Majjige paddu recipe in Kannada | ಮಜ್ಜಿಗೆ ಪಡ್ಡು ಮಾಡುವ ವಿಧಾನ
ಮಜ್ಜಿಗೆ ಪಡ್ಡು ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ದೋಸೆ ಅಕ್ಕಿ
- 1.5 ಕಪ್ ಮಜ್ಜಿಗೆ ಅಥವಾ 1 ಕಪ್ ಮೊಸರು
- 1/4 ಕಪ್ ಅವಲಕ್ಕಿ (ಗಟ್ಟಿ ಅಥವಾ ಮೀಡಿಯಂ)
- 1 ಟೇಬಲ್ ಸ್ಪೂನ್ ಮೆಂತ್ಯ
- ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
- 1 ಚಮಚ ಜೀರಿಗೆ
- ಉಪ್ಪು ರುಚಿಗೆ ತಕ್ಕಷ್ಟು
- 1 ಟೀಸ್ಪೂನ್ ಸಕ್ಕರೆ
ಮಜ್ಜಿಗೆ ಪಡ್ಡು ಮಾಡುವ ವಿಧಾನ:
- ಅಕ್ಕಿ, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆಯಿರಿ.
- ಮಜ್ಜಿಗೆಯಲ್ಲಿ 7 - 8 ಗಂಟೆಗಳ ಕಾಲ ನೆನೆಯಲು ಬಿಡಿ. ಮೊಸರು ಬಳಸುವುದಾದರೆ, ಮೊಸರಿಗೆ ಅರ್ಧ ಕಪ್ ನೀರು ಸೇರಿಸಿ ಮಜ್ಜಿಗೆ ಮಾಡಿಕೊಳ್ಳಿ.
- ನೆನೆಸಿದ ನಂತರ ನೆನೆಸಿದ ಮಜ್ಜಿಗೆ ಸಹಿತ ಮಿಕ್ಸಿ ಜಾರಿಗೆ ಹಾಕಿ.
- ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. ಅರೆಯಲು ಬೇರೆ ನೀರು ಸೇರಿಸುವುದು ಬೇಡ. ಹಿಟ್ಟು ತುಂಬ ಬಿಸಿಯಾಗದಂತೆ ನೋಡಿಕೊಳ್ಳಿ.
- ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.
- ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಕಲಸಿ.
- ಮುಚ್ಚಳ ಮುಚ್ಚಿ 2 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
- ಪಡ್ಡು ಅಥವಾ ಗುಳಿಯಪ್ಪದ ಹೆಂಚನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
- ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ.
- 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ.
- ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ.