Shunti chutney recipe in Kannada | ಶುಂಠಿ ಚಟ್ನಿ ಮಾಡುವ ವಿಧಾನ
ಶುಂಠಿ ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಶುಂಠಿ
- 5 - 8 ಒಣಮೆಣಸು
- 1 ಟೇಬಲ್ ಚಮಚ ಕಡ್ಲೆಬೇಳೆ
- 1 ಟೇಬಲ್ ಚಮಚ ಉದ್ದಿನಬೇಳೆ
- ಸಣ್ಣ ನಿಂಬೆಗಾತ್ರದ ಹುಣಿಸೇಹಣ್ಣು
- 1/2 ಕಪ್ ಬೆಲ್ಲ
- ಸ್ವಲ್ಪ ಕರಿಬೇವು
- ದೊಡ್ಡ ಚಿಟಿಕೆ ಅರಿಶಿನ
- 1/4 ಟೀಸ್ಪೂನ್ ಇಂಗು
- 2 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಂತೆ)
- 2 ಟೇಬಲ್ ಚಮಚ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಟೇಬಲ್ ಚಮಚ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಎಳ್ಳು
ಶುಂಠಿ ಚಟ್ನಿ ಮಾಡುವ ವಿಧಾನ:
- ಶುಂಠಿಯನ್ನು ಸಿಪ್ಪೆ ತೆಗೆದು, ತೊಳೆದು, ಕತ್ತರಿಸಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ ಒಣಮೆಣಸಿನಕಾಯಿಯನ್ನುಹುರಿಯಿರಿ.
- ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಸೇರಿಸಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಆಮೇಲೆ ಕತ್ತರಿಸಿದ ಶುಂಠಿ ಮತ್ತು ಆರಿಸಿ ಚೂರು ಮಾಡಿದ ಹುಣಿಸಹಣ್ಣು ಸೇರಿಸಿ ಸಣ್ಣ ಉರಿಯಲ್ಲಿ ಶುಂಠಿ ಮೆತ್ತಗಾಗುವವರೆಗೆ ಹುರಿಯಿರಿ.
- ನಂತರ ಕರಿಬೇವು, ಅರಿಶಿನ ಮತ್ತು ಇಂಗು ಸೇರಿಸಿ ಹುರಿಯಿರಿ.
- ಬೆಲ್ಲ ಸೇರಿಸಿ ಮಗುಚಿ. ಬೆಲ್ಲ ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಬಹುದು.
- ಕೊನೆಯಲ್ಲಿ ಉಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ. ಸ್ವಲ್ಪ ಹೊತ್ತು ಮಗುಚಿ.
- ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ನೀರು ಸೇರಿಸಿಸದೆ ಅರೆಯಿರಿ. ನೀರು ಸೇರಿಸಿದರೆ ಹೆಚ್ಚು ದಿನ ಇಡಲಾಗುವುದಿಲ್ಲ.
- ಕೊನೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಎಳ್ಳಿನ ಒಗ್ಗರಣೆ ಕೊಡಿ. ಈ ಚಟ್ನಿಯನ್ನು ಸುಮಾರು ಎರಡು ತಿಂಗಳು ಇಡಬಹುದು. ಅನ್ನ, ದೋಸೆ ಮತ್ತು ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ