Avalakki sweet pongal | ಅವಲಕ್ಕಿ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ
ಅವಲಕ್ಕಿ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಹೆಸರುಬೇಳೆ
- 1 ಕಪ್ ಅವಲಕ್ಕಿ (ಮೀಡಿಯಂ ದಪ್ಪ)
- 3/4 ಕಪ್ ಬೆಲ್ಲ
- 1/4 ಕಪ್ ತೆಂಗಿನತುರಿ
- 1/2 ಕಪ್ ಹಾಲು
- 2 ಟೇಬಲ್ ಸ್ಪೂನ್ ತುಪ್ಪ
- 1 ಟೇಬಲ್ ಚಮಚ ಗೋಡಂಬಿ
- 1 ಟೇಬಲ್ ಚಮಚ ಒಣ ದ್ರಾಕ್ಷಿ
- ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- ದೊಡ್ಡ ಚಿಟಿಕೆ ಒಣಶುಂಠಿ ಪುಡಿ
- ಒಂದು ಚಿಟಿಕೆ ಉಪ್ಪು (ಬೇಕಾದಲ್ಲಿ)
ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ:
- ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
- ಒಂದು ಕುಕ್ಕರ್‌ನಲ್ಲಿ ಹುರಿದ ಬೇಳೆಯನ್ನು ಹಾಕಿ ಎರಡು ಬಾರಿ ತೊಳೆಯಿರಿ.
- ನಂತರ 1 ಕಪ್ ನೀರು ಹಾಕಿ, 2 ವಿಷಲ್ ಮಾಡಿ ಬೇಯಿಸಿಕೊಳ್ಳಿ.
- ಆ ಸಮಯದಲ್ಲಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಒಂದು 1/2 ಕಪ್ ಬಿಸಿ ನೀರು ಮತ್ತು ಬೆಲ್ಲ ಹಾಕಿಡಿ. ಈ ಬೆಲ್ಲದ ನೀರನ್ನು ಆಮೇಲೆ ಬಳಸುತ್ತೇವೆ.
- ಇನ್ನೊಂದು ಸಣ್ಣ ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ತೊಳೆದು ಪಕ್ಕಕ್ಕಿಡಿ. ನೆನೆಸುವ ಅಗತ್ಯವಿಲ್ಲ. ಗಟ್ಟಿ ಅವಲಕ್ಕಿ ಆದಲ್ಲಿ ಐದು ನಿಮಿಷ ನೆನೆಸಿ.
- ಬೇಳೆ ಬೆಂದ ಮೇಲೆ ಅದಕ್ಕೆ ತೊಳೆದಿಟ್ಟ ಅವಲಕ್ಕಿ ಹಾಕಿ.
- ಬೆಲ್ಲದ ನೀರನ್ನು ಜರಡಿಯ ಮೂಲಕ ಸೋಸಿ ಹಾಕಿ.
- ಒಂದು ಚಿಟಿಕೆ ಉಪ್ಪು (ಬೇಕಾದಲ್ಲಿ), ತೆಂಗಿನ ತುರಿ ಹಾಕಿ ಚೆನ್ನಾಗಿ ಮಗುಚಿ ಕುದಿಯಲು ಇಡೀ.
- ಹಾಲನ್ನು ಸೇರಿಸಿ.
- ಅವಲಕ್ಕಿ ಪೊಂಗಲ್ ಬಿಸಿ ಆರಿದ ಮೇಲೆ ಗಟ್ಟಿ ಆಗುವುದರಿಂದ, ಸ್ವಲ್ಪ ನೀರು ಸೇರಿಸಿ ಕುದಿಸಿ.
- ಏಲಕ್ಕಿ ಮತ್ತು ಒಣಶುಂಠಿ ಪುಡಿ ಸೇರಿಸಿ.
- ಚಿಕ್ಕ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಹುರಿಯಿರಿ. ಕುದಿಯುತ್ತಿರುವ ಸಿಹಿ ಪೊಂಗಲ್ ಗೆ ಹಾಕಿ ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ