Instant chutney mix recipe in Kannada | ದಿಢೀರ್ ಚಟ್ನಿ ಮಿಕ್ಸ್ ಮಾಡುವ ವಿಧಾನ
ದಿಢೀರ್ ಚಟ್ನಿ ಮಿಕ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 - 4 ಒಣ ಮೆಣಸಿನಕಾಯಿ
- 1/4 ಕಪ್ ನೆಲಗಡಲೆ ಅಥವಾ ಶೇಂಗಾ
- 1/2 ಕಪ್ ಹುರಿಗಡಲೆ
- 1/2 ಕಪ್ ಒಣ ಕೊಬ್ಬರಿ ತುರಿದಿದ್ದು
- 3 - 4 ಎಸಳು ಬೆಳ್ಳುಳ್ಳಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- ಸ್ವಲ್ಪ ಕರಿಬೇವು
- ಸಣ್ಣ ಗೋಲಿ ಹಣ್ಣಿನ ಗಾತ್ರದ ಹುಣಿಸೇಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಒಣ ಮೆಣಸಿನಕಾಯಿ
- 1 ಚಮಚ ಸಾಸಿವೆ
- 1/4 ಟೀಸ್ಪೂನ್ ಇಂಗು
- ಸ್ವಲ್ಪ ಕರಿಬೇವು
- 1 ಟೇಬಲ್ ಚಮಚ ಅಡುಗೆ ಎಣ್ಣೆ
ದಿಢೀರ್ ಚಟ್ನಿ ಮಿಕ್ಸ್ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಒಣಮೆಣಸು ಮತ್ತು ಶೇಂಗಾ ಹಾಕಿ, ಶೇಂಗಾ ಅಲ್ಲಲ್ಲಿ ಕಂದು ಬಣ್ಣಕ್ಕೆ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
- ನಂತ್ರ ಬೆಳ್ಳುಳ್ಳಿ ಎಸಳನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ.
- ಅದಕ್ಕೆ ಹುರಿಗಡಲೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
- ಆಮೇಲೆ ಕೊಬ್ಬರಿ, ಕರಿಬೇವು ಮತ್ತು ಕೊತ್ತಂಬರಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
- ಉಪ್ಪು ಮತ್ತು ಹುಣಿಸೇಹಣ್ಣು ಸೇರಿಸಿ, ಮಗುಚಿ, ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ನುಣ್ಣನೆ ಪುಡಿಮಾಡಿಕೊಳ್ಳಿ.
- ನಂತರ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸು, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ.
- ಸ್ಟವ್ ಆಫ್ ಮಾಡಿ, ಪುಡಿ ಮಡಿದ ಮಿಶ್ರಣ ಸೇರಿಸಿ, ಚೆನ್ನಾಗಿ ಕಲಸಿ.
- ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
- ಚಟ್ನಿ ಮಾಡಲು ಅಗತ್ಯವಿದ್ದಷ್ಟು ಪುಡಿಯನ್ನು ತೆಗೆದುಕೊಂಡು, ನೀರು ಸೇರಿಸಿ ಕಲಸಿ. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ