Mylari dosa recipe in Kannada | ಮೈಲಾರಿ ದೋಸೆ ಮಾಡುವ ವಿಧಾನ
ಮೈಲಾರಿ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್):
- 1 ಕಪ್ ಕುಸುಬಲಕ್ಕಿ
- 1/2 ಕಪ್ ದೋಸೆ ಅಕ್ಕಿ
- 1/2 ಕಪ್ ಉದ್ದಿನಬೇಳೆ
- 1/2 ಕಪ್ ಮೈದಾ
- 1/4 ಕಪ್ ಅಕ್ಕಿಹಿಟ್ಟು
- ಉಪ್ಪು ರುಚಿಗೆ ತಕ್ಕಷ್ಟು.
ಮೈಲಾರಿ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಕುಸುಬಲಕ್ಕಿಯನ್ನು ತೆಗೆದುಕೊಳ್ಳಿ. ಕುಸುಬಲಕ್ಕಿ ಸಿಗದೇ ಇದ್ರೆ ಇಡ್ಲಿ ಅಕ್ಕಿಯನ್ನು ಬಳಸಬಹುದು.
- ಅದಕ್ಕೆ ದೋಸೆ ಅಕ್ಕಿಯನ್ನು ಸೇರಿಸಿ. 4 - 5 ಘಂಟೆ ನೆನೆಸಿ.
- ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆಯನ್ನು 4 - 5 ಘಂಟೆ ನೆನೆಸಿ.
- ನೆನೆಸಿದ ಉದ್ದಿನಬೇಳೆಯನ್ನು ನೀರು ಬಗ್ಗಿಸಿ ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ.
- ನೆನೆಸಿದ ಅಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
- ನುಣ್ಣಗೆ, ಆದರೆ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ. ಅದೇ ಪಾತ್ರೆಗೆ ಹಾಕಿ.
- ಮಿಕ್ಸಿಜಾರಿನಲ್ಲಿ ಅಕ್ಕಿಹಿಟ್ಟು ಮತ್ತು ಮೈದಾ ಹಿಟ್ಟನ್ನು ತೆಗೆದುಕೊಂಡು, ಸ್ವಲ್ಪ ನೀರು ಸೇರಿಸಿ, ಒಮ್ಮೆ ಮಿಕ್ಸಿ ಮಾಡಿ, ಅದೇ ಪಾತ್ರೆಗೆ ಹಾಕಿ.
- ಕೈಯಿಂದ ಚೆನ್ನಾಗಿ ಕಲಸಿ.
- ಮುಚ್ಚಳ ಮುಚ್ಚಿ 7 - 8 ಘಂಟೆ ಹಿಟ್ಟು ಹುದುಗಲು ಬಿಡಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ದೋಸೆ ಹೆಂಚನ್ನು ಬಿಸಿಮಾಡಿ.
- ಉದ್ದಿನದೋಸೆಯಂತೆ ದೋಸೆ ಮಾಡಿ.
- ಮುಚ್ಚಳವನ್ನು ಮುಚ್ಚಿ ಬೇಯಿಸಿ.
- 5 - 10 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ ಖಾಯಿಸಿ.
- ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.