Immunity saaru recipe in Kannada | ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾರು ಮಾಡುವ ವಿಧಾನ
ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 2 ಮಧ್ಯಮ ಗಾತ್ರದ ಟೊಮೆಟೋ
- 1/4 ಟೀಸ್ಪೂನ್ ಅರಿಶಿನ ಪುಡಿ
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
- 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1 ಟೇಬಲ್ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
- 1/2 - 1 ನಿಂಬೆಹಣ್ಣು
ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1 ಟೀಸ್ಪೂನ್ ಕೋತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಕಾಳು ಮೆಣಸು
- 2 ಒಣ ಮೆಣಸಿನಕಾಯಿ
- 1 ಇಂಚು ಉದ್ದದ ಶುಂಠಿ
- 10 ಎಸಳು ಬೆಳ್ಳುಳ್ಳಿ
- ಸ್ವಲ್ಪ ಕರಿಬೇವು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ
ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾರು ಮಾಡುವ ವಿಧಾನ:
- ಅರೆಯಲು ಪಟ್ಟಿಮಾಡಿದ ಪದಾರ್ಥಗಳನ್ನು ಮಿಕ್ಸಿಜಾರಿನಲ್ಲಿ ನೀರು ಹಾಕದೆ ಪುಡಿಮಾಡಿಕೊಳ್ಳಿ.
- ಮಸಾಲೆ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿಡಿ.
- ನಂತರ ಟೊಮೇಟೊವನ್ನು ತರಿತರಿಯಾಗಿ ಅರೆದುಕೊಳ್ಳಿ.
- ಅರೆದ ಟೊಮ್ಯಾಟೊವನ್ನು ಒಂದು ಬಾಣಲೆಗೆ ಅಥವಾ ಪಾತ್ರೆಗೆ ಹಾಕಿ ಕುದಿಯಲು ಇಡಿ.
- ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಮಗುಚಿ.
- ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿ.
- ಆಮೇಲೆ ಅಗತ್ಯವಿದ್ದಷ್ಟು ನೀರು, ಬೆಲ್ಲ ಮತ್ತು ರುಚಿಗೆ ತಕ್ಕಂತೆ ಉಪ್ಪು ಹಾಕಿ ಕುದಿಸಿ.
- ತಯಾರಿಸಿದ ಮಸಾಲೆ ಹಾಕಿ ಕುದಿಸಿ.
- ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ.
- ರುಚಿಗೆ ತಕ್ಕಷ್ಟು ನಿಂಬೆ ಹಣ್ಣಿನ ರಸ ಹಾಕಿ.
- ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಸೂಪ್ ತರಹ ಕುಡಿಯಲು ಕೊಡಿ.