Dali toy recipe in Kannada | ದಾಳಿತೊಯ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 1/2 ಕಪ್ ತೊಗರಿಬೇಳೆ
- ಚಿಟಿಕೆ ಅರಿಶಿನ
- 1/4 ಟೀಸ್ಪೂನ್ ಅಡುಗೆ ಎಣ್ಣೆ
- 1 - 2 ಹಸಿಮೆಣಸಿನಕಾಯಿ
- 1/4 ಟೀಸ್ಪೂನ್ಇಂಗು
- ನಿಮ್ಮ ರುಚಿ ಪ್ರಕಾರ ಉಪ್ಪು
- ಸುಮಾರು ಎರಡು ಕಪ್ ನೀರು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1/2 ಚಮಚ ಸಾಸಿವೆ
- 2 ಟೀಸ್ಪೂನ್ ತೆಂಗಿನ ಎಣ್ಣೆ ಅಥವಾ ಅಡುಗೆ ಎಣ್ಣೆ
ದಾಳಿತೊಯ್ ಮಾಡುವ ವಿಧಾನ:
- ತೊಗರಿಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ.
- ಅರಿಶಿನ, ಸ್ವಲ್ಪ ಎಣ್ಣೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಮೆತ್ತಗೆ ಬೇಯಿಸಿಕೊಳ್ಳಿ. ನಾನು ಒಂದು ಕಪ್ ನೀರು ಹಾಕಿ ಎರಡು ವಿಷಲ್ ಮಾಡಿದೆ.
- ನಂತ್ರ ಹಸಿಮೆಣಸಿನಕಾಯಿ ಸೀಳಿ ಹಾಕಿ ಮತ್ತೊಂದು ವಿಷಲ್ ಮಾಡಿ.
- ಮತ್ತೊಂದು ಕಪ್ ನೀರು ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಕುದಿಯಲು ಶುರು ಆದ ಕೂಡಲೇ, ಇಂಗು ಸೇರಿಸಿ.
- ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆಫ್ ಮಾಡಿ.
- ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
- ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. ಸೂಪ್ ನಂತೆಯೂ ಬಡಿಸಬಹುದು.