Badanekayi gojju recipe in Kannada | ಬದನೇಕಾಯಿ ಗೊಜ್ಜು ಮಾಡುವ ವಿಧಾನ
ಬದನೇಕಾಯಿ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು:
- 4 ಸಣ್ಣ ಬದನೇಕಾಯಿ
- 1 ಈರುಳ್ಳಿ
- 1 ದೊಡ್ಡ ಟೊಮೆಟೊ
- 1 - 2 ಹಸಿರು ಮೆಣಸಿನಕಾಯಿ
- 1/4 ಟೀಸ್ಪೂನ್ ಜೀರಿಗೆ
- 2 ಟೇಬಲ್ ಸ್ಪೂನ್ ಕೊತ್ತುಂಬರಿ ಸೊಪ್ಪು (ಬೇಕಾದಲ್ಲಿ)
- ನೆಲ್ಲಿಕಾಯಿ ಗಾತ್ರದ ಬೆಲ್ಲ
- ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 1/4 ಟೀಸ್ಪೂನ್ ಅರಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನಬೇಳೆ
- ಒಂದು ಒಣಮೆಣಸಿನಕಾಯಿ
- 7 - 8 ಕರಿಬೇವು
- 7 - 8 ಎಸಳು ಬೆಳ್ಳುಳ್ಳಿ
- 1 ಈರುಳ್ಳಿ
- 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಬದನೇಕಾಯಿ ಗೊಜ್ಜು ಮಾಡುವ ವಿಧಾನ:
- ಬದನೆಕಾಯಿಯನ್ನು ಕತ್ತರಿಸಿ, ನೀರಿನಲ್ಲಿ ಹಾಕಿಡಿ. ಈರುಳ್ಳಿ ಮತ್ತು ಟೊಮ್ಯಾಟೋವನ್ನು ಸಹ ಕತ್ತರಿಸಿ.
- ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬದನೆಕಾಯಿ, ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ.
- ಬೆಲ್ಲ, ಹುಣಿಸೆರಸ ಮತ್ತು 1/4 ಕಪ್ ನೀರು ಸೇರಿಸಿ.
- ಒಂದೆರಡು ವಿಷಲ್ ಮಾಡಿ ಬೇಯಿಸಿಕೊಳ್ಳಿ.
- ಬೇಯಿಸಿದ ತರಕಾರಿಯನ್ನು ಚೆನ್ನಾಗಿ ಮಸೆದು ಕೊಳ್ಳಿ ಅಥವಾ ಮ್ಯಾಶ್ ಮಾಡಿಕೊಳ್ಳಿ. ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ಅರೆಯಲೂ ಬಹುದು.
- ಈಗ ಒಂದು ಬಾಣಲೆ ತೆಗೆದು ಕೊಂಡು, ಎಣ್ಣೆ, ಸಾಸಿವೆ,ಉದ್ದಿನಬೇಳೆ ಮತ್ತು ಒಣಮೆಣಸಿನ ಒಗ್ಗರಣೆ ಮಾಡಿ.
- ಅದಕ್ಕೆ ಕರಿಬೇವು ಮತ್ತು ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ.
- ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ.
- ಮಸೆದಿಟ್ಟ ತರಕಾರಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ.
- ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ