Avalakki nuchinunde recipe in Kannada | ಅವಲಕ್ಕಿ ನುಚ್ಚಿನುಂಡೆ ಮಾಡುವ ವಿಧಾನ
ಅವಲಕ್ಕಿ ನುಚ್ಚಿನುಂಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಗಟ್ಟಿ ಅವಲಕ್ಕಿ
- 1/4 ಕಪ್ ತೊಗರಿಬೇಳೆ
- 1/4 ಕಪ್ ಕಡ್ಲೆಬೇಳೆ
- 1 - 3 ಹಸಿರು ಮೆಣಸಿನಕಾಯಿ
- 1/2 " ಉದ್ದದ ಶುಂಠಿ
- 5 - 6 ಕರಿಬೇವಿನ ಎಲೆ
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1/4 ಕಪ್ ತೆಂಗಿನತುರಿ
- ಒಂದು ದೊಡ್ಡ ಚಿಟಿಕೆ ಇಂಗು
- ನಿಮ್ಮ ರುಚಿ ಪ್ರಕಾರ ಉಪ್ಪು
ಅವಲಕ್ಕಿ ನುಚ್ಚಿನುಂಡೆ ಮಾಡುವ ವಿಧಾನ:
- ಬೇಳೆಗಳನ್ನು ೪ ಘಂಟೆಗಳ ಕಾಲ ನೆನೆಸಿಡಿ.
- ಅವಲಕ್ಕಿಯನ್ನು ಸಂಪೂರ್ಣ ಮೆತ್ತಗಾಗವವರೆಗೆ ನೆನೆಸಿ, ನೀರು ಬಗ್ಗಿಸಿಡಿ.
- ಬೇಳೆಗಳು ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿಗೆ ಹಾಕಿ.
- ಅದಕ್ಕೆ ತೆಂಗಿನತುರಿ, ಶುಂಠಿ, ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ.
- ಒಂದು ಅಗಲವಾದ ಪಾತ್ರೆಯಲ್ಲಿ ನೆನೆಸಿದ ಅವಲಕ್ಕಿ ಮತ್ತು ರುಬ್ಬಿದ ಮಿಶ್ರಣ ತೆಗೆದುಕೊಳ್ಳಿ.
- ಇಂಗು ಮತ್ತು ಉಪ್ಪು ಹಾಕಿ ಕಲಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್) ಮೆತ್ತಗಿನ ಮಿಶ್ರಣ ತಯಾರಿಸಿಕೊಳ್ಳಿ.
- ಉಂಡೆಗಳನ್ನು ಮಾಡಿ, ಇಡ್ಲಿ ಪ್ಲೇಟ್ ನಲ್ಲಿಟ್ಟು ೧೦ ನಿಮಿಷಗಳ ಕಾಲ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ.
- ಚಟ್ನಿ ಅಥವಾ ಹಸಿ ಮಜ್ಜಿಗೆ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ