Southekai palya recipe in Kannada | ಸೌತೆಕಾಯಿ ಪಲ್ಯ ಮಾಡುವ ವಿಧಾನ
ಸೌತೆಕಾಯಿ ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಸೌತೆಕಾಯಿ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 2 ಟೀಸ್ಪೂನ್ ಅಡುಗೆ ಎಣ್ಣೆ
- 1ದೊಡ್ಡ ಚಿಟಿಕೆ ಅರಿಶಿನ ಪುಡಿ
- 1 ಚಿಟಿಕೆ ಇಂಗು
- 3 - 4 ಕರಿಬೇವಿನ ಎಲೆ
- 1 ಒಣಮೆಣಸಿನಕಾಯಿ
- 1-2 ಹಸಿರು ಮೆಣಸಿನ ಕಾಯಿ
- 1/4 ಕಪ್ ತೆಂಗಿನ ತುರಿ
- 1 ಟೇಬಲ್ ಚಮಚ ಕೊತಂಬರಿ ಸೊಪ್ಪು
- ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
- 2 ಟೇಬಲ್ ಚಮಚ ನೀರು
ಸೌತೆಕಾಯಿ ಪಲ್ಯ ಮಾಡುವ ವಿಧಾನ:
- ಸೌತೆಕಾಯಿಯನ್ನು ಸಿಪ್ಪೆ ತೆಗೆದು, ತಿರುಳು ತೆಗೆದು, ಸಣ್ಣದಾಗಿ ಕತ್ತರಿಸಿ. ಅರ್ಧ ಸೌತೆಕಾಯಿ ಬಳಸಿದರೆ ಸಾಕು.
- ಒಂದು ಬಾಣಲೆ ತೆಗೆದುಕೊಂಡು, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಒಣಮೆಣಸಿನಕಾಯಿ, ಕತ್ತರಿಸಿದ ಹಸಿರುಮೆಣಸಿನಕಾಯಿ, ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ.
- ಕತ್ತರಿಸಿದ ಸೌತೆಕಾಯಿ ಹಾಕಿ ಮಗುಚಿ. ಉಪ್ಪು, ಬೆಲ್ಲ ಮತ್ತು ನೀರು ಹಾಕಿ.
- ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಆಗೊಮ್ಮೆ ಈಗೊಮ್ಮೆ ಮಗುಚಲು ಮರೆಯದಿರಿ.
- ಸೌತೆಕಾಯಿ ಬೆಂದ ಮೇಲೆ (ಸುಮಾರು ಹತ್ತು ನಿಮಿಷ ಬೇಕಾಗುತ್ತದೆ), ತೆಂಗಿನತುರಿ, ಕೊತಂಬರಿ ಸೊಪ್ಪು ಹಾಕಿ ಮಗುಚಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ