Ottu shavige recipe in Kannada | ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ
ಉಳಿದ ಅನ್ನದ ಶಾವಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅನ್ನ
- 1/2 ಕಪ್ ಅಕ್ಕಿಹಿಟ್ಟು
- 1/4 ಕಪ್ ನೀರು
- 1 ಟೀಸ್ಪೂನ್ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ:
- ಮಿಕ್ಸಿಯಲ್ಲಿ ಅನ್ನ ತೆಗೆದುಕೊಂಡು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಸುಮಾರು ಕಾಲು ಕಪ್ ನೀರು ಸಾಕಾಗುವುದು.
- ರುಬ್ಬಿದ ಅನ್ನವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
- ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟು ತಯಾರಿಸಿ.
- ಕೈಗೆ ಎಣ್ಣೆ ಹಚ್ಚಿಕೊಂಡು ಉದ್ದುದ್ದ ಉಂಡೆಗಳನ್ನು ಮಾಡಿ.
- ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ.
- ಸೆಕೆಯಲ್ಲಿ (ಆವಿಯಲ್ಲಿ) 8-10 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ.