Batani chat recipe in Kannada | ಬಟಾಣಿ ಚಾಟ್ ಮಾಡುವ ವಿಧಾನ
ಬಟಾಣಿ ಚಾಟ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 2 ಸಣ್ಣದಾಗಿ ಹೆಚ್ಚಿದ ಟೊಮೆಟೊ
- 4 ಟೇಬಲ್ ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು
- 4 ಟೇಬಲ್ ಚಮಚ ಸೇವ್
- 2 ಟೇಬಲ್ ಚಮಚ ಹುರಿದ ಶೇಂಗಾ
ಗ್ರೇವಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/2 ಕಪ್ ಒಣ ಬಟಾಣಿ
- 1/4 ಕಪ್ ಕಡ್ಲೆಕಾಳು
- 1 ಆಲೂಗಡ್ಡೆ
- 1/2 ಟೀಸ್ಪೂನ್ ಬಡೆಸೊಂಪು
- 1 - 2 ಹಸಿರು ಮೆಣಸು
- 4 - 5 ಎಸಳು ಬೆಳ್ಳುಳ್ಳಿ
- 1 cm ಉದ್ದದ ಶುಂಠಿ
- 1 ಕತ್ತರಿಸಿದ ಈರುಳ್ಳಿ
- 1 ಕತ್ತರಿಸಿದ ಟೊಮೆಟೊ
- 2 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಕತ್ತರಿಸಿದ ಪುದಿನ
- 1/2 ಟೀಸ್ಪೂನ್ ಗರಂ ಮಸಾಲಾ ಪುಡಿ
- 1/2 ಟೀಸ್ಪೂನ್ ಚಾಟ್ ಮಸಾಲಾ
- 1/2 ಟೀಸ್ಪೂನ್ ಜೀರಿಗೆ ಪುಡಿ
- 1/4 ಟೀಸ್ಪೂನ್ ಮಾವಿನಕಾಯಿ ಪುಡಿ (ಅಥವಾ ಹುಣಿಸೆ ರಸ)
- ನಿಮ್ಮ ರುಚಿಗೆ ತಕ್ಕಂತೆ ಉಪ್ಪು
- 1/4 ಟೀಸ್ಪೂನ್ ಸೈನ್ದವ ಲವಣ (ಬೇಕಾದಲ್ಲಿ)
- 1 ಟೀಸ್ಪೂನ್ ಎಣ್ಣೆ
ಬಟಾಣಿ ಚಾಟ್ ಮಾಡುವ ವಿಧಾನ:
- ಬಟಾಣಿ ಮತ್ತು ಕಡ್ಲೆಕಾಳನ್ನು 5 ಘಂಟೆ ಅಥವಾ ರಾತ್ರೆಯಿಡಿ ನೆನೆಸಿಡಿ.
- ನೆನೆಸಿದ ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
- ಆಲೂಗಡ್ಡೆಯನ್ನು ಪುಡಿಮಾಡಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಬಡೆಸೋಂಪನ್ನು ಹುರಿಯಿರಿ.
- ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ.
- ನಂತರ ಈರುಳ್ಳಿ ಸೇರಿಸಿ ಹುರಿಯಿರಿ.
- ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ
- ಮೆತ್ತಗಾದ ಮೇಲೆ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಹಾಕಿ ಹುರಿಯಿರಿ.
- ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆ ಇರುವ ಕುಕ್ಕರ್ ಗೆ ಅರೆದ ಮಿಶ್ರಣವನ್ನು ಹಾಕಿ.
- ಮಸಾಲೆ ಪುಡಿಗಳನ್ನು ಸೇರಿಸಿ (ಗರಂ ಮಸಾಲಾ ಪುಡಿ, ಚಾಟ್ ಮಸಾಲಾ, ಜೀರಿಗೆ ಪುಡಿ ಮತ್ತು ಮಾವಿನಕಾಯಿ ಪುಡಿ).
- ಉಪ್ಪನ್ನೂ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಗ್ರೇವಿ ತಯಾರಾಯಿತು.
- ಸರ್ವಿಂಗ್ ಪ್ಲೇಟ್ ನಲ್ಲಿ 4 ಸೌಟಿನಷ್ಟು ತಯಾರಿಸಿದ ಗ್ರೇವಿಯನ್ನು ಹಾಕಿ.
- ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ. ಸವಿದು ಆನಂದಿಸಿ.