Akki usli recipe in Kannada | ಅಕ್ಕಿ ಉಸ್ಲಿ ಮಾಡುವ ವಿಧಾನ
ಅಕ್ಕಿ ಉಸ್ಲಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ಕಪ್ ಸೋನಾ ಮಸೂರಿ ಅಕ್ಕಿ
- 3 ಕಪ್ ನೀರು
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ದೊಡ್ಡ ಈರುಳ್ಳಿ
- 4-5 ಕರಿ ಬೇವಿನ ಎಲೆ
- 1 ಮಧ್ಯಮ ಗಾತ್ರದ ಕ್ಯಾರಟ್
- 5 - 6 ಬೀನ್ಸ್
- 2 ಟೇಬಲ್ ಚಮಚ ಹಸಿ ಬಟಾಣಿ
- 1 ಮಧ್ಯಮ ಗಾತ್ರದ ಆಲೂಗಡ್ಡೆ
- ದೊಡ್ಡ ಚಿಟಿಕೆ ಅರಶಿನ ಪುಡಿ
- 6-8 ಟೀಸ್ಪೂನ್ ಅಡುಗೆ ಎಣ್ಣೆ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 2 ಟೀಸ್ಪೂನ್ ಬೆಲ್ಲ
- 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಅಕ್ಕಿ ಉಸ್ಲಿ ಮಾಡುವ ವಿಧಾನ:
- ಅಕ್ಕಿಯನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತರಕಾರಿಗಳನ್ನು ಕತ್ತರಿಸಿಟ್ಟು ಕೊಳ್ಳಿ.
- ಒಂದು ಕುಕ್ಕರ್ ಬಿಸಿಮಾಡಿ, ತುಪ್ಪ (ಅಥವಾ ಎಣ್ಣೆ) ಹಾಕಿ. ಸಾಸಿವೆ ಮತ್ತು ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಕರಿಬೇವು ಮತ್ತು ಇಂಗು ಸೇರಿಸಿ.
- ನಂತ್ರ ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಮೇಲೆ ಬಟಾಣಿ ಮತ್ತು ಕತ್ತರಿಸಿದ ತರಕಾರಿಗಳನ್ನು ಹಾಕಿ, ಒಂದೆರಡು ನಿಮಿಷ ಹುರಿಯಿರಿ.
- ನಂತರ ಹುರಿದ ಅಕ್ಕಿಯನ್ನು ತೊಳೆದು ಸೇರಿಸಿ, ಕೈಯಾಡಿಸಿ.
- ಸಾರಿನ ಪುಡಿ ಅಥವಾ ರಸಂ ಪೌಡರ್ ಸೇರಿಸಿ.
- ನೀರು ಮತ್ತು ಅರಶಿನ ಪುಡಿ ಸೇರಿಸಿ ಹುರಿಯಿರಿ. ಈ ಉಸ್ಲಿಗೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತದೆ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ರುಚಿಗೆ ತಕ್ಕಂತೆ ಹುಣಿಸೆರಸ ಮತ್ತು ಬೆಲ್ಲವನ್ನೂ ಸೇರಿಸಿ.
- ಒಮ್ಮೆ ಮಗುಚಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ ಬೇಯಿಸಿ.
- ಕುಕ್ಕರ್ ಒತ್ತಡ ಕಡಿಮೆ ಆದ ಮೇಲೆ, ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು ಉದುರಿಸಿ, ಬಡಿಸಿ.