ಸೋಮವಾರ, ಆಗಸ್ಟ್ 23, 2021

Beans sambar recipe in Kannada | ಬೀನ್ಸ್ ಸಾಂಬಾರ್ ಮಾಡುವ ವಿಧಾನ

 

Beans sambar recipe in Kannada

Beans sambar recipe in Kannada | ಬೀನ್ಸ್ ಸಾಂಬಾರ್ ಮಾಡುವ ವಿಧಾನ

ಬೀನ್ಸ್ ಸಾಂಬಾರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4kg ಬೀನ್ಸ್
  2. 1/4 ಕಪ್ ತೊಗರಿಬೇಳೆ
  3. ದೊಡ್ಡ ಚಿಟಿಕೆ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. 1/2 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  6. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು
  7. ಸ್ವಲ್ಪ ಕೊತ್ತಂಬರಿ ಸೊಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/2 ಟೀಸ್ಪೂನ್ ಸಾಸಿವೆ
  4. ಒಂದು ಚಿಟಿಕೆ ಇಂಗು
  5. 1 ಟೀಸ್ಪೂನ್ ಅಡುಗೆ ಎಣ್ಣೆ

ಬೀನ್ಸ್ ಸಾಂಬಾರ್ ಮಾಡುವ ವಿಧಾನ:

  1. ಬೀನ್ಸ್ ನ್ನು ತೊಳೆದು ಕತ್ತರಿಸಿ.
  2. ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಈಗ ಅದೇ ಕುಕ್ಕರ್ ಗೆ ಕತ್ತರಿಸಿದಬೀನ್ಸ್, ಸ್ವಲ್ಪ ಉಪ್ಪು ಮತ್ತು 1 ಲೋಟ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  4. ನಂತ್ರ ಒಂದು ಬಾಣಲೆ ತೆಗೆದು ಕೊಂಡು, ಒಣ ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  6. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. 
  7. ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ.
  8. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
  9. ಒಣ ಮೆಣಸಿನಕಾಯಿ, ಸಾಸಿವೆ, ಕರಿಬೇವಿನ ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಆಗಸ್ಟ್ 3, 2021

Mumbai masala majjige recipe in Kannada | ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ

 

Mumbai masala majjige recipe in Kannada | ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ

ಮುಂಬೈ ಮಸಾಲೆ ಮಜ್ಜಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಸರು (ಅಥವಾ ಮಜ್ಜಿಗೆ)
  2. 1 ಕಪ್ ನೀರು (ಜಾಸ್ತಿ ಬೇಕಾದಲ್ಲಿ ಹಾಕಬಹುದು)
  3. 1/2 ಟೀಸ್ಪೂನ್ ಶುಂಠಿ
  4. 1 ಹಸಿಮೆಣಸಿನಕಾಯಿ
  5. 1/4 ಟೀಸ್ಪೂನ್ ಜೀರಿಗೆ ಪುಡಿ
  6. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 4 - 5 ಪುದಿನ ಎಲೆ 
  8. 1/4 ಟೀಸ್ಪೂನ್ ಚಾಟ್ ಮಸಾಲಾ 
  9. 1/4 ಟೀಸ್ಪೂನ್ ಸೈನ್ದವ ಲವಣ (ಬ್ಲ್ಯಾಕ್ ಸಾಲ್ಟ್)
  10. ಉಪ್ಪು ರುಚಿಗೆ ತಕ್ಕಂತೆ 

ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಮೊಸರು ಮತ್ತು ನೀರು ತೆಗೆದುಕೊಳ್ಳಿ. 
  2. ಅದಕ್ಕೆ ಶುಂಠಿ, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಪುದಿನಾ ಎಲೆ, ಚಾಟ್ ಮಸಾಲಾ, ಸೈನ್ದವ ಲವಣ ಮತ್ತು ಉಪ್ಪು ಸೇರಿಸಿ. 
  3. ಸ್ವಲ್ಪ ಹೊತ್ತು ಮಿಕ್ಸಿ ಮಾಡಿ. 
  4. ಸವಿದು ಆನಂದಿಸಿ. 


Related Posts Plugin for WordPress, Blogger...