Simple nimbe hannu saaru recipe in Kannada | ನಿಂಬೆಹಣ್ಣಿನ ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ನೀರು
- 1 ಮಧ್ಯಮ ಗಾತ್ರದ ಲಿಂಬೆಹಣ್ಣು
- 1 ಚಮಚ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
- 4 ಚಮಚ ಬೆಲ್ಲ (ಅಥವಾ ರುಚಿಗೆ ತಕ್ಕಷ್ಟು)
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಮೆಂತೆ
- 1 ಒಣ ಮೆಣಸಿನ ಕಾಯಿ
- 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- ದೊಡ್ಡ ಚಿಟಿಕೆ ಇಂಗು
- 7 - 8 ಕರಿಬೇವಿನ ಎಲೆ
- 1 ಟೇಬಲ್ ಚಮಚ ಅಡುಗೆ ಎಣ್ಣೆ
ನಿಂಬೆಹಣ್ಣಿನ ಸಾರು ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಕುದಿಯಲು ಇಡಿ.
- ಅದಕ್ಕೆ ಉಪ್ಪು ಮತ್ತು ಬೆಲ್ಲ ಸೇರಿಸಿ, ಚೆನ್ನಾಗಿ ಕುದಿಸಿ.
- ಕುದಿಸಿದ ಮೇಲೆ ಸ್ಟವ್ ಆಫ್ ಮಾಡಿ, ನಿಂಬೆ ಹಣ್ಣಿನ ರಸ ಸೇರಿಸಿ.
- ಎಣ್ಣೆ, ಸಾಸಿವೆ, ಜೀರಿಗೆ, ಮೆಂತೆ, ಒಣಮೆಣಸಿನಕಾಯಿ, ಹಸಿ ಮೆಣಸಿನಕಾಯಿ (ಬೇಕಾದಲ್ಲಿ), ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ.
- ಬಿಸಿ ಅನ್ನದೊಂದಿಗೆ ಬಡಿಸಿ ಅಥವಾ ಹಾಗೆ ಕುಡಿಯಲು ನೀಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ