ಗುರುವಾರ, ಫೆಬ್ರವರಿ 25, 2021

Shavige bath recipe in Kannada | ಶಾವಿಗೆ ಬಾತ್ ಮಾಡುವ ವಿಧಾನ

 

Shavige bath recipe in Kannada

Shavige bath recipe in Kannada | ಶಾವಿಗೆ ಬಾತ್ ಮಾಡುವ ವಿಧಾನ 

ಶಾವಿಗೆ ಬಾತ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಶಾವಿಗೆ 
  2. 2 ಕಪ್ ನೀರು
  3. 1 ಟೇಬಲ್ ಚಮಚ ಶೇಂಗಾ
  4. 1/2 ಟೀಸ್ಪೂನ್ ಸಾಸಿವೆ
  5. 1 ಟೀಸ್ಪೂನ್ ಉದ್ದಿನಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1 ಟೇಬಲ್ ಚಮಚ ಗೋಡಂಬಿ
  8. 1 ಸಣ್ಣ ಈರುಳ್ಳಿ
  9. 2 ಟೇಬಲ್ ಚಮಚ ದೊಣ್ಣೆಮೆಣಸು
  10. 1-2 ಹಸಿರು ಮೆಣಸಿನಕಾಯಿ
  11. 5-6 ಕರಿ ಬೇವಿನ ಎಲೆ
  12. 1/4 ಟೀಸ್ಪೂನ್ ಅರಶಿನ ಪುಡಿ
  13. ದೊಡ್ಡ ಚಿಟಿಕೆ ಇಂಗು
  14. 2 ಟೇಬಲ್ ಚಮಚ ಅಡುಗೆ ಎಣ್ಣೆ
  15. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  16. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  17. 2 ಟೇಬಲ್ ಚಮಚ ತೆಂಗಿನತುರಿ
  18. 1 - 2 ಟೀಸ್ಪೂನ್ ನಿಂಬೆರಸ

ಶಾವಿಗೆ ಬಾತ್ ಮಾಡುವ ವಿಧಾನ:

  1. ಶಾವಿಗೆಯನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಶೇಂಗಾ ಹಾಕಿ ಹುರಿಯಿರಿ. 
  3. ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಗೋಡಂಬಿ ಹಾಕಿ ಹುರಿಯಿರಿ. 
  4. ಸಾಸಿವೆ ಸಿಡಿದ ಕೂಡಲೇ ಕರಿಬೇವು ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ.
  5. ಈರುಳ್ಳಿ ಮತ್ತು ದೊಣ್ಣೆಮೆಣಸು ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಮೇಲೆ ಅರಶಿನ ಪುಡಿ, ಇಂಗು ಮತ್ತು ಉಪ್ಪು ಸೇರಿಸಿ. 
  7. ಒಮ್ಮೆ ಮಗುಚಿ ಒಗ್ಗರಣೆಯನ್ನು ಪಕ್ಕಕ್ಕಿಡಿ.  
  8. ನಂತ್ರ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ಶಾವಿಗೆ ಹಾಕಿ ಬೇಯಿಸಿ. 
  9. ಶಾವಿಗೆ ಬೆಂದ ಮೇಲೆ ನೀರು ಬಸಿಯಿರಿ.
  10.  ಬೆಂದ ಶಾವಿಗೆಯನ್ನು ಒಗ್ಗರಣೆ ಇರುವ ಬಾಣಲೆಗೆ ಹಾಕಿ. ಸ್ಟವ್ ಆನ್ ಮಾಡಿ. ಮೇಲಿನಿಂದ ತೆಂಗಿನತುರಿ  ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. 
  11. ಕೊನೆಯಲ್ಲಿ ನಿಂಬೆರಸ ಸೇರಿಸಿ.  ಸ್ಟವ್ ಆಫ್ ಮಾಡಿ. ಒಮ್ಮೆ ಮಗುಚಿ ಬಡಿಸಿ. 


ಗುರುವಾರ, ಫೆಬ್ರವರಿ 18, 2021

Potato upkari recipe in Kannada | ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ

 

Potato upkari recipe in Kannada

Potato upkari recipe in Kannada | ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ 


ಆಲೂ ಉಪ್ಕರಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 3  ಮಧ್ಯಮ ಗಾತ್ರದ ಆಲೂಗಡ್ಡೆ
  2. 1/2 ಚಮಚ ಸಾಸಿವೆ 
  3. ದೊಡ್ಡ ಚಿಟಿಕೆ ಅರಿಶಿನ ಪುಡಿ (ಬೇಕಾದಲ್ಲಿ)
  4. ಎರಡು ದೊಡ್ಡ ಚಿಟಿಕೆ ಇಂಗು
  5. ಸ್ವಲ್ಪ ಕರಿಬೇವಿನ ಎಲೆ
  6. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  7. ನಿಮ್ಮ ರುಚಿ ಪ್ರಕಾರ ಉಪ್ಪು 
  8. 2 ಟೇಬಲ್ ಚಮಚ ಅಡುಗೆ ಎಣ್ಣೆ

 ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ:

  1. ಮೊದಲಿಗೆ ಆಲೂಗಡ್ಡೆ ಸಿಪ್ಪೆ ತೆಗೆದು ತೆಳು ಮತ್ತು ಉದ್ದುದ್ದವಾಗಿ ಕತ್ತರಿಸಿ. 
  2. ನಂತ್ರ ಕತ್ತರಿಸಿದ ಆಲೂಗಡ್ಡೆಯನ್ನು ನೀರಿನಲ್ಲಿ ನಾಲ್ಕೈದು ನಿಮಿಷ ಹಾಕಿಡಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  4. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿಕೊಳ್ಳಿ. 
  5. ಸಾಸಿವೆ ಸಿಡಿದ ಮೇಲೆ ಸ್ಟವ್ ಆಫ್ ಮಾಡಿ. ಅರಿಶಿನ (ಬೇಕಾದಲ್ಲಿ), ಇಂಗು ಮತ್ತು ಅಚ್ಚಖಾರದ ಪುಡಿ ಸೇರಿಸಿ ಮಗುಚಿ. 
  6. ನೀರಲ್ಲಿ ಹಾಕಿಟ್ಟ ಆಲೂಗಡ್ಡೆಯನ್ನು ಸೇರಿಸಿ. 
  7.  ಸ್ಟವ್ ಆನ್ ಮಾಡಿ, ದೊಡ್ಡ ಉರಿಯಲ್ಲಿ ಒಂದು ನಿಮಿಷ ಚೆನ್ನಾಗಿ ಮಗುಚಿ.
  8. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  9. ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಆಲೂಗಡ್ಡೆ ಮೆತ್ತಗಾಗುವವರೆಗೆ ಬೇಯಿಸಿ. ನೀರು ಹಾಕದೇ ಹಾಗೇ ಬೇಯಿಸಬಹುದು. 
  10. ಒಂದೆರಡು ಬಾರಿ ಮಗುಚಿ ಆಲೂಗಡ್ಡೆ ಬೆಂದಿದೆಯಾ ಎಂದು ನೋಡಿ. ನನಗೆ ಸುಮಾರು ಹತ್ತು ನಿಮಷ ಬೇಕಾಯಿತು. 
  11. ಬೆಂದ ಕೂಡಲೇ ಸ್ಟವ್ ಆಫ್ ಮಾಡಿ. ನೀರಿದ್ದಲ್ಲಿ ಉರಿ ಜಾಸ್ತಿ ಮಾಡಿ ನೀರಾರಿಸಿ. ಜಾಸ್ತಿ ಬೇಯಿಸಬೇಡಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಫೆಬ್ರವರಿ 12, 2021

Tomato chitranna recipe in Kannada | ಟೊಮೆಟೊ ಚಿತ್ರಾನ್ನ ಮಾಡುವ ವಿಧಾನ

 

Tomato chitranna recipe in Kannada

Tomato chitranna recipe in Kannada | ಟೊಮೆಟೊ ಚಿತ್ರಾನ್ನ ಮಾಡುವ ವಿಧಾನ 

ಟೊಮೆಟೊ ಚಿತ್ರಾನ್ನ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 3/4 ಕಪ್ ಅಕ್ಕಿ (ಸೋನಾ ಮಸೂರಿ)
  2. 3- 4 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
  3. 1 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 7 - 8 ಕರಿಬೇವಿನ ಎಲೆ
  8. 1 ದೊಡ್ಡ ಈರುಳ್ಳಿ
  9. 2 ದೊಡ್ಡ ಟೊಮೇಟೊ
  10. 1/4 ಟೀಸ್ಪೂನ್ ಅರಿಶಿನ ಪುಡಿ
  11. ದೊಡ್ಡ ಚಿಟಿಕೆ ಇಂಗು
  12. 1 - 2 ಟೇಬಲ್ ಸ್ಪೂನ್ ಸಾಂಬಾರ್ ಪೌಡರ್
  13. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  14. 1 ದೊಡ್ಡ ಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  15. 3 - 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಟೊಮೆಟೊ ಚಿತ್ರಾನ್ನ ಮಾಡುವ ವಿಧಾನ:

  1. ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
  3. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಜೀರಿಗೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
  4. ಸಾಸಿವೆ ಸಿಡಿದ ಕೂಡಲೇ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
  5. ಇಂಗು ಮತ್ತು ಅರಿಶಿನ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ನಂತರ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ. 
  7. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  8. ಅಗತ್ಯವಿದ್ದಲ್ಲಿ ನೀರು ಸೇರಿಸಿ, ಮುಚ್ಚಳ ಮುಚ್ಚಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  9. ಸಾಂಬಾರ್ ಪೌಡರ್ ಸೇರಿಸಿ ಮಗುಚಿ. ರಸಂ ಪೌಡರ್ ಸಹ ಹಾಕಬಹುದು. ಒಮ್ಮೆ ಮಗುಚಿ. 
  10.  ಬೇಯಿಸಿದ ಅನ್ನ ಸೇರಿಸಿ. 
  11. ಕೊತ್ತಂಬರಿ ಸೊಪ್ಪು ಸೇರಿಸಿ. 
  12. ಒಂದು ಚಪ್ಪಟೆಯಾದ ಸಟ್ಟುಗದಿಂದ ಕಲಸಿ. 
  13. ಸ್ಟವ್ ಆಫ್ ಮಾಡಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಫೆಬ್ರವರಿ 9, 2021

Hasi batani snacks recipe in Kannada | ಹಸಿ ಬಟಾಣಿ ಸ್ನಾಕ್ಸ್ ಮಾಡುವ ವಿಧಾನ

 

Hasi batani snacks recipe in Kannada

Hasi batani snacks recipe in Kannada | ಹಸಿ ಬಟಾಣಿ ಸ್ನಾಕ್ಸ್ ಮಾಡುವ ವಿಧಾನ 

ಹಸಿ ಬಟಾಣಿ ಸ್ನಾಕ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ಹಸಿಬಟಾಣಿ 
  2. 1 ಟೇಬಲ್ ಚಮಚ ಬೆಣ್ಣೆ
  3. 1/2 ಟೀಸ್ಪೂನ್ ಜೀರಿಗೆ
  4. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
  5. ಚಿಟಿಕೆ ಇಂಗು
  6. 1/4 - 1/2 ಟೀಸ್ಪೂನ್ ಅಚ್ಚಖಾರದ ಪುಡಿ
  7. 1/4 ಟೀಸ್ಪೂನ್ ಆಮಚೂರ್ ಪುಡಿ (ಅಥವಾ 1/2 ಟೀಸ್ಪೂನ್ ನಿಂಬೆರಸ)
  8. 1/4 ಟೀಸ್ಪೂನ್ ಗರಂ ಮಸಾಲಾ
  9. 1/2 ಟೀಸ್ಪೂನ್ ಧನಿಯಾ ಪುಡಿ
  10.  ಉಪ್ಪು ರುಚಿಗೆ ತಕ್ಕಷ್ಟು

ಹಸಿ ಬಟಾಣಿ ಸ್ನಾಕ್ಸ್ ಮಾಡುವ ವಿಧಾನ:

  1. ಹಸಿಬಟಾಣಿ ಸಿಪ್ಪೆ ಸುಲಿದು ತೊಳೆದಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ. 
  3. ಜೀರಿಗೆ ಸಿಡಿಯಲು ಶುರು ಆದ ಮೇಲೆ ಕತ್ತರಿಸಿದ ಶುಂಠಿ ಸೇರಿಸಿ ಹುರಿಯಿರಿ. 
  4. ನಂತರ ಬಟಾಣಿ ಸೇರಿಸಿ. 
  5. ಎರಡು ನಿಮಿಷ ದೊಡ್ಡ ಉರಿಯಲ್ಲಿ ಹುರಿಯಿರಿ. 
  6. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಅಗತ್ಯವಿದ್ದಲ್ಲಿ ನೀರು ಸೇರಿಸಿ.   
  7. ನಂತ್ರ ಬೇಯಿಸಿದ ಬಟಾಣಿಗೆ ಉಪ್ಪು, ಇಂಗು ಮತ್ತು ಅಚ್ಚಖಾರದ ಪುಡಿ ಸೇರಿಸಿ. 
  8. ಗರಂ ಮಸಾಲಾ, ಅಮಚೂರ್ ಪುಡಿ ಮತ್ತು ಧನಿಯಾ ಪುಡಿಯನ್ನು ಸೇರಿಸಿ. 
  9. ಚೆನ್ನಾಗಿ ಕಲಸಿ, ಸ್ಟವ್ ಆಫ್ ಮಾಡಿ, ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ, ಫೆಬ್ರವರಿ 6, 2021

Thondekai masale palya recipe in Kannada | ತೊಂಡೆಕಾಯಿ ಮಸಾಲೆ ಪಲ್ಯ ಮಾಡುವ ವಿಧಾನ

 

Thondekai masale palya recipe in Kannada

Thondekai masale palya recipe in Kannada | ತೊಂಡೆಕಾಯಿ ಮಸಾಲೆ ಪಲ್ಯ ಮಾಡುವ ವಿಧಾನ 

ತೊಂಡೆಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4kg ತೊಂಡೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. ಸ್ವಲ್ಪ ಕರಿಬೇವಿನ ಎಲೆ
  4. ಚಿಟಿಕೆ ಅರಿಶಿನ ಪುಡಿ
  5.  2 ಟೇಬಲ್ ಚಮಚ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ
  2. 1/2 ಟೀಸ್ಪೂನ್ ಜೀರಿಗೆ
  3. 2 - 3 ಹಸಿಮೆಣಸಿನಕಾಯಿ
  4. ಉಪ್ಪು ರುಚಿಗೆ ತಕ್ಕಷ್ಟು
  5. ಒಂದು ಹಿಡಿ ಕೊತ್ತಂಬರಿ ಸೊಪ್ಪು

ತೊಂಡೆಕಾಯಿ ಪಲ್ಯ ಮಾಡುವ ವಿಧಾನ:

  1. ತೊಂಡೆಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಕರಿಬೇವು  ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ತೊಂಡೆಕಾಯಿ ಹಾಕಿ ಮಗುಚಿ. 
  4. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  5. ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ, ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಜೀರಿಗೆ ತೆಗೆದುಕೊಳ್ಳಿ. 
  6. ಕೊತ್ತಂಬರಿ ಸೊಪ್ಪು ಮತ್ತು ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆದು ಪಕ್ಕಕ್ಕಿಡಿ. 
  7. ಬೇಯುತ್ತಿರುವ ತೊಂಡೆಕಾಯಿಗೆ ಸ್ವಲ್ಪ ನೀರು, ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ.
  8. ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  9. ತೊಂಡೆಕಾಯಿ ಮೆತ್ತಗೆ ಬೆಂದ ಮೇಲೆ ಅರೆದ ಮಸಾಲೆ ಸೇರಿಸಿ. 
  10. ಒಂದೆರಡು ನಿಮಿಷ ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. 
  11. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...