Avalakki boondi recipe in Kannada | ಅವಲಕ್ಕಿ ಸಿಹಿ ಸ್ನಾಕ್ಸ್ ಮಾಡುವ ವಿಧಾನ
ಅವಲಕ್ಕಿ ಸಿಹಿ ಸ್ನಾಕ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗಟ್ಟಿ ಅವಲಕ್ಕಿ
- 1/4 ಕಪ್ ಸಕ್ಕರೆ
- 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
- 2 ಟೇಬಲ್ ಚಮಚ ಗೋಡಂಬಿ
- 1 ಟೀಸ್ಪೂನ್ ತುಪ್ಪ
- ಚಿಟಿಕೆ ಉಪ್ಪು
- 2 - 3 ಟೇಬಲ್ ಚಮಚ ನೀರು
ಅವಲಕ್ಕಿ ಸಿಹಿ ಸ್ನಾಕ್ಸ್ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಗಟ್ಟಿ ಅವಲಕ್ಕಿಯನ್ನು ಎಣ್ಣೆ ಹಾಕದೇ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉಬ್ಬಿ ಬರುವವರೆಗೆ ಹುರಿಯಿರಿ. (ನಿಮಗಿಷ್ಟವಿದ್ದರೆ ಎಣ್ಣೆಯಲ್ಲಿಯೂ ಕಾಯಿಸಬಹುದು)
- ಹುರಿದ ಅವಲಕ್ಕಿಯನ್ನು ತೆಗೆದಿಟ್ಟು, ಒಂದು ಚಮಚ ತುಪ್ಪ ಬಿಸಿ ಮಾಡಿ ನೆಲಗಡಲೆ ಅಥವಾ ಶೇಂಗಾ ವನ್ನು ಹುರಿಯಿರಿ.
- ಆಮೇಲೆ ಗೋಡಂಬಿಯನ್ನು ಸೇರಿಸಿ ಹುರಿಯಿರಿ.
- ಎರಡನ್ನು ತೆಗೆದು ಪಕ್ಕಕ್ಕಿಟ್ಟು, ಅದೇ ಬಾಣಲೆಗೆ ಸಕ್ಕರೆ ಮತ್ತು ಉಪ್ಪು ಸೇರಿಸಿ.
- 2 - 3 ಟೇಬಲ್ ಚಮಚ ನೀರು ಸೇರಿಸಿ ಕುದಿಯಲು ಇಡೀ.
- ಗಟ್ಟಿ ಪಾಕ ಮಾಡಿಕೊಂಡು (ಗುಜು ಗುಜು ನೊರೆ ಬರುವವರೆಗೆ), ಹುರಿದಿಟ್ಟ ಅವಲಕ್ಕಿ, ಶೇಂಗಾ ಮತ್ತು ಗೋಡಂಬಿ ಹಾಕಿ ಚೆನ್ನಾಗಿ ಮಗುಚಿ.
- ಸ್ಟವ್ ಆಫ್ ಮಾಡಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ. ಒಂದು ಅರ್ಧ ದಿನ ಬಿಟ್ಟರೆ ರುಚಿ ಚೆನ್ನಾಗಿ ಬರುವುದು.