ಮಂಗಳವಾರ, ನವೆಂಬರ್ 23, 2021

Nellikai saaru recipe in Kannada | ನೆಲ್ಲಿಕಾಯಿ ಸಾರು ಮಾಡುವ ವಿಧಾನ

 

Nellikai saaru recipe in Kannada

Nellikai saaru recipe in Kannada |ನೆಲ್ಲಿಕಾಯಿ ಸಾರು ಮಾಡುವ ವಿಧಾನ

ನೆಲ್ಲಿಕಾಯಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 2 ನೆಲ್ಲಿಕಾಯಿ 
  2. 2 ಟೀಸ್ಪೂನ್ ತೊಗರಿಬೇಳೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
  5. 1/2 ಟೀಸ್ಪೂನ್ ಜೀರಿಗೆ
  6. ಸ್ವಲ್ಪ ಕರಿಮೆಣಸು 
  7. ಚಿಟಿಕೆ ಮೆಂತ್ಯ
  8. ಚಿಟಿಕೆ ಸಾಸಿವೆ
  9. 2 - 4 ಹಸಿಮೆಣಸಿನಕಾಯಿ
  10. 5 - 6 ಕರಿಬೇವಿನ ಎಲೆ
  11. 1/4 ಕಪ್ ತೆಂಗಿನ ತುರಿ
  12. 1.5 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  13. 1/4 ಟೀಸ್ಪೂನ್ ಅರಿಶಿನ
  14. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  15. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಒಣಮೆಣಸಿನಕಾಯಿ
  3. ದೊಡ್ಡ ಚಿಟಿಕೆ ಇಂಗು
  4. 5 - 6 ಕರಿಬೇವಿನ ಎಲೆ
  5. 1 ಟೇಬಲ್ ಚಮಚ ಎಣ್ಣೆ

 ನೆಲ್ಲಿಕಾಯಿ ಸಾರು ಮಾಡುವ ವಿಧಾನ:

  1. ನೆಲ್ಲಿಕಾಯಿಯನ್ನು ತೊಳೆದು ಕತ್ತರಿಸಿ ಬೀಜ ತೆಗೆಯಿರಿ. 
  2. ಒಂದು ಬಾಣಲೆಯಲ್ಲಿ ತೊಗರಿಬೇಳೆ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಕರಿಮೆಣಸು ಮೆಂತ್ಯ ಮತ್ತು ಸಾಸಿವೆಯನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿಯಿರಿ.
  3. ಬೇಳೆಗಳು ಕಂದು ಬಣ್ಣ ಬಂದು, ಸುವಾಸನೆ ಬಂದ ಮೇಲೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ.  
  4. ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ನೆಲ್ಲಿಕಾಯಿ, ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5. ಅದನ್ನು ಒಂದು ಪಾತ್ರೆಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಲೀಟರ್)
  6. ಉಪ್ಪು ಮತ್ತು ಅರಿಶಿನ ಸೇರಿಸಿ ಕುದಿಸಿ. 
  7. ಚೆನ್ನಾಗಿ ಕುದಿಸಿ, ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ. 
  8. ಆಮೇಲೆ ಎಣ್ಣೆ, ಸಾಸಿವೆ, ಒಣಮೆಣಸು, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  9. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ನವೆಂಬರ್ 19, 2021

Badanekayi mosaru gojju recipe in Kannada | ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ

 

Badanekayi mosaru gojju recipe in Kannada

Badanekayi mosaru gojju recipe in Kannada | ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ 

ಬದನೇಕಾಯಿ ಮೊಸರು ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4kg ಸಣ್ಣ ಬದನೇಕಾಯಿ (ಅಥವಾ ಬೇರೆ ಯಾವುದೇ ಬದನೇಕಾಯಿ)
  2. 1 - 2 ಹಸಿರು ಮೆಣಸಿನಕಾಯಿ
  3. ಉಪ್ಪು ರುಚಿಗೆ ತಕ್ಕಷ್ಟು
  4. 1 ಕಪ್ ಮೊಸರು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೇಬಲ್ ಚಮಚ ಅಡುಗೆ ಎಣ್ಣೆ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ಉದ್ದಿನಬೇಳೆ
  5. ಒಂದು ಚಿಟಿಕೆ ಇಂಗು
  6. ಸ್ವಲ್ಪ ಕರಿಬೇವು

ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ:

  1. ಬದನೇಕಾಯಿ ತೊಳೆದು, + ಆಕಾರದಲ್ಲಿ ಸಿಗಿದು (ಸೀಳಿ), ಆವಿಯಲ್ಲಿ ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಬೇಯಿಸಿ. 
  2. ಆ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು, ಉಪ್ಪು ಮತ್ತು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ ಕಲಸಿ. 
  3. ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಉದ್ದಿನಬೇಳೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  4. ಒಗ್ಗರಣೆಯನ್ನು ಕಲಸಿಟ್ಟ ಮೊಸರಿಗೆ ಸೇರಿಸಿ. 
  5. ಬದನೇಕಾಯಿ ಬೆಂದ ಮೇಲೆ ಸಿಪ್ಪೆ ತೆಗೆದು, ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆಯಿರಿ.
  6. ಸಣ್ಣ ಚೂರುಗಳಾಗಿ ಕತ್ತರಿಸಿ. 
  7. ಅದನ್ನು ಮೊಸರು ಇರುವ ಪಾತ್ರೆಗೆ ಸೇರಿಸಿ ಕಲಸಿ. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಬುಧವಾರ, ನವೆಂಬರ್ 17, 2021

Idli recipe using dosa rice in Kannada | ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ

 

Idli recipe using dosa rice in Kannada

Idli recipe using dosa rice in Kannada | ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ

ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1/2 - 1/3 ಕಪ್ ಉದ್ದಿನ ಬೇಳೆ 
  3. 1/2 ಟೀಸ್ಪೂನ್ ಮೆಂತೆ
  4. 1/4 - 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ


ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ:

  1. ಉದ್ದಿನಬೇಳೆ - ಮೆಂತೆ, ಅಕ್ಕಿ ಮತ್ತು ಅವಲಕ್ಕಿಯನ್ನು ಬೇರೆ ಬೇರೆ ಪಾತ್ರೆಯಲ್ಲಿ 3 - 4 ಗಂಟೆಗಳ ಕಾಲ ನೆನೆಸಿಡಿ.
  2. ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆಯಿರಿ ಒಂದು ಪಾತ್ರೆಗೆ ಬಗ್ಗಿಸಿ.
  3. ಅವಲಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆದು ಅದೇ ಪಾತ್ರೆಗೆ ಹಾಕಿ. 
  4. ಆಮೇಲೆ ನೆನೆಸಿದ ಅಕ್ಕಿಯ ನೀರು ಬಸಿದು, ಸ್ವಲ್ಪ ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ಮಾತ್ರ ನೀರು ಸೇರಿಸಿ. ಗಮನಿಸಿ, ಹೆಚ್ಚು ನೀರು ಸೇರಿಸಬೇಡಿ ಮತ್ತು ಸ್ವಲ್ಪ ತರಿ ತರಿ ಇದ್ದರೆ ಸಾಕು. 
  5. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 8 - 10 ಗಂಟೆಗಳ ಕಾಲ ಹುದುಗಲು ಬಿಡಿ. 
  6. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  7. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  8. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. 
  9. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆದು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಿ.

ಗುರುವಾರ, ನವೆಂಬರ್ 11, 2021

Beans bili huli recipe in Kannada | ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ

 

Beans bili huli recipe in Kannada

Beans bili huli recipe in Kannada | ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ

ಬೀನ್ಸ್ ಸಾಂಬಾರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4kg ಬೀನ್ಸ್
  2. ದೊಡ್ಡ ಚಿಟಿಕೆ ಅರಿಶಿನ ಪುಡಿ
  3. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  4. 1/2 ಟೀಸ್ಪೂನ್ ನಿಂಬೆರಸ

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಹಸಿಮೆಣಸಿನಕಾಯಿ
  3. 2 ಟೇಬಲ್ ಚಮಚ ಕಡ್ಲೆಬೇಳೆ
  4. 1 ಟೀಸ್ಪೂನ್ ಜೀರಿಗೆ
  5. 1/2 ಟೀಸ್ಪೂನ್ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 5 - 6 ಕರಿಬೇವು
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ:

  1. ಕಡ್ಲೆಬೇಳೆಯನ್ನು ಒಂದರಿಂದ ಎರಡು ಘಂಟೆ ನೆನೆಸಿ. 
  2. ಬೀನ್ಸ್ ನ್ನು ತೊಳೆದು ಕತ್ತರಿಸಿ.
  3. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್ ತೆಗೆದುಕೊಂಡು ಚಿಟಿಕೆ ಅರಶಿನ ಪುಡಿ, ಸ್ವಲ್ಪ ಉಪ್ಪು ಮತ್ತು 1 ಲೋಟ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  4. ನಂತ್ರ ಒಂದು ಮಿಕಿ ಜಾರ್ ನಲ್ಲಿ ತೆಂಗಿನತುರಿ, ನೆನೆಸಿದ ಕಡ್ಲೆ ಬೇಳೆ, ಜೀರಿಗೆ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  5. ಅರೆದ ಮಸಾಲೆಯನ್ನು ತರಕಾರಿ ಇರುವ ಕುಕ್ಕರ್ ಗೆ ಹಾಕಿ. 
  6. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  7. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ (ಸುಮಾರು 1 ಕಪ್) ಮಗುಚಿ.  
  8. ಒಂದೆರಡು ನಿಮಿಷ ಚೆನ್ನಾಗಿ ಕುದಿಸಿ.
  9. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಭಾನುವಾರ, ನವೆಂಬರ್ 7, 2021

Majjige kadubu recipe in Kannada | ಮಜ್ಜಿಗೆ ಕಡುಬು ಮಾಡುವ ವಿಧಾನ

 

Majjige kadubu recipe in Kannada | ಮಜ್ಜಿಗೆ ಕಡುಬು ಮಾಡುವ ವಿಧಾನ

ಮಜ್ಜಿಗೆ ಕಡುಬು ವಿಡಿಯೋ

ಮಜ್ಜಿಗೆ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1 ಕಪ್ ನೀರು 
  3. 1 ಕಪ್ ಮಜ್ಜಿಗೆ
  4. ಉಪ್ಪು ರುಚಿಗೆ ತಕ್ಕಷ್ಟು
  5. 1/2 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1 ಟೀಸ್ಪೂನ್ ಉದ್ದಿನಬೇಳೆ
  8. 1 ಟೀಸ್ಪೂನ್ ಶುಂಠಿ
  9. 1 ಹಸಿಮೆಣಸಿನಕಾಯಿ
  10. 1 ಟೇಬಲ್ ಚಮಚ ಕರಿಬೇವು
  11. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  12. 1 ಈರುಳ್ಳಿ
  13. ಇಂಗು ಒಂದು ಚಿಟಿಕೆ
  14. 1 ಟೇಬಲ್ ಚಮಚ ಅಡುಗೆ ಎಣ್ಣೆ

ಮಜ್ಜಿಗೆ ಕಡುಬು ಮತ್ತು ಸಾರು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ. 
  3. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಒಗ್ಗರಣೆ ಮಾಡಿ. 
  4. ಅದಕ್ಕೆ ಕತ್ತರಿಸಿದ ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ ಹಾಕಿ ಹುರಿಯಿರಿ.
  5. ಹುರಿಯುವಾಗ ಇಂಗನ್ನು ಸೇರಿಸಿ.  
  6. ಅಕ್ಕಿ ತರಿ ಹಾಕಿ ಒಂದು ನಿಮಿಷ ಹುರಿದು ಸ್ಟವ್ ಆಫ್ ಮಾಡಿ. 
  7. ಬಿಸಿ ಸ್ವಲ್ಪ ಆರಿದ ಮೇಲೆ, ಉಪ್ಪು, ನೀರು ಮತ್ತು ಮಜ್ಜಿಗೆ ಸೇರಿಸಿ. 
  8. ತಟ್ಟೆ ಅಥವಾ ಪ್ಲೇಟ್ ಗೆ ತುಪ್ಪ ಹಚ್ಚಿ ಹಿಟ್ಟನ್ನು ಹಾಕಿ. ಹಿಟ್ಟು ಹಾಕುವಾಗ ಆಗಾಗ್ಯೆ ಮಗುಚಿ ಹಾಕಿ. 
  9. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ.
  10. ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

Related Posts Plugin for WordPress, Blogger...