ಶನಿವಾರ, ನವೆಂಬರ್ 25, 2023

Khaproli dose recipe in Kannada | ಖಾಪ್ರೊಳಿ ದೋಸೆ ಮಾಡುವ ವಿಧಾನ

 

Khaproli dose recipe in Kannada

Khaproli dose recipe in Kannada | ಖಾಪ್ರೊಳಿ ದೋಸೆ ಮಾಡುವ ವಿಧಾನ

ಖಾಪ್ರೊಳಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1.5 ಕಪ್ ದೋಸೆ ಅಕ್ಕಿ
  2. 1/2 ಕಪ್ ಉದ್ದಿನಬೇಳೆ
  3. 1/4 ಕಪ್ ಕಡ್ಲೆಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/2 ಕಪ್ ಗಟ್ಟಿ ಅವಲಕ್ಕಿ
  6. ಉಪ್ಪು ರುಚಿಗೆ ತಕ್ಕಷ್ಟು.

ಕಾಯಿ ಹಾಲಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 2 ಕಪ್ ತೆಂಗಿನಕಾಯಿ ಹಾಲು
  2. 1/4 ಕಪ್ ಪುಡಿ ಮಾಡಿದ ಬೆಲ್ಲ
  3. ದೊಡ್ಡ ಚಿಟಿಕೆ ಏಲಕ್ಕಿ
  4. ದೊಡ್ಡ ಚಿಟಿಕೆ ಉಪ್ಪು

ಖಾಪ್ರೊಳಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಮೆಂತೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  3. ಅವಲಕ್ಕಿಯನ್ನು ಹಿಟ್ಟು ರುಬ್ಬುವ ೧೦ ನಿಮಿಷ ಮೊದಲು ನೆನೆಸಿ. 
  4. ನೆನೆಸಿದ ನಂತರ ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ಚಿಟಿಕೆ ಅರಿಶಿನ ಹಾಕಿ, ಹಿಟ್ಟನ್ನು ಚೆನ್ನಾಗಿ ಕಲಸಿ. 
  6. ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  7. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ಕಾಯಿ ಹಾಲು, ಬೆಲ್ಲ, ಏಲಕ್ಕಿ ಮತ್ತು ಚಿಟಿಕೆ ಉಪ್ಪು ಸೇರಿಸಿ, ಸಿಹಿ ಕಾಯಿಹಾಲನ್ನು ತಯಾರಿಸಿಟ್ಟುಕೊಳ್ಳಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಹಿಟ್ಟು ಸುರಿದು, ಸೆಟ್ ದೋಸೆಯಂತೆ ದಪ್ಪ ದೋಸೆ ಮಾಡಿ.
  10. ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ದೋಸೆ ತೆಗೆಯಿರಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ಸಿಹಿ ಕಾಯಿಹಾಲು ಅಥವಾ ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ನವೆಂಬರ್ 20, 2023

Hesaru bele chakli recipe in Kannada | ಹೆಸರುಬೇಳೆ ಚಕ್ಲಿ ಮಾಡುವ ವಿಧಾನ

 

Hesaru bele chakli recipe in Kannada

Hesaru bele chakli recipe in Kannada | ಹೆಸರುಬೇಳೆ ಚಕ್ಲಿ ಮಾಡುವ ವಿಧಾನ

ಹೆಸರುಬೇಳೆ ಚಕ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 0.25 ಕಪ್ ಹೆಸರುಬೇಳೆ 
  3. 1 ಟೀ ಸ್ಪೂನ್ ಜೀರಿಗೆ
  4. ದೊಡ್ಡ ಚಿಟಿಕೆ ಇಂಗು
  5. 2 ಟೇಬಲ್ ಚಮಚ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು
  7. ಎಣ್ಣೆ ಚಕ್ಕುಲಿ ಕಾಯಿಸಲು

ಚಕ್ಕುಲಿ ಮಾಡುವ ವಿಧಾನ:

  1. ಹೆಸರುಬೇಳೆಯನ್ನು ತೊಳೆದು, ಒಂದಕ್ಕೆ ಮೂರರಷ್ಟು ನೀರು ಸೇರಿಸಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. 
  2. ಬೇಯಿಸಿದ ಹೆಸರುಬೇಳೆಯನ್ನು ಚೆನ್ನಾಗಿ ಮಸಿದಿಟ್ಟುಕೊಳ್ಳಿ ಅಥವಾ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಟ್ಟುಕೊಳ್ಳಿ.
  3. ಅಕ್ಕಿ ಹಿಟ್ಟನ್ನು ಬಾಣಲೆಯನ್ನು ತೆಗೆದುಕೊಳ್ಳಿ. 
  4. ಜೀರಿಗೆ, ಇಂಗು ಮತ್ತು ಉಪ್ಪು ಹಾಕಿ ಕಲಸಿ. 
  5. ಆಮೇಲೆ ಬಿಸಿ ಎಣ್ಣೆಯನ್ನು ಹಾಕಿ, ಚಮಚದಲ್ಲಿ ಒಮ್ಮೆ ಕಲಸಿ.  
  6. ನಂತರ ಕೈಯಲ್ಲಿ ಚೆನ್ನಾಗಿ ತಿಕ್ಕಿ ಕಲಸಿ. 
  7. ಮಸೆದ ಹೆಸರುಬೇಳೆಯನ್ನು ಹಾಕಿ. ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು. 
  8. ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಚಕ್ಕುಲಿಯನ್ನು ಒತ್ತಿ. 
  9. ಎಣ್ಣೆ ಬಿಸಿ ಮಾಡಿ ಒತ್ತಿದ ಚಕ್ಕುಲಿಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.

ಗುರುವಾರ, ನವೆಂಬರ್ 16, 2023

Ragi shavige recipe in Kannada | ರಾಗಿ ಶಾವಿಗೆ ಮಾಡುವ ವಿಧಾನ

 

Ragi shavige recipe in Kannada

Ragi shavige recipe in Kannada | ರಾಗಿ ಶಾವಿಗೆ ಮಾಡುವ ವಿಧಾನ

ರಾಗಿ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರಾಗಿ ಹಿಟ್ಟು
  2. 1.25 ಕಪ್ ನೀರು
  3. 1 ಟೀಸ್ಪೂನ್ ಎಣ್ಣೆ
  4. ಉಪ್ಪು ರುಚಿಗೆ ತಕ್ಕಷ್ಟು

ರಾಗಿ ಶಾವಿಗೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ನೀರನ್ನು ಗಂಟಿಲ್ಲದಂತೆ ಕಲಸಿ.
  2. ಕಲಸಿದ ಹಿಟ್ಟನ್ನು ಒಂದು ಬಾಣಲೆಯಲ್ಲಿ ತೆಗೆದುಕೊಳ್ಳಿ.
  3. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.
  4.  ಎಣ್ಣೆಯನ್ನೂ ಸೇರಿಸಿ. 
  5. ಮಧ್ಯಮ ಉರಿಯಲ್ಲಿ ಕೈ ಬಿಡದೆ ಮಗುಚುತ್ತಾ ಮೃದುವಾದ ಹಿಟ್ಟನ್ನು ತಯಾರಿಸಿ.
  6. ಸ್ಟವ್ ಆಫ್ ಮಾಡಿ, ಕೈಗೆ ಎಣ್ಣೆ ಹಚ್ಚಿಕೊಂಡು, ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ. 
  7. ಹಿಟ್ಟು ಮೃದುವಾಗಿರಲಿ. 
  8. ನಂತರ ಉದ್ದುದ್ದ ಉಂಡೆಗಳನ್ನು ಮಾಡಿ.
  9. ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. 
  10. ಸೆಕೆಯಲ್ಲಿ (ಆವಿಯಲ್ಲಿ) 8-10 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ.


ಗುರುವಾರ, ನವೆಂಬರ್ 9, 2023

Masala kaju recipe in Kannada | ಮಸಾಲೆ ಗೋಡಂಬಿ ಮಾಡುವ ವಿಧಾನ

 

Masala kaju recipe in Kannada

Masala kaju recipe in Kannada | ಮಸಾಲೆ ಗೋಡಂಬಿ ಮಾಡುವ ವಿಧಾನ

ಮಸಾಲೆ ಗೋಡಂಬಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಡಂಬಿ
  2. 1/2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ)
  3. 1/4 ಟೀಸ್ಪೂನ್ ಕರಿಮೆಣಸಿನಪುಡಿ
  4. 1/4 ಟೀಸ್ಪೂನ್ ಜೀರಿಗೆ ಪುಡಿ
  5. 1/4 ಟೀಸ್ಪೂನ್ ಗರಂ ಮಸಾಲಾ
  6. ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ
  7. ದೊಡ್ಡ ಚಿಟಿಕೆ ಇಂಗು
  8. 2 ಟೀಸ್ಪೂನ್ ತುಪ್ಪ
  9. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಗೋಡಂಬಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಕರಿಮೆಣಸಿನಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಮಾವಿನಕಾಯಿ ಪುಡಿ, ಇಂಗು ಮತ್ತು ಉಪ್ಪನ್ನು ತೆಗೆದುಕೊಳ್ಳಿ. ಕಲಸಿ ಪಕ್ಕಕ್ಕಿಡಿ. 
  2. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. 
  3. ಮಧ್ಯಮ ಉರಿಯಲ್ಲಿ ಗೋಡಂಬಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. 
  4. ಅಚ್ಚಖಾರದ ಪುಡಿ ಸೇರಿಸಿ, ಒಮ್ಮೆ ಕಲಸಿ. 
  5. ಕಲಸಿಟ್ಟ ಮಸಾಲೆ ಪುಡಿಗಳನ್ನು ಸೇರಿಸಿ, ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  6. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
Related Posts Plugin for WordPress, Blogger...