದೆ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಹುರಿಗಡಲೆ ಅಥವಾ ಕಡ್ಲೆ ಪಪ್ಪು
- 1 - 2 ಒಣಮೆಣಸಿನಕಾಯಿ ಅಥವಾ ಹಸಿಮೆಣಸಿನಕಾಯಿ
- 3 - 4 ಎಸಳು ಬೆಳ್ಳುಳ್ಳಿ (ಅಥವಾ ಚಿಟಿಕೆ ಇಂಗು)
- ಸ್ವಲ್ಪ ಬೆಲ್ಲ (ಬೇಕಾದಲ್ಲಿ)
- ಸ್ವಲ್ಪ ಹುಣಿಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟಿಸ್ಪೂನ್ ಎಣ್ಣೆ
- ಅರ್ಧ ಒಣಮೆಣಸಿನಕಾಯಿ
- 4 ಕರಿಬೇವಿನ ಎಲೆ
- 1/2 ಟಿಸ್ಪೂನ್ ಸಾಸಿವೆ
- 1/2 ಟಿಸ್ಪೂನ್ ಉದ್ದಿನಬೇಳೆ
ತೆಂಗಿನಕಾಯಿ ಹಾಕದೆ ಚಟ್ನಿ ಮಾಡುವ ವಿಧಾನ:
- ಒಂದು ಮಿಕ್ಸಿ ಜಾರಿನಲ್ಲಿ ಹುರಿಗಡಲೆ, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಪುಡಿ ಮಾಡಿಕೊಳ್ಳಿ.
- ರುಚಿಗೆ ತಕ್ಕಂತೆ ಉಪ್ಪು, ಸ್ವಲ್ಪ ಬೆಲ್ಲ, ಸ್ವಲ್ಪ ಹುಣಿಸೇಹಣ್ಣು ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಒಂದು ಬಟ್ಟಲಿಗೆ ತೆಗೆಯಿರಿ.
- ಸಾಸಿವೆ, ಕರಿಬೇವು, ಉದ್ದಿನಬೇಳೆ ಮತ್ತು ಒಣಮೆಣಸಿನಕಾಯಿಯ ಒಗ್ಗರಣೆ ಕೊಡಿ.
- ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ