Avalakki oggarane ready mix recipe in Kannada | ಅವಲಕ್ಕಿ ಒಗ್ಗರಣೆ ರೆಡಿ ಮಿಕ್ಸ್ ಮಾಡುವ ವಿಧಾನ
ಅವಲಕ್ಕಿ ಒಗ್ಗರಣೆ ರೆಡಿ ಮಿಕ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
2 ಕಪ್ ಮೀಡಿಯಂ ಅವಲಕ್ಕಿ
2 ಟೇಬಲ್ ಸ್ಪೂನ್ ಕಡ್ಲೆಕಾಯಿ ಅಥವಾ ಶೇಂಗಾ
1/2 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಉದ್ದಿನಬೇಳೆ
1 ಟೀಸ್ಪೂನ್ ಕಡ್ಲೆಬೇಳೆ
5 - 6 ಗೋಡಂಬಿ
1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
1 ಈರುಳ್ಳಿ
1-2 ಹಸಿರು ಮೆಣಸಿನಕಾಯಿ
7 - 8 ಕರಿ ಬೇವಿನ ಎಲೆ
1/4 ಟೀಸ್ಪೂನ್ ಅರಶಿನ ಪುಡಿ
ಚಿಟಿಕೆ ಇಂಗು
2 ಟೇಬಲ್ ಚಮಚ ಒಣ ಕೊಬ್ಬರಿ ಪುಡಿ ಅಥವಾ ತುರಿ
2 ಟೇಬಲ್ ಚಮಚ ಅಡುಗೆ ಎಣ್ಣೆ
ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
1/2 ಟೀಸ್ಪೂನ್ ಸಕ್ಕರೆ
2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ನಿಂಬೆರಸ
ಅವಲಕ್ಕಿ ಒಗ್ಗರಣೆ ರೆಡಿ ಮಿಕ್ಸ್ ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮೊದಲಿಗೆ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ.
ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಗೋಡಂಬಿ ಹಾಕಿ.
ಸಾಸಿವೆ ಸಿಡಿದ ಕೂಡಲೇ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹೆಚ್ಚಿದ ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
ಈರುಳ್ಳಿ ಮೆತ್ತಗಾದ ಮೇಲೆ ಕೊಬ್ಬರಿ ಪುಡಿ, ಉಪ್ಪು, ಸಕ್ಕರೆ, ಅರಶಿನ ಪುಡಿ ಮತ್ತು ಇಂಗು ಸೇರಿಸಿ. ಸ್ವಲ್ಪ ಹೊತ್ತು ಹುರಿಯಿರಿ.
ನಂತರ ಅವಲಕ್ಕಿ ಸೇರಿಸಿ ಚೆನ್ನಾಗಿ ೫ ನಿಮಿಷ ಸಣ್ಣ ಉರಿಯಲ್ಲಿ ಕೈಯಾಡಿಸಿ.
ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ.
ಪುನಃ ಸ್ವಲ್ಪ ಹೊತ್ತು ಮಗುಚಿ ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಡಬ್ಬದಲ್ಲಿ ಹಾಕಿಡಿ.
ಅವಲಕ್ಕಿ ಒಗ್ಗರಣೆ ಮಾಡಲು, ಅಗತ್ಯವಿದ್ದಷ್ಟು ರೆಡಿ ಮಿಕ್ಸ್ ತೆಗೆದು ಕೊಳ್ಳಿ.
ಅವಲಕ್ಕಿ ಮುಚ್ಚುವಷ್ಟು ಕುದಿಯುವ ನೀರು ಸುರಿದು, ಮುಚ್ಚಳ ಮುಚ್ಚಿ ಎರಡು ನಿಮಿಷ ಬಿಡಿ.