Majjige saaru recipe in Kannada | ಮಜ್ಜಿಗೆ ಸಾರು ಮಾಡುವ ವಿಧಾನ
ಮಜ್ಜಿಗೆ ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1 ಕಪ್ ಮೊಸರು
- ಸುಮಾರು 1 ಕಪ್ ಮಜ್ಜಿಗೆ
- 1/2 ಚಮಚ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1/2 ಚಮಚ ಕಡ್ಲೆಬೇಳೆ
- 1/2 ಚಮಚ ಉದ್ದಿನಬೇಳೆ
- 1 - 2 ಒಣಮೆಣಸಿನಕಾಯಿ
- 4 - 5 ಜಜ್ಜಿದ ಬೆಳ್ಳುಳ್ಳಿ
- 1 - 2 ಹಸಿಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1 ಈರುಳ್ಳಿ
- 1/2 ಚಮಚ ಶುಂಠಿ
- ದೊಡ್ಡ ಚಿಟಿಕೆ ಅರಿಶಿನ
- ಇಂಗು ಒಂದು ಚಿಟಿಕೆ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1.5 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಮಜ್ಜಿಗೆ ಸಾರು ಮಾಡುವ ವಿಧಾನ:
- ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹೆಚ್ಚಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಮೊಸರು ಮತ್ತು ಉಪ್ಪು ತೆಗೆದುಕೊಂಡು ಕಡೆಯಿರಿ. ಅದಕ್ಕೆ ಒಂದು ಕಪ್ ನೀರು ಸೇರಿಸಿ ಮಜ್ಜಿಗೆ ಮಾಡಿ ಪಕ್ಕಕ್ಕಿಡಿ.
- ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 1/2 ಚಮಚ ಸಾಸಿವೆ ಮತ್ತು 1/2 ಚಮಚ ಜೀರಿಗೆ ಹಾಕಿ.
- ಸಾಸಿವೆ ಸಿಡಿದ ಮೇಲೆ, ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಚೂರು ಮಾಡಿದ ಒಣಮೆಣಸು ಸೇರಿಸಿ.
- ನಂತ್ರ ಜಜ್ಜಿದ ಬೆಳ್ಳುಳ್ಳಿ, ಸೀಳಿದ ಹಸಿಮೆಣಸು ಮತ್ತು ಕರಿಬೇವು ಹಾಕಿ ಹುರಿಯಿರಿ.
- ಹೆಚ್ಚಿದ ಈರುಳ್ಳಿ ಮತ್ತು ಶುಂಠಿ ಸೇರಿಸಿ, ಈರುಳ್ಳಿಯನ್ನು ಹುರಿಯಿರಿ.
- ಜೊತೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ. ಬೇಕಾದಲ್ಲಿ ಸ್ವಲ್ಪ ಎಣ್ಣೆ ಅಥವಾ ಸ್ವಲ್ಪ ನೀರು ಸೇರಿಸಿ, ಈರುಳ್ಳಿಯನ್ನು ಮೆತ್ತಗಾಗುವವರೆಗೆ ಹುರಿಯಿರಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ, ಹುರಿದು ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ, ಉಪ್ಪು ಬೆರೆಸಿದ ಮಜ್ಜಿಗೆ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.