Onadrakshi recipe in Kannada | ಒಣದ್ರಾಕ್ಷಿ ಮಾಡುವ ವಿಧಾನ
ಒಣದ್ರಾಕ್ಷಿ ಮಾಡುವ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- ಅಗತ್ಯವಿದ್ದಷ್ಟು ದ್ರಾಕ್ಷಿ (ಸಿಹಿ, ತೆಳು ಸಿಪ್ಪೆಯ ದ್ರಾಕ್ಷಿ)
- ಬೇಯಿಸಲು ಇಡ್ಲಿ ಪಾತ್ರೆ
ಒಣದ್ರಾಕ್ಷಿ ಮಾಡುವ ವಿಧಾನ:
- ಚೆನ್ನಾಗಿ ಹಣ್ಣಾದ, ತೆಳು ಸಿಪ್ಪೆಯ ದ್ರಾಕ್ಷಿಯನ್ನು ತೆಗೆದುಕೊಳ್ಳಿ.
- ಹಣ್ಣನ್ನು ಬಿಡಿಸಿ, ಚೆನ್ನಾಗಿ ತೊಳೆಯಿರಿ.
- ಇಡ್ಲಿ ಪ್ಲೇಟ್ ನಲ್ಲಿಟ್ಟು ಐದು ನಿಮಿಷ ಆವಿಯಲ್ಲಿ (ಹಬೆಯಲ್ಲಿ) ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ.
- ಒಂದು ಹತ್ತಿಯ ಬಟ್ಟೆ ಅಥವಾ ಟ್ರೇ ಯಲ್ಲಿ ಹರಡಿ.
- ಬಿಸಿಲಿನಲ್ಲಿಟ್ಟು ಒಂದೆರಡು ದಿವಸ ಒಣಗಿಸಿ.
- ಒಣಗಿದ ಮೇಲೆ, ಬಿಸಿಲು ವಾಸನೆ ಹೋಗುವ ಸಲುವಾಗಿ ಒಂದು ದಿನ ಬಿಟ್ಟು ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.