Tomato sasive recipe in kannada | ಟೊಮೇಟೊ ಸಾಸಿವೆ ಮಾಡುವ ವಿಧಾನ
ಟೊಮೇಟೊ ಸಾಸಿವೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ದೊಡ್ಡ ಗಾತ್ರದ ಟೊಮೇಟೊ ಹಣ್ಣು
- 1/4 - 1/2 ಕಪ್ ಮೊಸರು
- 2 ಒಣಮೆಣಸಿನಕಾಯಿ
- 1/2 ಕಪ್ ತೆಂಗಿನ ತುರಿ
- 1/2 ಟೀಸ್ಪೂನ್ ಸಾಸಿವೆ
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 4 -5 ಕರಿಬೇವು
- ಸ್ವಲ್ಪ ಉದ್ದಿನಬೇಳೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಟೊಮೇಟೊ ಸಾಸಿವೆ ಮಾಡುವ ವಿಧಾನ:
- ಸಣ್ಣಗೆ ಕತ್ತರಿಸಿದ ಟೊಮ್ಯಾಟೊವನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ.
- ಅದಕ್ಕೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಹಿಸುಕಿ ಕಲಸಿ.
- ಮೊಸರನ್ನು ಸೇರಿಸಿ, ಮಗುಚಿ ಪಕ್ಕಕ್ಕಿಡಿ.
- ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಅರೆದ ತೆಂಗಿನಕಾಯಿ-ಮೆಣಸು-ಸಾಸಿವೆಯನ್ನು ಹಿಸುಕಿದ ಟೊಮೇಟೊ-ಮೊಸರು ಮಿಶ್ರಣಕ್ಕೆ ಸೇರಿಸಿ. ಚೆನ್ನಗಿ ಕಲಸಿ.
- ಎಣ್ಣೆ, ಮೆಣಸಿನಕಾಯಿ, ಕರಿಬೇವು, ಉದ್ದಿನಬೇಳೆ ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.