Baby potato snacks recipe in Kannada | ಬೇಬಿ ಪೊಟಾಟೋ ಸ್ನಾಕ್ಸ್ ಮಾಡುವ ವಿಧಾನ
ಬೇಬಿ ಪೊಟಾಟೋ ಸ್ನಾಕ್ಸ್ ಮಾಡುವ ವಿಧಾನ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 250gm ಬೇಬಿ ಪೊಟಾಟೋ ಅಥವಾ ಎಳೇ ಆಲೂಗಡ್ಡೆ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1 ಟೀಸ್ಪೂನ್ ಧನಿಯಾ ಪುಡಿ
- 1/4 ಟೀಸ್ಪೂನ್ ಜೀರಿಗೆ ಪುಡಿ
- 1/2 ಟೀಸ್ಪೂನ್ ಚಾಟ್ ಮಸಾಲಾ
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- ಉಪ್ಪು ರುಚಿಗೆ ತಕ್ಕಷ್ಟು
- 4 - 5 ಕರಿಬೇವಿನ ಎಲೆ
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಬೇಬಿ ಪೊಟಾಟೋ ಸ್ನಾಕ್ಸ್ ಮಾಡುವ ವಿಧಾನ:
- ಬೇಬಿ ಪೊಟಾಟೋವನ್ನು ತೊಳೆದು, ಒಂದು ಕುಕ್ಕರ್ನಲ್ಲಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿಎರಡು ವಿಷಲ್ ಮಾಡಿದರೆ ಸಾಕು.
- ನಂತ್ರ ಸಿಪ್ಪೆ ತೆಗೆದಿಟ್ಟು ಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕರಿಬೇವು ಸೇರಿಸಿ.
- ಅದಕ್ಕೆ ಸಿಪ್ಪೆ ತೆಗೆದ ಆಲೂಗಡ್ಡೆ ಸೇರಿಸಿ, ಎರಡು ನಿಮಿಷ ಹುರಿಯಿರಿ.
- ಆಮೇಲೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ.
- ಅರಿಶಿನ ಪುಡಿ, ಇಂಗು ಮತ್ತು ಉಪ್ಪನ್ನೂ ಸೇರಿಸಿ.
- ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ. ಟೊಮೇಟೊ ಸಾಸ್ ನೊಂದಿಗೆ ಸವಿದು ಆನಂದಿಸಿ. ಅನ್ನ ಅಥವಾ ಚಪಾತಿಯೊಂದಿಗೂ ಬಡಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ