Southe beejada saaru recipe in Kannada | ಸೌತೆಕಾಯಿ ಬೀಜದ ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಸಾಂಬಾರ್ ಸೌತೆಕಾಯಿಯಿಂದ ತೆಗೆದ ಬೀಜ
- 1/4 ಕಪ್ ತೆಂಗಿನ ತುರಿ
- 1/2 ಚಮಚ ಜೀರಿಗೆ
- 4 ಟೇಬಲ್ ಚಮಚ ಮಜ್ಜಿಗೆ ಅಥವಾ ಮೊಸರು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ಸಾಸಿವೆ
- ಒಂದು ದೊಡ್ಡ ಚಿಟಿಕೆ ಇಂಗು
- 7 - 8 ಕರಿಬೇವಿನ ಎಲೆ
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಸೌತೆಕಾಯಿ ಬೀಜದ ಸಾರು ಮಾಡುವ ವಿಧಾನ:
- ಬೀಜ ಬೇರ್ಪಡಿಸಿ, ಒಮ್ಮೆ ತೊಳೆದುಕೊಳ್ಳಿ.
- ತೊಳೆದ ಬೀಜವನ್ನು ಮಿಕ್ಸಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಅರೆದ ಮಿಶ್ರಣವನ್ನು ಶೋಧಿಸಿ, ಹಾಲು ತೆಗೆದುಕೊಳ್ಳಿ.
- ಹಾಗೆ ತೆಂಗಿನತುರಿ ಮತ್ತು ಜೀರಿಗೆಯನ್ನು ನೀರು ಸೇರಿಸಿ ಅರೆದಿಟ್ಟುಕೊಳ್ಳಿ.
- ಶೋಧಿಸಿದ ಹಾಲು ಮತ್ತು ಅರೆದ ತೆಂಗಿನಕಾಯಿ ಪೇಸ್ಟ್ ನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಕುದಿಯಲು ಇಡೀ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
- ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ.
- ಸ್ಟವ್ ಆಫ್ ಮಾಡಿದ ಮೇಲೆ ಮಜ್ಜಿಗೆ ಸೇರಿಸಿ.
- ಎಣ್ಣೆ, ಒಣಮೆಣಸು, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ