ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 1/2 ಕಪ್ ಮೈದಾ
- 1/2 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
- 1/4 ಕಪ್ ತುಪ್ಪ
- 1 - 2 ಏಲಕ್ಕಿ
ಹಾಲ್ಕೊವಾ ಮಾಡುವ ವಿಧಾನ:
- ಒಂದು ಮಿಕ್ಸಿ ಜಾರಿನಲ್ಲಿ ಸಕ್ಕರೆ ಮತ್ತು ಏಲಕ್ಕಿ ತೆಗೆದುಕೊಂಡು ನುಣ್ಣಗೆ ಪುಡಿಮಾಡಿಕೊಳ್ಳಿ.
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ.
- ಕೂಡಲೇ ಮೈದಾ ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಮಗುಚುತ್ತಾ 7 - 8 ನಿಮಿಷ ಹುರಿಯಿರಿ. ಹಸಿವಾಸನೆ ಹೋಗಿ ಹುರಿದ ಘಮ ಬರಬೇಕು.
- ಸ್ಟವ್ ಆಫ್ ಮಾಡಿ. ಒಂದೆರಡು ನಿಮಿಷ ಬಿಟ್ಟು ಸಕ್ಕರೆ ಪುಡಿ ಸೇರಿಸಿ.
- ಚೆನ್ನಾಗಿ ಕಲಸಿ. ಒಂದು ಪ್ಲೇಟ್ ಅಥವಾ ಟ್ರೇ ಗೆ ಹಾಕಿ ತಣ್ಣಗಿರುವ ಜಾಗದಲ್ಲಿ ಒಂದೆರಡು ಘಂಟೆ ಬಿಡಿ. ಫ್ರಿಡ್ಜ್ ನಲ್ಲಿ ೧೫-೨೦ ನಿಮಿಷ ಇಟ್ಟರೆ ಸಾಕು.
- ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ