Golden milk recipe in Kannada | ಗೋಲ್ಡನ್ ಮಿಲ್ಕ್ ಮಾಡುವ ವಿಧಾನ
ಗೋಲ್ಡನ್ ಮಿಲ್ಕ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್ )
- 1 ಕಪ್ ಹಾಲು
- 0.25 ಕಪ್ ನೀರು (ಬೇಕಾದಲ್ಲಿ)
- 1/2 ಚಮಚ ಅರಿಶಿನ
- 1 ಚಮಚ ಮೇಪಲ್ ಸಿರಪ್ ಅಥವಾ ಜೇನುತುಪ್ಪ
- 7 - 8 ಕರಿಮೆಣಸು
- ಒಂದು ಸಣ್ಣ ಚೂರು ಶುಂಠಿ
- ಅರ್ಧ ಬೆರಳುದ್ದ ಚಕ್ಕೆ
ಗೋಲ್ಡನ್ ಮಿಲ್ಕ್ ಮಾಡುವ ವಿಧಾನ:
- ಕರಿಮೆಣಸು, ಚಕ್ಕೆ ಮತ್ತು ಶುಂಠಿಯನ್ನು ಕುಟ್ಟಾಣಿಯಲ್ಲಿ ಜಜ್ಜಿಕೊಳ್ಳಿ.
- ಜಜ್ಜಿದ ಮಸಾಲೆಗಳನ್ನು 1 ಕಪ್ ಹಾಲಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ. ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು.
- ಆಮೇಲೆ ಅರಿಶಿನ ಸೇರಿಸಿ.
- ಹಾಗೆ ಮೇಪಲ್ ಸಿರಪ್ ಸೇರಿಸಿ. ಜೇನುತುಪ್ಪ ಸೇರಿಸುವುದಾದಲ್ಲಿ ಕೊನೆಯಲ್ಲಿ ಸೇರಿಸಬೇಕು.
- ಚೆನ್ನಾಗಿ ಕಲಕಿ, 5 ನಿಮಿಷಗಳ ಕಾಲ ಕುದಿಸಿ.
- ಸೋಸಿ ಕುಡಿಯಲು ನೀಡಿ. ಜೇನುತುಪ್ಪ ಸೇರಿಸುವುದಾದರೆ ಈಗ ಸೇರಿಸಿ.