Hotel style tea recipe | ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ
ಹೋಟೆಲ್ ಸ್ಟೈಲ್ ಟೀ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್ )
- 1 ಕಪ್ ಹಾಲು
- 1 ಕಪ್ ನೀರು
- 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 - 2 ಟೀಸ್ಪೂನ್ ಟೀ ಪೌಡರ್
- 2 ಮಾರಿ ಬಿಸ್ಕತ್ತು
ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಳ್ಳಿ.
- ನೀರು ಸೇರಿಸಿ.
- ಸಕ್ಕರೆ ಸೇರಿಸಿ.
- ಟೀ ಪೌಡರ್ ಸೇರಿಸಿ, ಕುದಿಯಲು ಇಡಿ.
- ಬಿಸ್ಕತ್ತನ್ನು ಮಿಕ್ಸಿಯಲ್ಲಿ ಪುಡಿಮಾಡಿ.
- 1 - 2 ಸ್ಪೂನ್ ಬಿಸ್ಕತ್ತು ಪುಡಿಯನ್ನು ಕುದಿಯಲು ಇಟ್ಟ ಟೀ ಗೆ ಸೇರಿಸಿ.
- ಚೆನ್ನಾಗಿ ಮಗುಚಿ ಕುದಿಸಿ. 1 - 2 ನಿಮಿಷ ಕುದಿಸುವುದನ್ನು ಮುಂದುವರೆಸಿ.
- ಸ್ಟವ್ ಆಫ್ ಮಾಡಿ.
- ಟೀ ಯನ್ನು ಸೋಸಿ, ಚೆನ್ನಾಗಿ ಎತ್ತಿ ಹಾಕಿ, ಕುಡಿಯಲು ನೀಡಿ.