Veg raita recipe in Kannada | ವೆಜ್ ರಾಯಿತ ಮಾಡುವ ವಿಧಾನ
ವೆಜ್ ರಾಯಿತ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೊಸರು
- 1/2 ಕಪ್ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ
- 1 ಸಣ್ಣ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕ್ಯಾರಟ್
- 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ದಪ್ಪಮೆಣಸು
- 1/2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1/4 ಟೀಸ್ಪೂನ್ ಕಾಳುಮೆಣಸಿನ ಪುಡಿ
- 1/4 ಟೀಸ್ಪೂನ್ ಜೀರಿಗೆ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು.
ಪದಾರ್ಥಗಳು (ಬೇಕಾದಲ್ಲಿ):
- ಅಚ್ಚಖಾರದ ಪುಡಿ
- ಚಾಟ್ ಮಸಾಲಾ
- ಬ್ಲಾಕ್ ಸಾಲ್ಟ್
- ಸ್ವಲ್ಪ ಕೊತ್ತಂಬರಿ ಸೊಪ್ಪು
ವೆಜ್ ರಾಯಿತ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಮೊಸರು ಮತ್ತು ಉಪ್ಪನ್ನು ತೆಗೆದು ಕೊಳ್ಳಿ.
- ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಕಲಸಿ.
- ನಂತರ ಹೆಚ್ಚಿದ ಸೌತೆಕಾಯಿ ಮತ್ತು ಈರುಳ್ಳಿ ಸೇರಿಸಿ.
- ಕ್ಯಾರಟ್ ಮತ್ತು ದಪ್ಪಮೆಣಸನ್ನೂ ಸೇರಿಸಿ.
- ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಕಲಸಿ.
- ಮೇಲಿನಿಂದ ರುಚಿಗೆ ತಕ್ಕಂತೆ ಅಚ್ಚಖಾರದ ಪುಡಿ, ಚಾಟ್ ಮಸಾಲಾ ಮತ್ತು ಬ್ಲಾಕ್ ಸಾಲ್ಟ್ ಉದುರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಕೂಡಲೇ ಬಡಿಸಿ.
- ಅಥವಾ ಬಡಿಸುವವರೆಗೆ ಫ್ರಿಡ್ಜ್ನಲ್ಲಿಡಿ.